ವಿಜಯಪುರ (ಮಾ. 05): ಏರ್‌ಸ್ಟ್ರೈಕ್‌ಗೆ ಸಾಕ್ಷಿ ಕೇಳುವವರನ್ನು ವಿಮಾನದಲ್ಲಿ ಒಯ್ದು ಪಾಕಿಸ್ತಾನಕ್ಕೆ ಒಗೆಯಿರಿ. ಅವರು ಅಲ್ಲಿಯೇ ಭಾರತೀಯ ಸೇನೆಯ ಪರಾಕ್ರಮ ವೀಕ್ಷಿಸಲಿ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಫ್‌-16 ಹೊಡೆಯಲು ಮಿಗ್‌ ಬಳಸಿದ್ದೇಕೆ?: ಧನೋವಾ ನೀಡಿದ ಅಚ್ಚರಿಯ ಉತ್ತರ!

ಸರ್ಜಿಕಲ್‌ ಸ್ಟ್ರೈಕ್ ಸಂಭ್ರಮಾಚರಣೆ ಕುರಿತು ಸಿಎಂ ಹೇಳಿಕೆ ಖಂಡನೀಯ. ಭಾರತೀಯರು ಆಟದಲ್ಲಿ ಗೆದ್ದಾಗ, ಸರ್ಜಿಕಲ್‌ ಸ್ಟ್ರೈಕ್ ನಡೆಸಿದಾಗ ಸಂಭ್ರಮಿಸಬಾರದೇ? ಸೀತಾರಾಮ ಕಲ್ಯಾಣ ಸಿನಿಮಾ ನೋಡಿ ಸಂಭ್ರಮಿಸಬೇಕಾ? ಎಂದು ಲೇವಡಿ ಮಾಡಿದರು. ತಕ್ಷಣ ಸಿಎಂ ಕ್ಷಮೆ ಕೇಳಬೇಕು. ಇಂತಹ ಮುಖ್ಯಮಂತ್ರಿಗಳನ್ನು ನೂರು ಮಂದಿ ನೋಡಿದ್ದೇವೆ. ಮುಂದಿನ ಬಾರಿ ಸಿಎಂ ಕುಮಾರಸ್ವಾಮಿ ಮನೆ ಎದುರು ಪಟಾಕಿ ಹಚ್ಚಿ ಸಂಭ್ರಮ ಮಾಡುತ್ತೇವೆ ಎಂದು ಕಿಡಿಕಾರಿದರು.