ಹಾಂ... ಐದು ವರ್ಷನಾ : ಸಿದ್ದು ಸಿಡಿಸಿದ ಸ್ಫೋಟಕ ಬಾಂಬ್

Siddaramaiah drops big hint on future of coalition government
Highlights

  • ಧರ್ಮಸ್ಥಳದ ಶಾಂತಿವನದಲ್ಲಿ ಸಿದ್ದು ಸಿಡಿಸಿದ 2ನೇ ಸ್ಫೋಟಕ ಬಾಂಬ್ 
  • 5 ವರ್ಷ ಇರುತ್ತಾ ಎಂಬ ಪ್ರಶ್ನೆಗೆ ’ ಮುಂದಿನ ಲೋಕಸಭೆವರೆಗೆ ಮುಂದೇನಾಗುತ್ತಾ ನೋಡೋಣ ಎಂಬುದಾಗಿ ಹೇಳಿಕೆ 

ಧರ್ಮಸ್ಥಳ[ಜೂ.26]: ಧರ್ಮಸ್ಥಳದ ಶಾಂತಿವನದಲ್ಲಿ  ಪ್ರಕೃತಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಸರ್ಕಾರದ ವಿರುದ್ಧ ಸ್ಫೋಟಕ ಬಾಂಬ್ ಸಿಡಿಸಿದ್ದಾರೆ.

ಐದು ವರ್ಷ ಸರ್ಕಾರ ಇರುತ್ತಾ ಎಂಬ ಪರಿಚಿತರೊಬ್ಬರ ಪ್ರಶ್ನೆಗೆ ಶಾಂತಿವನದಲ್ಲಿ ಉತ್ತರಿಸಿದ ಅವರು, ‘ಹಾಂ... ಐದು ವರ್ಷನಾ... ಲೋಕಸಭೆ ಚುನಾವಣೆ ಆದ್ಮೇಲೆ ನೋಡೋಣ. ಲೋಕಸಭೆ ಚುನಾವಣೆವರೆಗೂ ಮೈತ್ರಿ ಸರ್ಕಾರ ಇರುತ್ತೆ, ನಂತರ ಬೆಳವಣಿಗೆ ಏನಾಗುತ್ತೋ ನೋಡೋಣ. ಇದೇ ಸಂದರ್ಭದಲ್ಲಿ ಈ ಸಲ ಮೋದಿ ಬರೋದಿಲ್ಲ, ತಿಪ್ಪರಲಾಗ ಹಾಕಿದ್ರೂ ಗೆಲ್ಲೋದಿಲ್ಲ. ಎಲ್ಲರೂ ಒಂದಾಗಿಬಿಡೋದ್ರಿಂದ ಮೋದಿ ಗೆಲ್ಲೋಕ್ಕಾಗಲ್ಲ ಎಂದಿದ್ದಾರೆ. ಈ ಮಾತಿನಿಂದ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಲೋಕಸಭೆ ಚುನಾವಣೆಗಾಗಿ ಮಾಡಿಕೊಂಡ ಮೈತ್ರಿ ಎಂಬಂತಿದೆ. 

ಮುಸ್ಲಿಮರು ಬಿಜೆಪಿಗೆ ಮತ ಹಾಕಲ್ಲ
ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣೆಯ ಬಗ್ಗೆ ಪ್ರಸ್ತಾಪವಾದಾಗ ' ದಕ್ಷಿಣ ಕನ್ನಡದಲ್ಲಿ ಬಿಲ್ಲವರು ಕಾಂಗ್ರೆಸಿಗೆ ವೋಟ್ ಹಾಕಿಲ್ಲ. ಮುಸ್ಲಿಮರು ಹೆಚ್ಚಿರುವ ಕಡೆ ಬಿಜೆಪಿಗೆ ವೋಟ್ ಹಾಕ್ತಾರ..? ಎಂದು ತಮ್ಮ ಎಂದಿನ ಶೈಲಿಯಲ್ಲಿ ಉತ್ತರಿಸಿದ್ದಾರೆ.

"

loader