ಬೆಂಗಳೂರು[ಮಾ. 21]   ಕಲ್ಬುರ್ಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಗೆ ಸಂಕಷ್ಟ ಎದುರಾಗಿದೆ. ಕಾಂಗ್ರೆಸ್ ನಿಂದ ಗೆದ್ದು ಶಾಸಕರಾಗಿದ್ದ ಜಾಧವ್ ರಾಜೀನಾಮೆ ಸಲ್ಲಿಸಿದ್ದರು. ಆದರೆ ಸ್ಪೀಕರ್ ರಮೇಶ್ ಕುಮಾರ್ ರಾಜೀನಾಮೆ ಇನ್ನು ಅಂಗೀಕಾರ ಮಾಡಿಲ್ಲ.

ವಿಚಾರಣೆಗೆ ಹಾಜರಾಗುವಂತೆ ಉಮೇಶ್ ಜಾಧವ್ ಗೆ ನೊಟೀಸ್ ನೀಡಲಾಗಿದೆ. ಕಾಂಗ್ರೆಸ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಮಾರ್ಚ್ 25 ರಂದು ಬೆಳಿಗ್ಗೆ ವಿಚಾರಣೆಗೆ ಬರಲು ಜಾಧವ್ ಗೆ ಸೂಚನೆ ನೀಡಲಾಗಿದೆ.

ಬಿಜೆಪಿ ಮೊದಲ ಪಟ್ಟಿ ಅಚ್ಚರಿ, ಕರ್ನಾಟಕದ 21 ಕ್ಷೇತ್ರದ ಅಭ್ಯರ್ಥಿಗಳು ಪಕ್ಕಾ

ಶಾಸಕ ಸ್ಥಾನಕ್ಕೆ ರಾಜೀಮಾಮೆ ನೀಡಿ  ಒಂದು ಕಾಲದ ಗುರು ಮಲ್ಲಿಕಾರ್ಜುನ ಖರ್ಗೆ ಎದುರೆ ಜಾಧವ್ ಸ್ಪರ್ಧೆಗೆ ಇಳಿದಿದ್ದಾರೆ. ಅವರ ಅನರ್ಹತೆ ವಿಚಾರ ಯಾವ ತೀರ್ಮಾನಕ್ಕೆ ಬರುತ್ತದೆ ಎಂಬ ಕುತೂಹಲ ಮೂಡಿದೆ.