Asianet Suvarna News Asianet Suvarna News

ಗುಡ್ಡ ಹತ್ತಿ, ಮಳೆಯಲ್ಲೇ ಎಷ್ಟೋ ದೂರ ನಡೆದು, ಸೇತುವೆ ದಾಟಿ ಹೋಗಿ ಮರು ಮತದಾನ ಪೂರೈಸಿದ ಚುನಾವಣಾ ಸಿಬ್ಬಂದಿ

ದೇಶದಲ್ಲಿ ಚುನಾವಣಾ ಸಮಯದ ಬಿಸಿ ಎಲ್ಲರನ್ನೂ ತಟ್ಟುತ್ತಿದೆ. ಅರುಣಾಚಮ ಪ್ರದೇಶದಲ್ಲಿ ಮರುಮತದಾನವೂ ನಡೆದು ಯಶಸ್ವಿಯಾಗಿದೆ. ಈ ವೇಳೆ, ಅಲ್ಲಿನ ಪರಿಸ್ಥಿತಿಯ ಕುರಿತು ಚುನಾವಣಾ ಆಯೋಗ ವೀಡಿಯೋ ಪೋಸ್ಟ್ ಮಾಡಿದ್ದು, ಚುನಾವಣಾ ಸಿಬ್ಬಂದಿ ಯಾವ ಸ್ಥಿತಿಯಲ್ಲಿ ಮತಗಟ್ಟೆಗೆ ತೆರಳಿದ್ದರು, ಯಾವ ರೀತಿ ವಾಪಸ್ಸಾದರು ಎನ್ನುವ ಮಾಹಿತಿ ನೀಡುತ್ತದೆ. 
 

How election personnel in Arunachal pradesh did their duty for Lok sabha election 2024 sum
Author
First Published Apr 25, 2024, 3:16 PM IST | Last Updated Apr 25, 2024, 3:16 PM IST

ದೇಶದಲ್ಲೀಗ ಚುನಾವಣಾ ಕಾವು ಎಲ್ಲೆಡೆ ಹರಡಿದೆ. ಬಹಳಷ್ಟು ಪ್ರದೇಶಗಳಲ್ಲಿ ವಾತಾವರಣವೂ ಸಿಕ್ಕಾಪಟ್ಟೆ ಕಾವಿನಿಂದ ಕೂಡಿದೆ. ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗಿದೆ. ಸೆಕೆಗೆ ಜನರು ಬಸವಳಿದಿದ್ದಾರೆ. ಈ ಮಧ್ಯೆಯೇ ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿದ್ದರೆ ಜನರೂ ಉತ್ಸಾಹದಿಂದ ಭಾಗಿಯಾಗುತ್ತಿದ್ದಾರೆ. ಮೊದಲ ಹಂತದ ಚುನಾವಣೆ ಹಲವು ಪ್ರಾಂತ್ಯಗಳಲ್ಲಿ ಈಗಾಗಲೇ ನಡೆದಿದೆ. ಅರುಣಾಚಲ ಪ್ರದೇಶದಲ್ಲೂ ಮೊದಲ ಹಂತದ ಮತದಾನ ನಡೆದಿದ್ದರೂ ಕೆಲವು ಪ್ರಾಂತ್ಯಗಳಲ್ಲಿ ಮರುಮತದಾನವೂ ನಡೆದಿದೆ. ಆದರೆ, ಅರುಣಾಚಲ ಪ್ರದೇಶ ಹೇಳಿಕೇಳಿ ದುರ್ಗಮ ಪ್ರದೇಶ. ಚೀನಾದ ಗಡಿಭಾಗಗಳಲ್ಲಿ ಹೊಂದಿಕೊಂಡಿರುವ ಹಳ್ಳಿಗಳಿಗೆ ಸಾಗುವುದು ಸುಲಭದ ಮಾತಲ್ಲ. ರಭಸದಿಂದ ಹರಿಯುವ ನದಿಗಳಿಗೆ ಗಟ್ಟಿಮುಟ್ಟಾದ ಸೇತುವೆಗಳಿಲ್ಲ, ನಡೆದುಕೊಂಡೇ ಬಿದಿರಿನ ಸೇತುವೆಗಳನನ್ನು ದಾಟಬೇಕು, ಗುಡ್ಡಗಳನ್ನು ಹತ್ತಿಳಿಯಬೇಕು, ಯಾವಾಗೆಂದರೆ ಆಗ ಸುರಿಯುವ ಮಳೆಯಲ್ಲೇ ಸಾಗಬೇಕು. ಇಂಥದ್ದೇ ಸನ್ನಿವೇಶಗಳನ್ನು ಎದುರಿಸಿ ಅಲ್ಲಿನ ಚುನಾವಣಾ ಸಿಬ್ಬಂದಿ ಮರುಮತದಾನ ನಡೆಯುವ ನಾಲ್ಕು ಜಿಲ್ಲೆಗಳನ್ನು ತಲುಪಿದ್ದರು. ಗುಡ್ಡಗಾಡು ಪ್ರದೇಶದಲ್ಲಿ ಇಂತಹ ತಾಪತ್ರಯ ಯಾವಾಗಲೂ ಇರುವಂಥದ್ದೇ. ಆದರೆ, ಮತದಾನವೂ ಪುನಃ ನಡೆಯಬೇಕು ಎಂದಾದಾಗ ಚುನಾವಣಾ ಸಿಬ್ಬಂದಿಯ ಬಗ್ಗೆ ಸಹಾನುಭೂತಿ ಮೂಡದೇ ಇರಲು ಸಾಧ್ಯವಿಲ್ಲ. ಈ  ಈ ಕುರಿತ ವೀಡಿಯೋವನ್ನು ಅಲ್ಲಿನ ಚುನಾವಣಾ ಆಯೋಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ವಿಶಿಷ್ಟ ಅನುಭೂತಿ ಮೂಡಿಸುವಲ್ಲಿ ಯಶಸ್ವಿ ಆಗಿದೆ.

ವಾಸ್ತವ ನಿಯಂತ್ರಣ ರೇಖೆಗೆ ಸಮೀಪ
ಪೂರ್ವ ಕಮೆಂಗ್, ಕುರುಂಗ್ ಕುಮೇಯ್, ಮೇಲಿನ ಸುಬಾನ್ಸಿರಿ ಜಿಲ್ಲೆಗಳ (Districts) ಹಲವು ಪ್ರದೇಶಗಳು ಚೀನಾ ಮತ್ತು ಭಾರತದ ನಡುವಿನ ವಾಸ್ತವ ಗಡಿ ನಿಯಂತ್ರಣ ರೇಖೆಗೆ (Actual Line of Control) ಸಮೀಪದಲ್ಲಿವೆ. ಈ ವಲಯಕ್ಕೆ ಚುನಾವಣಾ (Election) ಸಿಬ್ಬಂದಿ (Personnel) ಮತ್ತೊಮ್ಮೆ ಹೋಗುವುದೆಂದರೆ ಹರಸಾಹಸವೇ ಸರಿ. ಆದರೆ, ಈ ಪ್ರದೇಶಗಳಲ್ಲಿ ನಡೆದಿದ್ದ ಮೊದಲ ಹಂತದ ಮತದಾನವನ್ನು (Voting) ಕೇಂದ್ರ ಚುನಾವಣಾ ಆಯೋಗ ಅಸಿಂಧು ಎಂದು ಘೋಷಿಸಿದ್ದ ಪರಿಣಾಮವಾಗಿ ಮರುಮತದಾನ ಅನಿವಾರ್ಯವಾಗಿತ್ತು. ಈ ವೇಳೆ, ಸಿಬ್ಬಂದಿ ಭಾರವಾದ ಇಲೆಕ್ಟ್ರಾನಿಕ್ಸ್ ವೋಟಿಂಗ್ ಮಷಿನ್ ಹೊತ್ತುಕೊಂಡು, ಮಳೆಯಲ್ಲಿ ನಡೆದುಕೊಂಡು ಸಾಗಿದರು. 

17 ವರ್ಷದಲ್ಲೇ ಪ್ರೀತಿಯ ಬಲೆಯಲ್ಲಿ ಬಿದ್ದಿದ್ರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್‌!

ಮರುಮತದಾನ ಶಾಂತಿಯುತವಾಗಿ ನಡೆದಿದೆ. ಅದಕ್ಕೂ ಮುನ್ನ ನಡೆದ ಮತದಾನದ ವೇಳೆ ಹಿಂಸಾತ್ಮಕ ಘಟನೆಗಳು ನಡೆದಿದ್ದವು. ಅರುಣಾಚಲ ಪ್ರದೇಶದ ಚುನಾವಣಾ ಆಯೋಗ ಮತ್ತೊಂದು ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಮಹಿಳಾ ಪೊಲೀಸ್ (Woman Police) ಸಿಬ್ಬಂದಿ ಬಿದಿರಿನ ಸೇತುವೆಯನ್ನು (Bridge) ದಾಟುತ್ತಿದ್ದಾರೆ. ಚುನಾವಣೆಯ ಬಳಿಕ ಪೊಲೀಸ್ ಸಿಬ್ಬಂದಿ ರಭಸವಾಗಿ ಹರಿಯುತ್ತಿರುವ ಕಮೆಂಗ್ ನದಿಯನ್ನು (River) ದಾಟುವ ಚಿತ್ರಣ ಅದರಲ್ಲಿದೆ.

 

ಚುನಾವಣಾ ಸಿಬ್ಬಂದಿ ಮತದಾನದ ಬಳಿಕ ಪುನಃ ಗುಡ್ಡಗಾಡಿನ ಹಾದಿಯಲ್ಲಿ ಸಾಗಿ, ನಡೆದುಕೊಂಡೇ ಜಿಲ್ಲಾ ಕೇಂದ್ರಕ್ಕೆ ಹೋಗಬೇಕು, ಇಂತಹ ಸಂಕಷ್ಟದ ಸ್ಥಿತಿಯನ್ನೂ ಚುನಾವಣಾ ಸಿಬ್ಬಂದಿ ಯಶಸ್ವಿಯಾಗಿ ಪೂರೈಸಿದ್ದಾರೆ, 

ಒಂದೇ ದಿನ ಬಾಯ್‌ಫ್ರೆಂಡ್‌ಗೆ 100ಕ್ಕೂ ಅಧಿಕ ಬಾರಿ ಕರೆ, ಚೀನಾದ ಹುಡುಗಿಗೆ 'ಲವ್‌ ಬ್ರೇನ್‌' ಕಾಯಿಲೆ!

ಸಿಬ್ಬಂದಿ ಬವಣೆ
ಇದೀಗ ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು, ಚುನಾವಣಾ ಸಿಬ್ಬಂದಿಯ ಕುರಿತು ಮೆಚ್ಚುಗೆ ವ್ಯಕ್ತಿವಾಗಿದೆ. ಮೊದಲ ವೀಡಿಯೋದಲ್ಲಿ ಚುನಾವಣಾ ಸಿಬ್ಬಂದಿಯೊಬ್ಬರು ಅಲ್ಲಿನ ಸ್ಥಿತಿಯನ್ನ ವಿವರಿಸಿದ್ದಾರೆ. “ಇದು ಎಷ್ಟು ಅಪಾಯಕಾರಿ (Danger) ಜಾಗವೆಂದರೆ, ಇಲ್ಲಿದ ದಾರಿ ಹೇಗಿದೆಯೆಂದರೆ, ಜೆಸಿಬಿಯೊಂದೇ ಬರುವಂತೆ ಇದೆ. ಕೆಸರುಮಯವಾಗಿದೆ. ಬಹುಶಃ ಜೆಸಿಬಿ ಬಳಿಕ ನಾವೇ ಮೊದಲು ಬಂದಿರಬಹುದು’ ತಮಾಷೆ ಮಾಡಿದ್ದಾರೆ. ಅವರೊಂದಿಗೆ ಭದ್ರತಾ (Security) ಸಿಬ್ಬಂದಿ ಸೇರಿದಂತೆ ಹಲ ಜನರಿದ್ದಾರೆ. 
 

Latest Videos
Follow Us:
Download App:
  • android
  • ios