ಪ್ರಕಾಶ್ ರೈ ಪುಸ್ತಕ ಲೋಕಾರ್ಪಣೆ

First Published 4, Feb 2018, 10:24 PM IST
Prakash rai Book Relesed at Bangalore
Highlights

ಇದು ಪ್ರಕಾಶ್ ರಾಜ್ ಬರೆದಿರುವ ಮೊದಲ ಪುಸ್ತಕವಾಗಿದ್ದು, ಅವರು ಇಲ್ಲಿಯವರೆಗೆ ಬರೆದಿರುವ ಅಂಕಣಗಳ ಒಟ್ಟು ರೂಪವಾಗಿದೆ.

ನಟ, ನಿರ್ದೇಶಕ ಪ್ರಕಾಶ್ ರೈ ಬರೆದಿರುವ ‘ಇರುವುದೆಲ್ಲವ ಬಿಟ್ಟು'  ಪುಸ್ತಕ ಲೋಕಾರ್ಪಣೆಗೊಂಡಿದೆ. ಇಂದು ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಹಾಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಕಾಶ್ ರೈ ಗುರುಗಳಾದ ಹೆಚ್.ಎಸ್ ವೆಂಕಟೇಶ್ ಮೂರ್ತಿಯವರು ಪುಸ್ತಕ ಬಿಡುಡೆಗೊಳಿಸಿದರು.

ಇದು ಪ್ರಕಾಶ್ ರಾಜ್ ಬರೆದಿರುವ ಮೊದಲ ಪುಸ್ತಕವಾಗಿದ್ದು, ಅವರು ಇಲ್ಲಿಯವರೆಗೆ ಬರೆದಿರುವ ಅಂಕಣಗಳ ಒಟ್ಟು ರೂಪವಾಗಿದೆ. ಇನ್ನು ಕಾರ್ಯಕ್ರಮದಲ್ಲಿ ರಂಗಭೂಮಿ ಕಾಲವಿದೆ ವಿಜಯಮ್ಮ, ಸಾಹಿತಿ ಜಯಂತ್ ಕಾಯ್ಕಿಣಿ, ಚಿತ್ರನಟ ಸುದೀಪ್, ಪತ್ರಕರ್ತ ಜೋಗಿ,  ನಟ ಅಚ್ಚುತನ್ ಸೇರಿದಂತೆ ಚಿತ್ರನಟಿ ಶೃತಿ ಹರಿಹರನ್ ಭಾಗಿಯಾಗಿ ಪುಸ್ತಕದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

loader