Asianet Suvarna News Asianet Suvarna News

370 ರದ್ದು: 'ಜೈ ಮೋದಿ' ಎಂದ ಪ್ರಗತಿಪರ ಚಿಂತಕ ಭಗವಾನ್

ಬಿಜೆಪಿ ಕೋಮುವಾದಿ ಪಕ್ಷ ಎಂದು ಟೀಕಿಸುತ್ತಿದ್ದ ಪ್ರಗತಿ ಪರ ಚಿಂತಕ ಪ್ರೋ. ಕೆ. ಎಸ್. ಭಗವಾನ್,  ಈಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಇದು ಅಚ್ಚರಿಯಾದರೂ ಸತ್ಯ. ಹಾಗಾದ್ರೆ ಮೋದಿ ಬಗ್ಗೆ ಏನೆಲ್ಲ ಮಾತನಾಡಿದ್ದಾರೆ ಮುಂದೆ ನೋಡಿ

rationalist K S Bhagwan Lauds Modi About Article 370 scrapped
Author
Bengaluru, First Published Aug 6, 2019, 3:12 PM IST

ಮೈಸೂರು, (ಆ.06): ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ದುಗೊಳಿಸಿದ್ದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಪ್ರಗತಿಪರರು ಪ್ರತಿಭಟನೆ ನಡೆಸಿದ್ದರು. ಆದ್ರೆ ಅಚ್ಚರಿ ಎಂಬಂತೆ ಪ್ರಗತಿಪರ ಚಿಂತಕ ಕೆ.ಎಸ್. ಭಗವಾನ್, 370, 35a ರದ್ದತಿಯ ನಿರ್ಧಾರವನ್ನು ಮನಃಪೂರ್ವಕ ಸ್ವಾಗತಿಸಿದ್ದು, ಈ ಬಗ್ಗೆ ಮಾಧ್ಯಮ ಪ್ರಕಟಣೆ ಮೂಲಕ ಮೋದಿಯನ್ನು ಹಾಡಿ ಹೊಗಳಿದ್ದಾರೆ. 

"

ಬೆಂಗಳೂರು: 370 ರದ್ದು ವಿರೋಧಿಸಿ ಬೀದಿಗಿಳಿದ ಪ್ರಗತಿಪರರು

'ಆರ್ಟಿಕಲ್‌ 370, 35a ರದ್ದು ಮಾಡಿ ರಾಷ್ಟ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ‌ ತಂದಿದ್ದಾರೆ. 72 ವರ್ಷಗಳ ಸಂಕಟ ವಿಮುಕ್ತಿ ಮಾಡಿದ್ದು ಒಳ್ಳೆಯ ನಿರ್ಧಾರ. ಇಡೀ ದೇಶವನ್ನ ಒಂದೇ ಸಂವಿಧಾನದಡಿ ತಂದದ್ದು ಶ್ಲಾಘನೀಯ' ಎಂದು ಮೋದಿಯನ್ನು ಗುಣಗಾನ ಮಾಡಿದ್ದಾರೆ.

ಮೋದಿ ಹೆಸರು ಇನ್ಮುಂದೆ ಇತಿಹಾಸದಲ್ಲಿ ಅಜರಾಮರವಾಗಲಿದೆ. ಮೋದಿ ಹೆಸರು ಹೇಳಲು ನನಗೆ ಸಂತೋಷ ಮತ್ತು ಹೆಮ್ಮೆಯಾಗುತ್ತಿದ್ದು, ಜೈ ನರೇಂದ್ರ‌ ಮೋದಿ ಎಂದು ಬಣ್ಣಿಸಿದ್ದಾರೆ.

ಆರ್ಟಿಕಲ್ 370 ರದ್ದು: ಮೊದಲು ಏನಿತ್ತು? ಈಗ ಏನಾಗಿದೆ? ತಿಳಿದುಕೊಳ್ಳಲೇಬೇಕು

ಸದಾ ಬಿಜೆಪಿ,  RSS ಸಂಘಪರಿವಾರದ‌ ವಿರುದ್ಧ ಉರಿದುಬೀಳುತ್ತಿದ್ದ ಭಗವಾನ್, ಕಾಶ್ಮೀರ ವಿಷಯದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಐತಿಹಾಸಿಕ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿರುವುದು ಅಚ್ಚರಿಗೆ ಕಾರಣವಾಗಿದೆ.

Follow Us:
Download App:
  • android
  • ios