ಶಹಜಾನ್ಪುರ(ಸೆ. 12)  ಸ್ವಾಮಿ ಚಿನ್ಮಯಾನಂದ ಅವರದ್ದು ಎನ್ನಲಾದ ವಿಡಿಯೋ ಸಂದೇಶವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಹಿರಿಯ ವ್ಯಕ್ತಿಯೊಬ್ಬ ಬಟ್ಟೆ ಕಳಚಿ ಯುವತಿಯೊಬ್ಬಳಿಂದ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ಇದಾಗಿದ್ದು ರಹಸ್ಯ ಕ್ಯಾಮರಾ ಬಳಸಿ ಶೂಟ್ ಮಾಡಲಾಗಿದೆ.

ಇನ್ನೊಂದು ಕಡೆ ಯುವತಿಯೊಬ್ಬರು ಸ್ವಾಮಿ ಮೇಲೆ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾರೆ. ಎಸ್ ಐಟಿ ವಿಚಾರಣೆ ಹಂತದಲ್ಲಿ ಪ್ರಕರಣ ಇದ್ದು ಕಾನೂನು ವಿದ್ಯಾರ್ಥಿನಿಯೊಬ್ಬರು ಸ್ವಾಮಿ ಚಿನ್ಮಯಾನಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಒಂದು ವರ್ಷದಿಂದ ತಮಗೆ ಬೇಕಾದಂತೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಸಾಕ್ಷ್ಯದ ರೂಪದಲ್ಲಿ ವಿಡಿಯೋವನ್ನು ಸಲ್ಲಿಸಿದ್ದಾರೆ.

ಆದರೆ ಸ್ವಾಮಿ ಚಿನ್ಮಯಾನಂದ ಲೈಂಗಿಕ ದೌರ್ಜನ್ಯದ ಆರೋಪ ನಿರಾಕರಿಸಿದ್ದಾರೆ.  ವಿಡಿಯೋ ಕ್ಲಿಪ್ ಅನ್ನು ಫೋರೆನ್ಸಿಕ್ ಲ್ಯಾಬ್ ಪರಿಶೀಲನೆಗೆ ಕಳುಹಿಸಿಕೊಡಲಾಗಿದೆ.

ಸ್ವರಾಗೆ ಮಾಡಿದ ವಲ್ಗರ್ ಕಾಮೆಂಟ್ ಲೈಕ್ ಮಾಡಿದ ಬಿಜೆಪಿ ಸಂಸದ!

ಹುಡುಗಿಯ ಕೋಣೆಯಲ್ಲಿ ಹುಡುಕಾಟ: ವಿಶೇಷ ತನಿಖಾ ದಳ ಹುಡುಗಿಯ ಹಾಸ್ಟೆಲ್ ರೂಂ ಅನ್ನು ಪರಿಶೀಲನೆ ಮಾಡಿದ್ದು ಮಾಹಿತಿ ಕಲೆ ಹಾಕಿದೆ.  ಮಾಧ್ಯಮಗಳ ಮುಂದೆಯೂ ಹೇಳಿಕೆ ನೀಡಿರುವ ಯುವತಿ ಸ್ವಾಮಿ ಚಿನ್ಮಯಾನಂದ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಕುಟುಂಬ ಮತ್ತು ನನ್ನ ಪ್ರಾಣಕ್ಕೆ ಅಪಾಯ ಎದುರಾಗುವ ಸಂಭವ ಕಂಡುಬಂದಿದ್ದರಿಂದ ಅನಿವಾರ್ಯವಾಗಿ ವಿಡಿಯೋ ಬಿಡುಗಡೆ ಮಾಡಲೇಬೇಕಾಯಿತು ಎಂದು ಯುವತಿ ಹೇಳಿದ್ದಾರೆ.

ಏನಿದು ಪ್ರಕರಣ:  ಬಿಜೆಪಿ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ವಿರುದ್ಧ ತಾನು ಮಾಡಿರುವ ಆರೋಪವನ್ನು ಸಾಬೀತು ಪಡಿಸಲು ಪೆನ್ ಡ್ರೈವ್‌ನಲ್ಲಿ ಸಾಕ್ಷ್ಯವಿದೆ ಎಂದು ಅವರ ಕಾನೂನು ವಿದ್ಯಾರ್ಥಿನಿ ಹಿಂದೆಯೂ ಹೇಳಿದ್ದರು.

ಮೆಟ್ರೋ ನಿಲ್ದಾಣದಲ್ಲಿ ಮುಕ್ತ ಸರಸ, ಪೋರ್ನ್ ಸೈಟ್‌ಗೆ ವಿಡಿಯೋ ಅಪ್‌ಲೋಡ್!

ನಾನು ಕಾಲೇಜಿನಲ್ಲಿ ಎಲ್ಎಲ್ಎಂಗಾಗಿ ಪ್ರವೇಶ ಪಡೆದಾಗ ಸ್ವಾಮಿ ಚಿನ್ಮಯಾನಂದ ನನಗೆ ಜಾಬ್ ಆಫರ್ ನೀಡಿದರು. ಕತ್ತಲಾಗುವವರೆಗೂ ನಾನು ಕಾಲೇಜಿನಲ್ಲೇ ಇರಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಲಾಯಿತು. ಕಾಲೇಜು ಸಿಬ್ಬಂದಿ ಬಲವಂತದ ಮೇರೆಗೆ ನಾನು ಹಾಸ್ಟೆಲ್‌ನಲ್ಲಿಯೇ ಉಳಿದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಯಿತು ಎಂದು ಆರೋಪಿಸಿದ್ದಾಳೆ.

ಪ್ರಕರಣ ಎಲ್ಲಿದೆ? : ಪ್ರಕರಣದ ಬಗ್ಗೆ ಸುವಮೊಟೋ ತನಿಖೆ ಆಗಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ ನಂತರ ವಿಶೇಷ ತನಿಖಾ ದಳವನ್ನು ಸ್ಥಾಪನೆ ಮಾಡಲಾಯಿತು. 

ಸೋಶಿಯಲ್ ಮಿಡಿಯಾದಲ್ಲಿ ವಿಡಿಯೋ ಹಂಚಿಕೊಂಡ ನಂತರ ಆರೋಪ ಮಾಡಿದ್ದ ಹುಡುಗಿ ನಾಪತ್ತೆಯಾಗಿದ್ದಳು. ನಂತರ ಕಳೆದ ಶುಕ್ರವಾರ ರಾಜಸ್ಥಾನದಲ್ಲಿ ಯುವತಿ ಪತ್ತೆಯಾಗಿದ್ದಳು. 

ಯುವತಿಯ ತಂದೆ 72 ವರ್ಷದ ಸ್ವಾಮಿ ಚಿನ್ಮಯಾನಂದ ಮೇಲೆ ದೂರು ದಾಖಲಿಸಿದ್ದು ಅಲ್ಲದೇ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದ್ದಾರೆ.