ಇದೊಂದು ವಿಡಿಯೋ ಶ್ವಾನ ಮತ್ತು ಮಾನವನ ನಡುವಿನ ಪ್ರೀತಿಯ ಕತೆ ಹೇಳುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ನಮ್ಮ ಕಣ್ಣುಗಳನ್ನು ಒಂದು ಕ್ಷಣ ಒದ್ದೆ ಮಾಡಬಲ್ಲದು.
ಶ್ವಾನಗಳು ಮಾನವನೊಂದಿಗೆ ಯಾವ ರೀತಿಯ ಆತ್ಮೀಯ ಸಂಬಂಧ ಇಟ್ಟುಕೊಳ್ಳುತ್ತವೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಗಾಯಗೊಂಡಿದ್ದ ಬೀದಿ ನಾಯಿಯೊಂದು ಔಷಧ ಮಳಿಗೆಗೆ ತೆರಳಿ ತಾನೇ ಮುಂದಾಗಿ ಚಿಕಿತ್ಸೆಗೆ ಸಹಕಾರ ನೀಡುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೂತಿಟ್ಟಿದ್ದ ಮಗು ಪತ್ತೆ ಮಾಡಿದ ಶ್ವಾನ ಮಹಾರಾಜ!
ಸೋಶಿಯಲ್ ಮೀಡಿಯಾದಲ್ಲಿ ಅನೇಕರ ಕಣ್ಣು ಒದ್ದೆ ಮಾಡಲು ಈ ಶ್ವಾನ ಪ್ರಕರಣ ಕಾರಣವಾಗಿದೆ. ತುರ್ಕೆಯ್ ನ ಫಾರ್ಮಾಸಿಸ್ಟ್ ಒಬ್ಬರು ಹಂಚಿಕೊಂಡಿರುವ ವಿಡಿಯೋ ಶ್ವಾನಪ್ರೀತಿಯ ಕತೆ ಹೇಳಿದೆ.
ಗಾಯಗೊಂಡಿರುವ ತನ್ನ ಕಾಲನ್ನು ಶ್ವಾನ ಅದಾಗಿಯೇ ಫಾರ್ಮಾಸಿಸ್ಟ್ ಗೆ ತೋರಿಸಿ ಔಷಧ ಉಪಚಾರ ಮಾಡುವಂತೆ ಕೇಳಿಕೊಳ್ಳುತ್ತದೆ. ನೀವು ಒಮ್ಮೆ ಶ್ವಾನದ ಮುಗ್ಧತೆಯ ವಿಡಿಯೋ ನೋಡಿಕೊಂಡು ಬನ್ನಿ...
