Asianet Suvarna News Asianet Suvarna News

ಆರ್ಟಿಕಲ್ 370 ರದ್ದು: ಮೊದಲು ಏನಿತ್ತು? ಈಗ ಏನಾಗಿದೆ? ತಿಳಿದುಕೊಳ್ಳಲೇಬೇಕು

ಕೇಂದ್ರ ಸರ್ಕಾರ ಐತಿಹಾಸಿಕ ತೀರ್ಮಾನ ತೆಗೆದುಕೊಂಡು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡಿದ್ದ ಆರ್ಟಿಕಲ್ 370ನ್ನು ರದ್ದು  ಮಾಡಿದೆ. ಹಾಗಾದರೆ ಈ ಬದಲಾವಣೆಯಿಂದ ಯಾವ ಪರಿಣಾಮ ಆಗಲಿದೆ? ಮೊದಲು ಯಾವ ಸ್ಥಿತಿ ಇತ್ತು? ಇನ್ನು ಮುಂದೆ ಏನಾಗಲಿದೆ? 

Article 370 scrapped what changes in Jammu and Kashmir Explainer
Author
Bengaluru, First Published Aug 5, 2019, 11:09 PM IST
  • Facebook
  • Twitter
  • Whatsapp

ಬೆಂಗಳೂರು[ಆ. 05] ಮೊದಲೇನಿತ್ತೂ ಈಗ ಏನಾಗಿದೆ? ಈ ವಿಚಾರಗಳು ಬಹಳ ಪ್ರಮುಖವಾಗುತ್ತದೆ. ಜಮ್ಮು ಕಾಶ್ಮೀರ ವಿಚಾರದಲ್ಲಿ ಕೂಡಾ ಇದನ್ನು ಮರೆಯುವ ಹಾಗಿಲ್ಲ. ವ್ಯತ್ಯಾಸಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ..

ಮೊದಲು ಏನಿತ್ತು?
* ಜಮ್ಮು ಕಾಶ್ಮೀರಕ್ಕೆ ವಿಶೇಷ ಸವಲತ್ತುಗಳು
* ಎರಡು ನಾಗರಿಕತ್ವ
* ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ
* ಹಣಕಾಸಿನ ತುರ್ತುಪರಿಸ್ಥಿತಿ ಘೋಷಣೆಯಾದರೆ ಜಮ್ಮು ಕಾಶ್ಮೀರಕ್ಕೆ ಸಂವಿಧಾನದ 360ನೇ ವಿಧೀ ಪ್ರಕಾರ ಅನ್ವಯವಾಗಲ್ಲ
* ಜಮ್ಮು ಕಾಶ್ಮೀರದ ಅಲ್ಪ ಸಂಖ್ಯಾತರಿಗೆ ಅಂದರೆ ಹಿಂದುಗಳು ಮತ್ತು ಸಿಖ್ ಸಮುದಾಯಕ್ಕೆ ಮೀಸಲಾತಿ ಇಲ್ಲ
* ಭಾರತದ ಇತರೆ ರಾಝ್ಯಗಳ ನಾಗರಿಕರು ಇಲ್ಲಿ ಭೂಮಿ ಖರೀದಿ ಮಾಡುವಂತೆ ಇಲ್ಲ
* ಇಲ್ಲಿಯ ಮಹಿಖೆ ಬೇರೆ ರಾಜ್ಯದ ನಾಗರಿಕನ ಮದುವೆಯಾದರೆ ಕಾಶ್ಮೀರದ ಪೌರತ್ವ ಕಳೆದುಕೊಳ್ಳುತ್ತಾಳೆ
* ಮಾಹಿತಿ ಹಕ್ಕು ಕಾಯಿದೆ ಇಲ್ಲಿಗೆ ಅನ್ವಯವಾಗಲಲ್
* ವಿಧಾನಸಭೆಯ ಅವಧಿ 6 ವರ್ಷ
* ಪಂಚಾಯಿತಿಗಳಿಗೆ ಯಾವುದೇ ಅಧಿಕಾರ ಇಲ್ಲ
* ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಗೂ ಬೆಲೆ ಇಲ್ಲ

ಪ್ರತಿ ಬಜೆಟ್ ವೇಳೆ ಕೂಗು ಏಳುವ ಸ್ವಾಮಿನಾಥನ್ ವರದಿಯಲ್ಲಿ ಏನಿದೆ?

ಆರ್ಟಿಕಲ್ 370ನೇ ವಿಧಿ ರದ್ದಾದ ಮೇಲಿನ ಸ್ಥಿತಿ
* ಯಾವುದೇ ವಿಶೇಷ ಅಧಿಕಾರ ಇಲ್ಲ
* ಭಾರತದ ನಾಗರಿಕತ್ವ ಮಾತ್ರ
* ಹಣಕಾಸಿನ ತುರ್ತುಪರಿಸ್ಥಿತಿ ಘೋಷಣೆಯಾದರೆ ಅನ್ವಯವಾಗುತ್ತದೆ.
* ಅಲ್ಪಸಂಖ್ಯಾತರಿಗೆ ಶೇ. 16 ಮೀಸಲು ಸಿಗಲಿದೆ
* ಹೊರ ರಾಜ್ಯದ ಜನರು ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಮಿ ಖರೀದಿ ಮಾಡಬಹುದು
* ಮಾಹಿತಿ ಹಕ್ಕು ಕಾಯಿದೆ ಅನ್ವಯವಾಗುತ್ತದೆ
* ವಿಧಾನಸಭೆಯ ಅವಧಿ 5 ವರ್ಷ
* ಇಲ್ಲಿಯ ಮಹಿಳೆ ಹೊರ ರಾಜ್ಯದವರನ್ನು ಮದುವೆಯಾದರೆ ನಾಗರಿಕತ್ವ ಉಳಿಸಿಕೊಳ್ಳುತ್ತಾಳೆ
* ಉಳಿದ ರಾಜ್ಯಗಳಂತೆ ಇಲ್ಲಿನ ಪಂಚಾಯಿತಿಗೂ ಅಧಿಕಾರ
* ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಅನ್ವಯ

ಆಪರೇಶನ್ ಕಾಶ್ಮೀರ: ಆರಂಭದಿಂದ ಅಂತ್ಯದವರೆಗೆ

Follow Us:
Download App:
  • android
  • ios