ಜ್ಯೋತಿಷಿ ಮಾತು ಕೇಳಿ ಧರ್ಮಸ್ಥಳಕ್ಕೆ ತೆರಳಿದ್ರಾ ಸಿದ್ದರಾಮಯ್ಯ?

Siddaramaiah went to Shantivana because of astrologer
Highlights

ಸಿದ್ದರಾಮಯ್ಯ ಮಾಂಸಾಹಾರ ತಿಂದು ಧರ್ಮಸ್ಥಳಕ್ಕೆ ತೆರಳಿ ಮಂಜುನಾಥನ ದರ್ಶನ ಪಡೆದಿದ್ದರು. ಇದು ಭಾರೀ ಸುದ್ದಿಯಾಗಿತ್ತು. ಇದನ್ನು ಪ್ರಶ್ನಿಸಿದವರಿಗೆ ಉಡಾಫೆ ಉತ್ತರವನ್ನು ಕೊಟ್ಟಿದ್ದರು. ಇದೇ ಧರ್ಮಸ್ಥಳಕ್ಕೆ ನ್ಯಾಚುರೋಪತಿ ಚಿಕಿತ್ಸೆಗಾಗಿ ತೆರಳಿ ಕಳೆದ 12 ದಿನಗಳಿಂದ ಅಲ್ಲಿದ್ದು ನಿನ್ನೆ ವಾಪಸ್ಸಾಗಿದ್ದಾರೆ. ಸಿದ್ದರಾಮಯ್ಯವರು ಶಾಂತಿವನಕ್ಕೆ ತೆರಳಿದ್ದು ನಿಜಕ್ಕೂ ಚಿಕಿತ್ಸೆಗಾ? ಅಥವಾ ಬೇರೆ ಕಾರಣಕ್ಕಾ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. 

ಬೆಂಗಳೂರು (ಜೂ. 29): ಮಾಜಿ ಸಿಎಂ ಸಿದ್ದರಾಮಯ್ಯ ಕಳೆದ 12 ದಿನಗಳಿಂದ ಧರ್ಮಸ್ಥಳದ ಶಾಂತಿವನದಲ್ಲಿ ನ್ಯಾಚುರೋಪತಿ ಚಿಕಿತ್ಸೆ ಪಡೆದು ನಿನ್ನೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಆರೋಗ್ಯ ವೃದ್ದಿಗಾಗಿ ಹಾಗೂ ವಿಶ್ರಾಂತಿಗಾಗಿ ಶಾಂತಿವನಕ್ಕೆ ತೆರಳಿದ್ದರು ಸಿದ್ದರಾಮಯ್ಯ. ಅಲ್ಲಿಂದಲೇ ರಾಜಕೀಯ ದಾಳಗಳನ್ನು ಹಾಕಿ ರಾಜ್ಯ ರಾಜಕಾರಣದಲ್ಲಿ ಸಂಚಲನವನ್ನೂ ಮೂಡಿಸಿದ್ದರು. ಆದರೆ ವಿಷಯ ಅದಲ್ಲ. ಸಿದ್ದರಾಮಯ್ಯನವರು ಶಾಂತಿವನಕ್ಕೆ ತೆರಳಿದ್ದು ನಿಜವಾಗಿಯೂ ಚಿಕಿತ್ಸೆಗಾ? ಅಥವಾ ಬೇರೆ ಕಾರಣಕ್ಕಾ ಎಂಬುದು ಸದ್ಯದ ವಿಷಯ. 

ಚುನಾವಣಾ ಪೂರ್ವದಲ್ಲಿ ಸಿದ್ದರಾಮಯ್ಯನವರು ಮಾಂಸಾಹಾರ ಸೇವಿಸಿ ಧರ್ಮಸ್ಥಳಕ್ಕೆ ತೆರಳಿದ್ದರು. ಇದು ಬಾರೀ ಸುದ್ದಿಯಾಗಿತ್ತು. ನಂತರ ರಾಜಕೀಯ ಹಿನ್ನಡೆಯನ್ನೂ ಅನುಭವಿಸಿದರು. ತವರು ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಹೀನಾಯ ಸೋಲು ಕಂಡು, ಬಾದಾಮಿಯಲ್ಲಿ ಗೆದ್ದರು. ಮಂಜುನಾಥನ ಅವಕೃಪೆಯಿಂದಲೇ ಹೀಗಾಯಿತು ಎನ್ನುವ ಸುದ್ದಿ ಹರಿದಾಡುತ್ತಿದೆ.

‘ಮಂಸಾಹಾರ ತಿಂದು ಧರ್ಮಸ್ಥಳಕ್ಕೆ ಹೋಗಿದ್ದೀರಿ. ಮಂಜುನಾಥನ ಅವಕೃಪೆಗೆ ಪಾತ್ರರಾಗಿದ್ದೀರಿ. ಹಾಗಾಗಿ ಆ ಕ್ಷೇತ್ರದಲ್ಲಿ ಕೆಲ ದಿನಗಳ ಕಾಲ ಇದ್ದು, ಪೂಜೆ ಸಲ್ಲಿಸಿ’ ಎಂದು  ಸಿದ್ದರಾಮಯ್ಯನವರ ಆತ್ಮೀಯ ಜ್ಯೋತಿಷಿಯೊಬ್ಬರು ಸಲಹೆ ನೀಡಿದ್ದರಂತೆ. ಅದರಂತೆ ಸಿದ್ದರಾಮಯ್ಯನವರು ಶಾಂತಿವನಕ್ಕೆ ತೆರಳಿದ್ದರು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ  ಹರಿದಾಡುತ್ತಿದೆ. 

ಸಿದ್ದರಾಮಯ್ಯ ಬಗ್ಗೆ ಹೆಚ್ಚಿನ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ 

ಇಂದು ಸಭೆ ನಡೆಸಿ ಮತ್ತೊಂದು ಬಾಂಬ್ ಸಿಡಿಸ್ತಾರಾ ಸಿದ್ದರಾಮಯ್ಯ?

ಮಸಾಜ್​ಗೆ ಹೋದ ಸಿದ್ದು ಹೆಚ್‌ಡಿಕೆ ಗೆ ಕೊಟ್ಟ ಮೆಸೇಜ್ ಏನು..?

ಹಾಂ... ಐದು ವರ್ಷನಾ : ಸಿದ್ದು ಸಿಡಿಸಿದ ಸ್ಫೋಟಕ ಬಾಂಬ್

loader