ನವದೆಹಲಿ, (ಸೆ.28): ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಸ್ಥಾನದಿಂದ ರಮ್ಯಾ ಅವರಿಗೆ ಗೇಟ್ ಪಾಸ್ ನೀಡಲಾಗಿದೆ.

2014ರಲ್ಲಿ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯನ್ನಾಗಿ ರಮ್ಯಾ ಅವರನ್ನು  ನೇಮಕ ಮಾಡಲಾಗಿತ್ತು.  ಈಗ ರಮ್ಯಾ ಜಾಗಕ್ಕೆ ರೋಹನ್​ ಗುಪ್ತಾ ಅವರನ್ನು  ಎಐಸಿಸಿ ನೇಮಕ ಮಾಡಿದೆ. 

ದುಬೈನಲ್ಲಿ ಮೋಹಕತಾರೆ ರಮ್ಯಾ ಮದುವೆ? ಹುಡುಗ ಎಲ್ಲರಿಗೂ ಗೊತ್ತು!

ಕಳೆದ ಮೂರು ತಿಂಗಳಿನಿಂದ ಆ ಸ್ಥಾನದ ಮುಖ್ಯಸ್ಥರಾಗಿ ಯಾರೂ ಇರಲಿಲ್ಲ. ಇಂದು (ಶನಿವಾರ) ಅಧಿಕೃತವಾಗಿ ರಮ್ಯಾ ಅವರನ್ನು ತೆಗೆದುಹಾಕಿರುವ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ರೋಹನ್​ ಗುಪ್ತಾ ಅವರನ್ನು ನೇಮಕ ಮಾಡಿದ್ದಾರೆ. 

ರೋಹನ್​ ಗುಪ್ತಾ ಮೂಲತಃ ಅಹ್ಮದಾಬಾದ್​ನವರಾಗಿದ್ದು, ಗುಜರಾತ್​ನ ಕಳೆದ ವಿಧಾನಸಭಾ ಚುನಾವಣೆ ವೇಳೆ ಪಕ್ಷದ ಪರ ಸಾಮಾಜಿಕ ಜಾಲತಾಣದ  ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.  ಅಲ್ಲದೆ ಎಐಸಿಸಿಯ ರಾಷ್ಟ್ರೀಯ ಮಾಧ್ಯಮ ಸಂಯೋಜಕರಾಗಿದ್ದರು.

ರಮ್ಯಾ ಎಲ್ಲಿದ್ದೀಯಮ್ಮಾ? ವೋಟ್ ಮಾಡಮ್ಮಾ!: ಮತ ಹಾಕದೆ ಹ್ಯಾಟ್ರಿಕ್ ಸಾಧನೆ

ರಮ್ಯಾ ಲೋಕಸಭಾ ಚುನಾವಣೆ ವೇಳೆಗೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ ಅದ್ಯಾವುದು ಎಐಸಿಸಿ ಅಧಿಕೃತಗೊಳಿಸಿಲ್ಲ.

ಆಗಾಗ ಟ್ವಿಟ್ಟರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದ್ರೆ, ಅದ್ಯಾಕೋ ಏನೋ ಟ್ವಿಟರ್ ಖಾತೆಯನ್ನೂ ಸಹ ಡಿಲೀಟ್ ಮಾಡಿದ್ದು,  ಸದ್ಯಕ್ಕಂತೂ ಎಲ್ಲಿ ಕಾಣಿಸಿಕೊಂಡಿಲ್ಲ.