ನವದೆಹಲಿ(ಫೆ.27): ಬುದ್ಗಾನ್ ನಲ್ಲಿ ಪತನಗೊಂಡ ಭಾರತೀಯ ವಾಯುಪಡೆಯ ಮಿಗ್-21 ಪೈಲೆಟ್ ಕಾಣೆಯಾಗಿದ್ದಾರೆ ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.

ಬುದ್ವಾನ ವಿಮಾನ ಪತನದ ಕುರಿತು ಪತ್ರಿಕಾಗೋಷ್ಠಿ ನಡೆಸಿದ ವಿದೇಶಾಂಗ ಕಾರ್ಯದರ್ಶಿ ರವೀಶ್ ಕುಮಾರ್, ಪೈಲೆಟ್ ಪಾಕಿಸ್ತಾನದ ವಶದಲ್ಲಿರುವುದು ಇನ್ನಷ್ಟೇ ಖಚಿತವಾಗಬೇಕಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಪಾಕಿಸ್ತಾನ ಎಫ್-16 ಯುದ್ಧ ವಿಮಾನವನ್ನು ಭಾರತೀಯ ವಾಯುಸೇನೆ ಹೊಡೆದುರಿಳಿಸಿರುವುದಾಗಿ ರವೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.