ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸೆಲ್ಕೊ ಸೋಲಾರ್ ಲೈಟ್ ಸೌಲಭ್ಯ
ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಪ್ರವಾಹ ಪೀಡಿತರಿಗೆ ನೆರೆವಾಗುವ ಉದ್ದೇಶದಿಂದ ಸುವರ್ಣ ಸುದ್ದಿ ವಾಹಿನಿ ಆರಂಭಿಸಿರುವ ‘ಉತ್ತರದೊಂದಿಗೆ ಕರುನಾಡು’ ಅಭಿಯಾನಕ್ಕೆ ಸೆಲ್ಕೋ ಸೋಲಾರ್ ಲೈಟ್ ಪ್ರೈವೆಟ್ ಲಿಮಿಟೆಡ್ ಕೈ ಜೋಡಿಸಿದೆ.
ಬೆಂಗಳೂರು [ಆ.10]: ರಾಜ್ಯದ ಉತ್ತರ ಕರ್ನಾಟಕ ಸೇರಿದಂತೆ ಹಲವೆಡೆ ಉಂಟಾಗಿರುವ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಪ್ರವಾಹ ಪೀಡಿತರಿಗೆ ನೆರೆವಾಗುವ ಉದ್ದೇಶದಿಂದ ಸುವರ್ಣ ಸುದ್ದಿ ವಾಹಿನಿ ಆರಂಭಿಸಿರುವ ‘ಉತ್ತರದೊಂದಿಗೆ ಕರುನಾಡು’ ಅಭಿಯಾನಕ್ಕೆ ಸೆಲ್ಕೋ ಸೋಲಾರ್ ಲೈಟ್ ಪ್ರೈವೆಟ್ ಲಿಮಿಟೆಡ್ ಕೈ ಜೋಡಿಸಿದೆ.
ಉತ್ತರ ಕರ್ನಾಟಕ, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳ ಪರಿಹಾರ ಕೇಂದ್ರಗಳಲ್ಲಿ ಸೋಲಾರ್ ವಿದ್ಯುತ್ ಕಲ್ಪಿಸಲು ಮುಂದಾಗಿದೆ. ಸಂಸ್ಥೆಯ ಸುಮಾರು 200 ಮಂದಿ ಸಿಬ್ಬಂದಿ ನೆರೆ ಪರಿಹಾರ ಕೇಂದ್ರಗಳಲ್ಲಿ ದಿನದ 24 ತಾಸು ಕಾರ್ಯ ನಿರ್ವಹಿಸಲಿದ್ದಾರೆ. ವಿದ್ಯುತ್ ಸಂಪರ್ಕ ಇಲ್ಲದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸೋಲಾರ್ ಮೊಬೈಲ್ ಟಾಚ್‌ರ್, 5 ವ್ಯಾಟ್‌ನ ಸೋಲಾರ್ ಲೈಟ್, 100 ಎಎಚ್ ಬ್ಯಾಟರಿ, ಏಕಕಾಲಕ್ಕೆ 10ರಿಂದ 15 ಮೊಬೈಲ್ ಚಾಜ್‌ರ್ ಮಾಡುವ ಚಾರ್ಜರ್ ಒದಗಿಸಲಿದ್ದಾರೆ.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸೆಲ್ಕೋ ಸೋಲಾರ್ ಸಂಸ್ಥೆಯು ರಾಜ್ಯದಲ್ಲಿ 48 ಬ್ರಾಂಚ್ ಹೊಂದಿದ್ದು, ಪ್ರವಾಹ ಪರಿಹಾರ ಕೇಂದ್ರಕ್ಕೆ ತಲಾ ಓರ್ವ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಜಿಲ್ಲಾಡಳಿತದಿಂದ ಪ್ರವಾಹ ಪ್ರದೇಶದ ಬಗ್ಗೆ ಮಾಹಿತಿ ಪಡೆದು ಪರಿಹಾರ ಕೇಂದ್ರಗಳಲ್ಲಿ ಸೇವೆ ನೀಡಲಾಗುವುದು. ಹದಿನೈದು ದಿನಗಳ ಕಾಲ ಸೆಲ್ಕೋ ಸಿಬ್ಬಂದಿ ಈ ಪರಿಹಾರ ಕೇಂದ್ರಗಳಲ್ಲಿ ಕೆಲಸ ಮಾಡಲಿದ್ದಾರೆ ಎಂದು ಸಂಸ್ಥೆಯ ಸಿಇಓ ಮೋಹನ್ ಭಾಸ್ಕರ್ ಹೆಗಡೆ ತಿಳಿಸಿದ್ದಾರೆ.
"