ನವದೆಹಲಿ(ಸೆ. 17)  ಮಸಾಜ್ ಪಾರ್ಲರ್ ಹೆಸರಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ನಾಗರಿಕರಿಂದ ದೂರುಗಳು ಬಂದಿದ್ದು ಕ್ರಾಸ್ ಮಸಾಜ್ ಬ್ಯಾನ್ ಮಾಡಲು ಆಡಳಿತ ಸಿದ್ಧವಾಗಿದೆ. ಪಾರ್ಲರ್ ಹೆಸರಿನಲ್ಲಿ ಮಾನವ ಕಳ್ಳ ಸಾಗಣೆ ಅನುಮಾನಗಳು ಬಂದಿವೆ ಎಂದು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ನಾಯಕಿ ಕಮಲ್ ಜೀತ್ ಸೆಹರಾವತ್ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸ್ಪಷ್ಟ ತೀರ್ಮಾನಕ್ಕೆ ಬರಲು ಕೊಂಚ ಸಮಯ ಹಿಡಿಯಲಿದ್ದು ಮಾಹಿತಿ ಕಲೆ ಹಾಕುವ ಕೆಲಸ ಪ್ರಗತಿಯಲ್ಲಿದೆ. ಅನುಮಾನ ಕಂಡುಬಂದಿರುವ  297  ಪಾರ್ಲರ್ ಗಳ ಲಿಸ್ಟ್ ನ್ನು ಸದ್ಯದಲ್ಲಿಯೇ ಪ್ರಕಟ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೇ ಎಲ್ಲ ಪಾರ್ಲರ್ ಗಳ ಲಾಬಿ ಮತ್ತು ಮೇನ್ ರೂಂ ನಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆಗೆ ಸೂಚನೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬಿಜೆಪಿ ನಾಯಕನ ಬೆತ್ತಲೆ ಮಸಾಜ್ ವಿಡಿಯೋ ವೈರಲ್.. ಯುವತಿಯಿಂದ ರೇಪ್ ಆರೋಪ

ಹೊಸ ಕಾಯಿದೆ ಅನುಷ್ಠಾನವಾದರೆ ಕ್ರಾಸ್ ಮಸಾಜ್ ನ್ನು ಸಂಪೂರ್ಣ ನಿಷೇಧ ಮಾಡಲಾಗುತ್ತದೆ. 18 ವರ್ಷ ಮೇಲ್ಪಟ್ಟವರು ಮಾತ್ರ ಮಸಾಜ್ ಸರ್ವೀಸ್ ಸೆಂಟರ್ ಗಳಲ್ಲಿ ಕೆಲಸ ಮಾಡಬಹುದು ಎಂದು ಹೇಳಿದ್ದಾರೆ.

ಮಸಾಜ್ ಪಾರ್ಲರ್ ಗಳ ಮೇಲೆ ದಾಳಿ ಮಾಡಿದ್ದಾಗ ವೇಶ್ಯಾವಾಟಿಕೆ ಜಾಲಗಳು ಬಯಲಿಗೆ ಬಂದಿದ್ದವು. ಜತೆಗೆ ಆಯಾ ಪ್ರದೇಶದ  ಜನರಿಂದಲೂ ದೂರು ಬಂದಿದ್ದವು.