ಮಾನವನ ಕ್ಷುಲ್ಲಕ ಆಸೆಗೆ ಬಲಿಯಾದ ಮೂಕ ಜೀವ/ ಕೃಶವಾಗಿದ್ದ ಆನೆ ಹತ್ಯೆ ಮಾಡಿದ್ದು ಯಾರು? ಹೊರಲಾರಷ್ಟು ಭಾರ ಹೊರಸಿದರೆ ದುರುಳ ಮಾನವರು?

ಕೊಲಂಬೋ[ಸೆ. 25]  ಅಯ್ಯೋ ಕತೆಯೇ.. ಹೀಗೆ ಯಾಕೆ ಹೇಳಿದ ಗೊತ್ತಾ? ಈ ನಿಜಕತೆಯಲ್ಲಿ ಬರುವ ನಮ್ಮ ನಾಯಕನ ಜೀವನ ಹಾಗೇ ಅಂತ್ಯವಾಗಿದೆ. ಈ ಕತೆಯ ಹೀರೋ ಒಂದು ಆನೆ..ಎಲ್ಲ ಘಟನಾವಳಿಗಳಿ ನಡೆದಿದ್ದು ಶ್ರೀಲಂಕಾದಲ್ಲಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಶಿಯಲ್ ಮೀಡಿಯಾದಲ್ಲಿ ಈಗ ಈ ಆನೆಯದ್ದೇ ಸುದ್ದಿ. ಸೇವ್ ಎಲಿಫಂಟ್ ಫೌಂಡೇಶನ್ ಅಧ್ಯಕ್ಷ ಲೆಖ್ ಚಾಲೆರ್ಟ್ ಇಸ್ಟಾಗ್ರ್ಯಾಮ್ ನಲ್ಲಿ ಪೋಟೋ ಶೇರ್ ಮಾಡಿದ್ದು ಇಡೀ ಪ್ರಪಂಚದಾದ್ಯಂತ ಪ್ರಾಣಿ ಪ್ರಿಯರ ಮನ ಕೆಡಿಸಿದೆ.

ಕೃಶನಾಗಿದ್ದ ಶ್ರೀಲಂಕಾದ ಆನೆ 70 ವರ್ಷದ ಆನೆ ಟಿಕಿರಿಯನ್ನು ಬಲಾತ್ಕಾರಯುತವಾಗಿ ಹಬ್ಬಕ್ಕೆ ಬಳಸಿಕೊಳ್ಳಲಾಗಿದ್ದು. ಆನೆಯ ಮೇಲೆ ಹೊರಲಾರದಷ್ಟು ಮಾನವ ನಿರ್ಮಿತ ಅಲಂಕಾರಿಕ ವಸ್ತುಗಳನ್ನು ಹೇರಲಾಗಿತ್ತು. 

ಮೀನುಗಾರನ ಬಲೆಗೆ ಬಿದ್ದ ರಷ್ಯಾದಿಂದ ತರಬೇತಿ ಪಡೆದ ತಿಮಿಂಗಿಲ!

ಉಸಿರಾಟ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದ ಆನೆಯನ್ನು ಮಾನವರು ತಮ್ಮ ದುರಾಸೆಗೆ ಬಲಿ ಕೊಟ್ಟಿದ್ದಾರೆ. ಪ್ರವಾಸಿಗರು ಸಹ ಇನ್ನು ಮುಂದೆ ಎಚ್ಚರಿಕೆ ವಹಿಸಬೇಕು ಎಂದು ಆನೆ ಸಂರಕ್ಷಣಾ ಹೋರಾಟದ ಪಡೆ ಕೇಳಿಕೊಂಡಿದೆ.

View post on Instagram