ಆಜಂ ಭೇಟಿಗಾಗಿ ವರನ ವೇಷ ಧರಿಸಿದ ಎಸ್ಪಿ ನಾಯಕ| ನವವರನಂತೆ ವೇಷ ಧರಿಸಿ ಬಂದ ಅವರದ್ದೇ ಪಕ್ಷದ ನಾಯಕ ಫಿರೋಜ್‌ 

ನವದೆಹಲ;ಇ[ಸೆ.15]: 80ಕ್ಕೂ ಹೆಚ್ಚು ಕೇಸಿನಲ್ಲಿ ಸಿಕ್ಕಿಹಾಕಿಕೊಂಡಿರುವ ಉತ್ತರಪ್ರದೇಶದ ಎಸ್‌ಪಿ ನಾಯಕ ಆಜಂ ಖಾನ್‌ ಅವರನ್ನು ಭೇಟಿ ಮಾಡಲು ಅವರದ್ದೇ ಪಕ್ಷದ ನಾಯಕ ಫಿರೋಜ್‌ ನವವರನಂತೆ ವೇಷ ಧರಿಸಿ ಬಂದ ಘಠನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಲವು ಎಸ್‌ಪಿ ನಾಯಕರು ಆಜಂಖಾನ್‌ಗೆ ಬೆಂಬಲ ಸೂಚಿಸಲು ಆಗಮಿಸುತ್ತಿರುವ ಕಾರಣ ರಾಂಪುರದಲ್ಲಿ ಆಜಂ ಮನೆ ಮುಂದೆ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

ಎಮ್ಮೆ ಬಳಿಕ ಆಜಂ ಖಾನ್ ವಿರುದ್ಧ ಮೇಕೆ ಕಳ್ಳತನದ ಆರೋಪ!

ಎಸ್‌ಪಿ ನಾಯಕರನ್ನು ಮನೆ ಬಳಿಗೆ ಸುಳಿಯಬಿಡುತ್ತಿಲ್ಲ. ಈ ವಿಷಯದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಎಸ್‌ಪಿ ನಾಯಕ ಪಿರೋಜ್‌ಖಾನ್‌ ಮದುವೆಗೆ ಸಿದ್ಧನಾಗಿ ಹೊರಟ ವರನಂತೆ ಮುಖಕ್ಕೆ ಹೂವಿನ ಹಾರ ಮುಚ್ಚಿಕೊಂಡು ಆಜಂ ಮನೆಯತ್ತ ಹೊರಟ್ಟಿದ್ದರು.

ಆದರೆ ಫಿರೋಜ್‌ ಬಣ್ಣ ಬಯಲು ಮಾಡಿದ ಪೊಲೀಸರು ಅವರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ.