ಬೆಂಗಳೂರು [ಆ05]: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ್ದಕ್ಕೆ ಪ್ರಗತಿಪರರು ಪ್ರತಿಭಟನೆ ನಡೆಸಿದರು.

ಆರ್ಟಿಕಲ್ 370 ರದ್ದು ವಿರೋದಿಸಿ ಇಂದು [ಶುಕ್ರವಾರ] ಬೆಂಗಳೂರಿನ ಟೌನ್ ಹಾಲ್ ಎದುರು ಪ್ರಗತಿಪರರು ಪ್ರತಿಭಟಿಸಿ, ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಕಾಶ್ಮೀರ: ಭವಿಷ್ಯಕ್ಕೆ ಇತಿಹಾಸ ಬರೆದ ಮೋದಿ ಸರ್ಕಾರ!

ಭಾರತೀಯರೇ ಒಂದಾಗಿ. ಹೋರಾಟಕ್ಕೆ ಮುಂದಾಗಿ ಎಂಬ ಘೋಷಣೆಯೊಂದಿಗೆ ಜಮ್ಮು ಮತ್ತು ಕಾಶ್ಮೀರದ ಜನರೊಂದಿಗೆ ನಾವಿದ್ದೇವೆ ಎಂಬ ಫಲಕ ಹಿಡಿದು, ಭಾರತವನ್ನು ಹಿಂದು ದೇಶ ಆಗಲು ಬಿಡುವುದಿಲ್ಲ ಘೋಷಣೆಗಳು ಕೂಗಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನದ 370ನೇ ವಿಧಿ ಹಾಗೂ 35ಎ ಕಲಂನ್ನು ರದ್ದುಗೊಳಿಸುತ್ತಿರುವುದಾಗಿ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸುತ್ತಿದ್ದಂತೇ ಭಾರತದೆಲ್ಲೆಡೆ ಪರ ಮತ್ತು ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈ ಪೈಕಿ ಪರ ಇರುವವರ ಸಂಖ್ಯೆ ಹೆಚ್ಚಿದೆ.