ಶಾರ್ಜಾ[ನ.02] ನಟ, ನಿರ್ದೇಶಕ ಪ್ರಕಾಶ್ ರಾಜ್ ಬರೆದಿರುವ  ‘ಇರುವುದೆಲ್ಲವ ಬಿಟ್ಟು’ ಪುಸ್ತಕದ ಮಲಯಾಳಂ ಅವತರಿಣಿಕೆ ಬಿಡುಗಡೆಯಾಗಲಿದೆ. ಶಾರ್ಜಾ ಎಕ್ಸ್ಪೋ ಸೆಂಟರ್ ನಲ್ಲಿ ಪುಸ್ತಕ ಅನಾವರಣವಾಗಲಿದೆ. 

ನಟ ಪ್ರಕಾಶ್ ರಾಜ್ ಅವರೊಂದಿಗೆ ಸಂವಾದ ಸಹ ಏರ್ಪಡಿಸಲಾಗಿದೆ.  ಪ್ರಕಾಶ್ ರಾಜ್ ಬರೆದಿರುವ ಮೊದಲ ಕನ್ನಡ ಪುಸ್ತಕ ಇದಾಗಿತ್ತು. ಅದನ್ನೇ ಮಲೆಯಾಳಂಗೆ ಭಾಷಾಂತರ ಮಾಡಲಾಗಿದೆ. ಪ್ರಕಾಶ್ ಇಲ್ಲಿಯವರೆಗೆ ಬರೆದಿರುವ ಅಂಕಣಗಳ ಒಟ್ಟು ರೂಪ ಇಲ್ಲಿದೆ.  

‘ಇರುವುದೆಲ್ಲವ ಬಿಟ್ಟು’ ಪ್ರಕಾಶ್ ರಾಜ್ ಅಂಕಣಗಳ ಗುಚ್ಛ

ನವೆಂಬರ್ 3, ಶನಿವಾರ ಎಕ್ಸ್ಪೋ ಸೆಂಟರ್ ನ ಇಂಟಲೆಕ್ಚುವಲ್ ಹಾಲ್ ನಲ್ಲಿ ರಾತ್ರಿ 7 ಗಂಟೆಯಿಂದ 8 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ. ಸಮಾಜದ ನೂರೆಂಟು ಮುಖಗಳು, ಸಿನಿಮಾ ಜಗತ್ತಿನ ಒಳ ಹೊರಗು, ಕಲಾವಿದ ರೂಪುಗೊಳ್ಳುವ ಬಗೆ ಎಲ್ಲವನ್ನು ಪುಸ್ತಕ ಒಳಗೊಂಡಿದ್ದು ಒಂದು ಸಾಹಿತ್ಯದ ಅನುಭವಕ್ಕೆ ಶಾರ್ಜಾ ವೇದಿಕೆಯಾಗಲಿದೆ.