ರಾಮಾಯಣ, ಮಹಾಭಾರತದಲ್ಲಿ ಹಿಂಸಾಚಾರವೇ ತುಂಬಿದೆ ಎಂದಿದ್ದ ಯೆಚೂರಿ| ಸೀತಾರಾಂ ಯೆಚೂರಿಗೆ ತಿರುಗೇಟು ನೀಡಿದ ಶಿವಸೇನಾ ನಾಯಕ ಸಂಜಯ್ ರಾವತ್| ‘ಯೆಚೂರಿ ತಮ್ಮ ಹೆಸರನ್ನು ಬಾಬರ್ ಅಥವಾ ಅಫ್ಜಲ್ ಎಂದು ಬದಲಿಸಿಕೊಳ್ಳಲಿ’|
ಮುಂಬಯಿ(ಮೇ.05): ರಾಮಾಯಣ ಮತ್ತು ಮಹಾಭಾರತದಲ್ಲಿ ಕೇವಲ ಹಿಂಸಾಚಾರವೇ ತುಂಬಿದೆ ಎಂದು ಹೇಳಿದ್ದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಗೆ ಶಿವಸೇನಾ ನಾಯಕ ಸಂಜಯ್ ರಾವತ್ ತಿರುಗೇಟು ನೀಡಿದ್ದಾರೆ.
ಹಿಂದೂ ಧರ್ಮದಲ್ಲಿ ಹಿಂಸಾಚಾರ ಇದೆ ಎಂದಾದರೆ ಸೀತಾರಾಮ ಯೆಚೂರಿ ತಮ್ಮ ಹೆಸರನ್ನು ಬಾಬರ್ ಅಥವಾ ಅಪ್ಜಲ್ ಎಂದು ಬದಲಿಸಿಕೊಳ್ಳಲಿ ಸಂಜಯ್ ರಾವತ್ ಹೇಳಿದ್ದಾರೆ.
ರಾಮಾಯಣ ಮತ್ತು ಮಹಾಭಾರತ ಮಹಾಗ್ರಂಥಗಳ ಕುರಿತು ಯೆಚೂರಿಗೆ ಗೌರವ ಇಲ್ಲವಾದರೆ, ತಮ್ಮ ಹೆಸರನ್ನು ಬಾಬರ್, ಅಪ್ಝಲ್ ಖಾನ್, ಔರಂಗ್ ಜೇಬ್ ಅಥವಾ ಚೆಂಗಿಸ್ ಖಾನ್ ಎಂದು ಹೆಸರು ಬದಲಿಸಿಕೊಳ್ಳಲಿ ಎಂದು ಹರಿಹಾಯ್ದಿದ್ದಾರೆ.
ಈ ಮಧ್ಯೆ ಹಿಂದೂ ಧರ್ಮಗ್ರಂಥಗಳ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದ ಮೇಲೆ ಸೀತಾರಾಂ ಯೆಚೂರಿ ವಿರುದ್ಧ ದೂರು ದಾಖಲಿಸಲಾಗಿದೆ.
