ಹಾವೇರಿ(ಮಾ.16): ಸರಿಗಮಪ ಖ್ಯಾತಿಯ ಸಿಂಗರ್ ಹನುಮಂತ ಹಾಡಿನ ಮೂಲಕೇ ಕನ್ನಡಿಗರ ಮನಗೆದ್ದಿದ್ದಾರೆ. ಮುಗ್ಧ ಹಳ್ಳಿ ಹುಡುಗನಾಗಿ, ಅದ್ಭುತ ಕಂಠಸಿರಿ ಮೂಲಕ ಜನಪ್ರಿಯ ತಾರೆಯಾಗಿರುವ ಹನುಮಂತ ಸಂತ ಶಿಶುನಾಳ ಷರೀಪರ ಜಾತ್ರೆಯಲ್ಲಿ ಸಂಕಷ್ಟಕ್ಕೆ ಸಿಲುಕಿದರು. ಜಾತ್ರೆಯಲ್ಲಿ ಹನುಮಂತ ಮೊಬೈಲ್ ಕಳ್ಳತನ ಮಾಡಲಾಗಿದೆ.

ಇದನ್ನೂ ಓದಿ: ಹಳ್ಳಿ ಹಕ್ಕಿ ಹನುಮಂತ ಈಗ ಏನ್ಮಾಡ್ತಿದ್ದಾನೆ?

ಚಿಲ್ಲೂರು ಬಡ್ನಿಯಿಂದ ಸಂತಶಿಶುನಾಳ ಷರೀಪರ ಜಾತ್ರೆಗೆ ತೆರಳಿದ್ದಾಗ ಈ ಘಟನೆ ನಡೆದಿದೆ.  ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುವ ವೇಳೆ ಹನುಮಂತ ಮೊಬೈಲ್‌ನ್ನು ಕಳ್ಳರು ಎಗರಿಸಿದ್ದಾರೆ. ತಕ್ಷಣವೇ ಪೊಲೀಸರು ಆಡಳಿತ ಮಂಡತಿ ಮೈಕ್ ನಲ್ಲಿ ಅನೌನ್ಸ್ ಮಾಡಿದ್ರು. ಆದರೆ ಮೊಬೈಲ್ ಮಾತ್ರ ಸಿಗಲಿಲ್ಲ.

ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಹನುಮಂತನ ಹವಾ, ಯಾರೀತ? ಎಲ್ಲಿಂದ ಬಂದವ?

ಮೊಬೈಲ್ ಕಳೆದುಕೊಂಡ ಹನುಮಂತ ಕೊನೆ ಪಕ್ಷ ಸಿಮ್ ಆದ್ರೂ ವಾಪಾಸ್ ನೀಡಲು ಹಾಡಿನ ಮೂಲಕ ಮನಿವಿ ಮಾಡಿದರೂ. ಹಾಡು ಹೇಳಿ ಪ್ರೇಕ್ಷಕರನ್ನು ರಂಜಿಸಿದ ಹನುಮಂತು ಡೀ ಜಾತ್ರೆಗೆ ಸೆಲಬ್ರಟಿಯಾಗಿದ್ದರು. ಆದರೆ ಮೊಬೈಲ್ ಕಳ್ಳತನವಾಗಿರೋದು ಹನುಮಂತ ಬೇಸರಕ್ಕೆ ಕಾರಣವಾಗಿದೆ.