ಸೀತಾರಾಮ ಸೀರಿಯಲ್​ ಸೀತಾ-ಪ್ರಿಯಾ ಭರ್ಜರಿ ರೀಲ್ಸ್​: ವಿಡಿಯೋಗೆ ಹಾರ್ಟ್​ ಇಮೋಜಿಗಳ ಸುರಿಮಳೆ

ಸೀತಾರಾಮ ಧಾರಾವಾಹಿಯ ಸೀತಾ ಮತ್ತು ಪ್ರಿಯಾ ರೀಲ್ಸ್​ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.
 

Seetha and Priya of Seetarama serial have done the reels fans reacts suc

ಸೀತಾರಾಮ ಸೀರಿಯಲ್​ನಲ್ಲಿ ಪ್ರಿಯಾ ಮತ್ತು ಅಶೋಕ್​ ಜೋಡಿ ಮದುವೆಯ ಸಂಭ್ರಮದಲ್ಲಿ ತೇಲಾಡುತ್ತಿದ್ದರೆ, ಸೀತಾ ಮತ್ತು ರಾಮ್​ ಮದುವೆ ಇನ್ನೇನು ಆಗಲಿದೆ ಎನ್ನುವಷ್ಟರಲ್ಲಿಯೇ ಏನೇನೋ ಬೆಳವಣಿಗೆಗಳು ನಡೆಯುತ್ತಿವೆ. ಇದರ ಮಧ್ಯೆಯೇ ಸೀತಾ ಮತ್ತು ಪ್ರಿಯಾ ಸಕತ್​ ರೀಲ್ಸ್​ಗೆ ಸ್ಟೆಪ್​ ಹಾಕಿದ್ದಾರೆ. ಇದಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ನಿಮ್ಮಿಬ್ಬರ ಜೋಡಿ ಸೂಪರ್​ ಎಂದು ಹೇಳುತ್ತಿದ್ದಾರೆ. ಸೀರಿಯಲ್​ನಲ್ಲಿಯೂ ಸೀತಾ ಮತ್ತು ರಾಮ್​ನನ್ನು ಒಂದು ಮಾಡಲು ಪ್ರಿಯಾ ಹಾಗೂ ಅಶೋಕ್​ ಮಾಡುತ್ತಿರುವ ಪ್ರಯತ್ನಕ್ಕೂ ಶ್ಲಾಘನೆ ವ್ಯಕ್ತವಾಗಿದೆ. ಅಶೋಕ್​ ಕಂಪೆನಿಯ ಓನರ್​ ಎಂದುಕೊಂಡಿದ್ದ ಪ್ರಿಯಾ ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗುವ ಕನಸು ಕಂಡು ಲವ್​ ಮಾಡಿದ್ದಳು. ಆದರೆ ಕೊನೆಗೆ ಆತ ಮಾಮೂಲಿ ನೌಕರ ಎಂದು ತಿಳಿದ ಮೇಲೂ ಅಷ್ಟೇ ಪ್ರೀತಿ ತೋರಿ ಮದುವೆಯಾಗಿರುವುದಕ್ಕೂ ಸೀತಾರಾಮ ಸೀರಿಯಲ್​ ಫ್ಯಾನ್ಸ್​ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಈ ಇಬ್ಬರೂ ಸಕತ್​ ಸ್ಟೆಪ್​ ಹಾಕಿದ್ದಾರೆ. 

ಇನ್ನು ಮೇಘನಾ ಅವರ ಬಣ್ಣದ ಬದುಕಿನ ಕುರಿತು ಹೇಳುವುದಾದರೆ, 'ಸೀತಾರಾಮ' ಸೀರಿಯಲ್​ಗೂ ಮುನ್ನ ಅವರು,  ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ.  ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.

ಸೀತಾರಾಮ ಸೀರಿಯಲ್​ ಪ್ರಿಯಾ ಮದ್ವೆಯ ಭರ್ಜರಿ ಫೋಟೋಶೂಟ್ ಹೇಗಿತ್ತು? ವಿಡಿಯೋ ಮಾಹಿತಿ ನೀಡಿದ ನಟಿ

ಅಂದಹಾಗೆ ಈಚೆಗೆ ಮೇಘನಾ ಅವರು, ಈಚೆಗೆ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಅವರ ಯುಟ್ಯೂಬ್ ಚಾನೆಲ್‌ನಲ್ಲಿ ಅವರು ನೂತನ ಮನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರ ಗೃಹ ಪ್ರವೇಶಕ್ಕೆ ‘ಸೀತಾ ರಾಮ’ ಧಾರಾವಾಹಿ ಕಲಾವಿದರಾದ ಮುಖ್ಯಮಂತ್ರಿ ಚಂದ್ರು, ವೈಷ್ಣವಿ ಗೌಡ, ಅಶೋಕ ಮುಂತಾದವರು ಆಗಮಿಸಿದ್ದರು.  ಇನ್ನು ಸೀತಾ ಪಾತ್ರಧಾರಿ ವೈಷ್ಣವಿ ಅವರ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್​ನ ಸನ್ನಿಧಿ ಮೂಲಕ ಸಕತ್​ ಫೇಮಸ್​ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ.  ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ,  ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಅಷ್ಟಕ್ಕೂ ಇವರು ನಟನಾ ಲೋಕಕ್ಕೆ ಕಾಲಿಟ್ಟಿದ್ದೂ ಕುತೂಹಲ ವಿಷಯವಾಗಿದೆ. ಒಮ್ಮೆ ಇವರು  ತಾಯಿಯ ಜೊತೆ ದೇವಸ್ಥಾನಕ್ಕೆ  ಹೋದಾಗ ಸಹಾಯಕ ನಿರ್ದೇಶಕರೊಬ್ಬರು ನೋಡಿ ತಮ್ಮ ಸೀರಿಯಲ್‌ನಲ್ಲಿ ನಟಿಸಲು ಆಫರ್ ನೀಡಿದ್ದರಂತೆ. 

 ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ.  ಇವರ ಕಾಲೇಜು ಶಿಕ್ಷಣದ ಕುರಿತು ಹೇಳುವುದಾದರೆ, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿದ್ದಾರೆ.  ಪದವಿ ಅರ್ಧಕ್ಕೆ ಬಿಟ್ಟು, ಬಳಿಕ  ಬೆಂಗಳೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ಮೂಲಕ ಪದವಿ ಪಡೆದಿದ್ದಾರೆ.  ಭರತನಾಟ್ಯ, ಕುಚಿಪುಡಿ ಮತ್ತು ಬೆಲ್ಲಿ ಡ್ಯಾನ್ಸಿಂಗ್‌ನಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ.  `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ.  `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ   ನಿರೂಪಣೆ ಕೂಡ ಮಾಡಿದ್ದಾರೆ.  `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್​ಬಾಸ್​ ಸೀಸನ್​ 8ನಲ್ಲಿ ಭಾಗವಹಿಸಿದ್ದಾರೆ.
 

ಒಂದಲ್ಲ, ಎರಡಲ್ಲ... 60 ಟೇಕ್​ ಆದ್ರೂ ಸೀತೆ ಜತೆ ಡ್ಯಾನ್ಸ್​ ಮಾಡಲಾಗದೇ ರಾಮ್ ಪರದಾಟ​: ನಕ್ಕು ನಕ್ಕು ಸುಸ್ತಾದ ಫ್ಯಾನ್ಸ್​

 

Latest Videos
Follow Us:
Download App:
  • android
  • ios