ಪ್ರಣಬ್, SPB ಆರೋಗ್ಯ ಸ್ಥಿತಿ ಗಂಭೀರ, ಯೋಧರ ಹಿಂಪಡೆದ ಸರ್ಕಾರ; ಆ.20ರ ಟಾಪ್ 10 ಸುದ್ದಿ!
ಜಮ್ಮು ಮತ್ತು ಕಾಶ್ಮೀರದಿಂದ 10,000 ಪ್ಯಾರಾಮಿಲಿಟರಿ ಪಡೆಗಳನ್ನು ತಕ್ಷಣ ಹಿಂಪಡೆಯುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆ ಪರ್ವ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ iPhone 12 ಉತ್ಪಾದನೆ ಮಾಡಲಾಗುತ್ತಿದ್ದು, ಮೋದಿ ಮೇಕ್ ಇನ್ ಇಂಡಿಯಾಗೆ ಮತ್ತಷ್ಟು ಬಲ ಸಿಕ್ಕಿದೆ. ಅಕ್ಷರಾ ಗೌಡ ಬಿಕಿನಿ ಫೋಟೋಸ್, ಈ ವರ್ಷ ಮಾತ್ರ ಐಪಿಎಲ್‌ಗೆ ಡ್ರೀಮ್ 11 ಪ್ರಾಯೋಜಕತ್ವ ಸೇರಿದಂತೆ ಆಗಸ್ಟ್ 20ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಮಾಜಿ ಸಿಎಂ ಅಳಿಯ ಸೇರಿ ಐವರು ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆ...
ಮಾಜಿ ಮುಖ್ಯಮಂತ್ರಿ ಅಳಿಯ ಸೇರಿದಂತೆ ಐವರು ಕಾಂಗ್ರೆಸ್ ಶಾಸಕರು ಬಿಜೆಪಿ ಸೆರ್ಪಡೆಯಾಗಿದ್ದಾರೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಪಕ್ಷಕ್ಕೆ ಅಧಿಕೃತವಾಗಿ ಸೇರಿದ್ದಾರೆ.
'ಕೈಗೆ ಬಂದಿದ್ದ ಪ್ರಧಾನಿ ಪಟ್ಟ ಬೇಡವೆಂದಿದ್ದ ರಾಹುಲ್ ಗಾಂಧಿ'...
ಒಂದು ಕಡೆ ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಇದರ ಮಧ್ಯೆ ಕಾಂಗ್ರೆಸ್ ನಾಯಕರೊಬ್ಬರು ಇತಿಹಾಸದ ಘಟನೆಗಳನ್ನು ಉಲ್ಲೇಖ ಮಾಡಿದ್ದಾರೆ.
ಕಾಶ್ಮೀರದಿಂದ 10000 ಯೋಧರ ಹಿಂಪಡೆಯಲು ಕೇಂದ್ರ ಸರ್ಕಾರ ಆದೇಶ...
ಜಮ್ಮು ಮತ್ತು ಕಾಶ್ಮೀರದಿಂದ 10,000 ಪ್ಯಾರಾಮಿಲಿಟರಿ ಪಡೆಗಳನ್ನು ತಕ್ಷಣ ಹಿಂಪಡೆಯುವಂತೆ ಕೇಂದ್ರ ಸರ್ಕಾರ ಬುಧವಾರ ಆದೇಶ ಮಾಡಿದೆ.
'ಸಿದ್ದರಾಮಯ್ಯ ಮತ್ತೆಂದು ಸಿಎಂ ಆಗಲ್ಲ' : ಭವಿಷ್ಯ ನುಡಿದ ಮುಖಂಡ...
ಸಿದ್ದರಾಮಯ್ಯ ಮತ್ತೆಂದು ರಾಜ್ಯಕ್ಕೆ ಮುಖ್ಯಮಂತ್ರಿಯಾಗುವುದಿಲ್ಲ. ಇದು ಅವರ ಕನಸು ಎಂದು ಮುಖಂಡರೋರ್ವರು ಭವಿಷ್ಯ ನುಡಿದಿದ್ದಾರೆ.
ಪ್ರಣಬ್, ಎಸ್‌ಪಿಬಿ ಆರೋಗ್ಯ ಸ್ಥಿತಿ ಗಂಭೀರ..!...
ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ ಎನಿಸಿದೆ.
2020ರ ಐಪಿಎಲ್ಗಷ್ಟೇ ಡ್ರೀಮ್ 11 ಪ್ರಾಯೋಜಕತ್ವ...
2020ರ ಐಪಿಎಲ್‌ಗೆ ಮಾತ್ರ ಟೈಟಲ್ ಪ್ರಾಯೋಜಕತ್ವ ಹಕ್ಕನ್ನು ಡ್ರೀಮ್ ಇಲೆವೆನ್ ಸಂಸ್ಥೆಗೆ ಮಾರಾಟ ಮಾಡಿರುವುದಾಗಿ ಬುಧವಾರ ಬಿಸಿಸಿಐ ಸ್ಪಷ್ಟಪಡಿಸಿದೆ.
ವೈರಲ್ ಆಗುತ್ತಿದೆ ಹಾಟ್ ಅಕ್ಷರಾ ಗೌಡಳ ಬಿಕಿನಿ ಫೋಟೋಗಳು!
ಮಾಡೆಲ್ ಕಮ್ ನಟಿ ಅಕ್ಷರಾ ಗೌಡಳ ಪೋಟೋ ಸಖತ್ ಸುದ್ದಿ ಮಾಡುತ್ತಿದೆ. ಹಿಂದಿ, ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ನಟಿ ತಮ್ಮ ಸಿನಿಮಾ ಕರಿಯರ್ ಅನ್ನು ತಮಿಳು ಚಿತ್ರದ ಮೂಲಕ ಪಾರಂಭಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇರುವ ಅಕ್ಷರಾ ಆಗಾಗ ಪೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅವರು ಕೆಲವು ದಿನಗಳ ಹಿಂದಿನ ಬ್ಲ್ಯಾಕ್ ಬಿಕಿನಿ ಫೋಟೋಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಕರ್ನಾಟಕದಲ್ಲಿ iPhone 12 ಉತ್ಪಾದನೆ; ಮೋದಿ ಮೇಕ್ ಇನ್ ಇಂಡಿಯಾಗೆ ಮತ್ತಷ್ಟು ಬಲ!...
ಪ್ರಧಾನಿ ಮೋದಿ ಆತ್ಮನಿರ್ಭರ್ ಭಾರತ ಪರಿಕಲ್ಪನೆಯಡಿ ಹಲವು ವಿದೇಶಿ ಕಂಪನಿಗಳು ಇದೀಗ ಭಾರತದಲ್ಲೇ ಉತ್ಪಾದನೆ ಆರಂಭಿಸಿದೆ. ಇದರಲ್ಲಿ ಪ್ರಮುಖವಾಗಿ ಸ್ಮಾರ್ಟ್‌ಫೋನ್ ದಿಗ್ಗಜ ಆ್ಯಪಲ್ ಭಾರತದಲ್ಲೇ iPhone ಉತ್ಪಾದನೆ ಮಾಡುತ್ತಿದೆ. ಇದೀಗ ಭಾರತದಲ್ಲಿ 7ನೇ iPhone ಉತ್ಪಾದನೆಗೆ ಮುಂದಾಗಿದೆ. iPhone 12 ಉತ್ಪಾದನೆ ಕರ್ನಾಟಕದಲ್ಲಿ ಆಗಲಿದೆ. ಇಷ್ಟೇ ಅಲ್ಲ 10,000 ಉದ್ಯೋಗ ಕೂಡ ಸೃಷ್ಟಿಯಾಗುತ್ತಿದೆ.
ಎಸ್‌ಬಿಐನ ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್...
‘ಎಸ್‌ಬಿಐ ಉಳಿತಾಯ ಖಾತೆ ಗ್ರಾಹಕರಿಗೆ ಸಿಹಿ ಸುದ್ದಿ! ಇನ್ನುಮುಂದೆ ನೀವು ಎಸ್‌ಎಂಎಸ್ ಸೇವೆಗೆ ಹಾಗೂ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಿಸದಿರುವುದಕ್ಕೆ ಶುಲ್ಕ ಪಾವತಿಸಬೇಕಿಲ್ಲ’
ಒಂದು ಚಾರ್ಜ್‌ಗೆ 1,026 ಕಿ.ಮೀ ಮೈಲೇಜ್: ದಾಖಲೆ ಬರೆದ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು!...
ಎಲೆಕ್ಟ್ರಿಕ್ ಕಾರುಗಳ ಪೈಕಿ ಹ್ಯುಂಡೈ ಕೋನಾ ಭಾರಿ ಸಂಚಲನ ಸೃಷ್ಟಿಸಿದೆ. ಕಂಪನಿ ಪ್ರಕಾರ ಈ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 484 ಕಿಲೋಮೀಟರ್ ಪ್ರಯಾಣ ನೀಡಲಿದೆ. ಆದರೆ ಕೊರೋನಾ ಕಾರನ್ನು ಪರೀಕ್ಷಿಸಿದಾಗ ಅಚ್ಚರಿ ಫಲಿತಾಂಶ ಬಂದಿದೆ ಬರೋಬ್ಬರಿ 10,24 ಕಿಲೋಮೀಟರ್ ಮೈಲೇಜ್ ನೀಡಿದೆ. ಈ ಮೂಲಕ ದಾಖಲೆ ಬರೆದಿದೆ.