ನಾರ್ವೆಯಲ್ಲಿ ಸೆರೆಸಿಕ್ಕ ಮಿಲಿಟರಿ ತರಬೇತಿ ಪಡೆದ ತಿಮಿಂಗಿಲ| ರಷ್ಯಾಮಿಲಿಟರಿಯಿಂದ ತರಬೇತಿ ಪಡೆದ ಗುಮಾನಿ| ನಾರ್ವೆ ಮೀನುಗಾರಿನಿಗೆ ಸಮುದ್ರದಲ್ಲಿ ಸೆರೆಸಿಕ್ಕ ಬೆಲುಗಾ ತಿಮಿಂಗಿಲ|
ಒಸ್ಲೋ(ಏ.30): ರಷ್ಯಾದ ಮಿಲಿಟರಿಯಿಂದ ತರಬೇತಿ ಪಡೆದಿದೆ ಎನ್ನಲಾದ ಬೆಲುಗಾ ತಿಮಿಂಗಿಲೊಂದನ್ನು ನಾರ್ವೆಯ ಮೀನುಗಾರನೋರ್ವ ಸೆರೆ ಹಿಡಿದಿದ್ದಾನೆ.
ಇಲ್ಲಿನ ಇಂಗೋಯಾ ಐಲ್ಯಾಂಡ್ ಬಳಿ ರಷ್ಯಾ ಮಿಲಿಟರಿ ಸರಂಜಾಮು ಹೊತ್ತ ಬೆಲುಗಾ ತಿಮಿಂಗಿಲು ಪ್ರತ್ಯಕ್ಷವಾಗಿದ್ದು, ಮೀನುಗಾರ ಜೋರ್ ಹೆಸ್ಟನ್ ಎಂಬಾತ ಈ ತಿಮಿಂಗಿಲನ್ನು ಸೆರೆ ಹಿಡಿದಿದ್ದಾನೆ.
ಈ ಕುರಿತು ಮಾಹಿತಿ ನೀಡಿರುವ ನಾರ್ವೆಯ ಮೀನುಗಾರಿಕಾ ಇಲಾಖೆಯ ನಿರ್ದೇಶಕ ಜಾರ್ಜನ್ ರಿ ವಿಗ್, ಬೆಲುಗಾ ತಿಮಿಂಗಿಲಿನ ಕತ್ತಿನಲ್ಲಿ ರಷ್ಯಾ ಮಿಲಿಟರಿಯ ಕ್ಯಾಮರಾ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ರಷ್ಯಾದ ಮಿಲಿಟರಿ ತಿಮಿಂಗಿಲಗಳಿಗೆ ತರಬೇತಿ ನೀಡುತ್ತಿದ್ದು, ಬಹುಶಃ ಇದು ಮಿಲಿಟರಿ ಕ್ಯಾಂಪ್‌ನಿಂದ ತಪ್ಪಿಸಿಕೊಂಡು ಸಮುದ್ರ ಸೇರಿರಬಹುದು ಎಂದು ಅಂದಾಜಿಸಲಾಗಿದೆ.
