Asianet Suvarna News Asianet Suvarna News

ಸೋಶಿಯಲ್ ಮೀಡಿಯಾದಲ್ಲಿ ಹನುಮಂತನ ಹವಾ, ಯಾರೀತ? ಎಲ್ಲಿಂದ ಬಂದವ?

ಖಾಸಗಿ ಮನರಂಜನಾ ವಾಹಿನಿಯೊಂದರ ಸಂಗೀತ ಸ್ಪರ್ಧೆಗೆ ಆಯ್ಕೆಯಾದ ಹಾವೇರಿಯ ಮುಗ್ಧ ಹುಡುಗ ಹನುಮಂತ ಸದ್ಯ ಸೋಶಿಯಲ್ ಮೀಡಿಯಾದಲ್ಲಿನ ಟ್ರೆಂಡ್. ಆತನ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಳ್ಳಬೇಡಿ ಎಂಬ ಆಗ್ರಹವೂ ಕೇಳಿ ಬಂದಿದೆ. ಇದೇ ರೀತಿಯ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ ಹೆಸರು ಗಳಿಸಿದ್ದ ರಾಜೇಶ್ ಅಂತಿಮವಾಗಿ ಬಾರದ ಲೋಕಕ್ಕೆ ತೆರಳಿದ್ದನ್ನು ಸೋಶಿಯಲ್ ಮೀಡಿಯಾ ನೆನಪು ಮಾಡಿಕೊಂಡಿದೆ.

saregamapa Singer hanumantha Song Goes Viral Haveri
Author
Bengaluru, First Published Oct 1, 2018, 6:47 PM IST
  • Facebook
  • Twitter
  • Whatsapp

ಬೆಂಗಳೂರು[ಅ.1]  ದಕ್ಷಿಣ ಭಾರತದ ಸಂಗೀತ ಮಾಂತ್ರಿಕ ಹಂಸಲೇಖ ಅವರೇ ಸ್ಥಳದಿಂದ ಎದ್ದು ನಿಂತು ತಾವು ಹಾಕಿಕೊಂಡಿದ್ದ ಶಾಖನ್ನು ಹನುಮಂತನಿಗೆ ಹಾಕಿ ಆತನ ಟವೆಲ್ ತಮ್ಮ ಹೆಗಲಿಗೆ ಹಾಕಿಕೊಂಡರು.

ಜಾನಪದ ಲೋಕದ ಜ್ಞಾನಿಗಳು ಕಂಡ ಕನಸು ನನಸಾಗುತ್ತಿದೆ. ದೂರದ ಹಳ್ಳಿಯಲ್ಲಿ ಕುರಿ ಮೇಯಿಸುತ್ತಿದ್ದವ ಇಂದು ಸಂಗೀತ ಸ್ಪರ್ಧೆತ ಆಡಿಷನ್ ನಲ್ಲಿ ಪಾಲ್ಗೊಂಡು ಆಯ್ಕೆ ಯಾಗುತ್ತಿರುವುದಕ್ಕಿಂತ ಇನ್ನೇನು ಬೇಕು ಎಂದರು?

ಗಾಯಕನ ಹೆಸರು ಹನುಮಂತ, ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರಬಡ್ನಿ ತಾಂಡಾದಿಂದ ಖಾಸಗಿ ವಾಹಿನಿ ನಡೆಸಿ ಕೊಡುತ್ತಿರುವ ರಿಯಾಲಿಟಿ ಶೋದಲ್ಲಿ ಭಾಗವಹಿಸಿಲು ಬಂದಿದ್ದಾರೆ.  ಆತನ ಹಾಡನ್ನು ಮೆಚ್ಚಿ ಕಾರ್ಯಕ್ರಮದ ನಿರ್ಣಯಕಾರರು ಹೊಗಳುತ್ತಿದ್ದರೆ ಅಲ್ಲಿ ಏನಾಗುತ್ತಿದೆ ಎಂಬ ಅರಿವು ಇಲ್ಲದೇ ಹನುಮಂತ ನಿಂತಿದ್ದಾರೆ. ಅವರಿಗೆ ತಮ್ಮ ವಯಸ್ಸಿನ ಬಗ್ಗೆಯೂ ಸ್ಪಷ್ಟ ಕಲ್ಪನೆ ಇಲ್ಲ.. ಆಧುನಿಕ ಪ್ರಪಂಚದ ಗಲೀಜು ಸೋಕದ ಹೂವೊಂದು ಇದೀಗ ಸಂಗೀತ ವೇದಿಕೆಯನ್ನೇರಿದೆ ಎಂದಷ್ಟೆ ಹೇಳಬಹುದು.

 

Follow Us:
Download App:
  • android
  • ios