ಜರ್ಮನಿ(ಆ.20): ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅದರಲ್ಲೂ ಗರಿಷ್ಠ ಮೈಲೇಜ್ ನೀಡಬಲ್ಲ ಕಾರುಗಳತ್ತ ಜನ ಆಕರ್ಷಿತರಾಗುತ್ತಿದ್ದಾರೆ. ಭಾರತದಲ್ಲಿ ಕಳೆದ ವರ್ಷ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿದೆ. ಭಾರತದಲ್ಲಿ ಕೋನಾ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ452 ಕಿ.ಮೀ ಮೈಲೇಜ್ ನೀಡಲಿದೆ. ಭಾರತ ಹೊರತು ಪಡಿಸಿ, ಸೌತ್ ಕೊರಿಯಾ, ಜರ್ಮನಿ ಸೇರಿದಂತ ಇತರ ದೇಶದಲ್ಲಿ ಕೋನಾ ಕಾರು ಒಂದು ಬಾರಿ ಚಾರ್ಜ್‌ಗೆ 484 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ಅಧಿಕೃತವಾಗಿ ಹೇಳಿದೆ. ಆದರೆ ಈ ಕಾರಿನ ಮೈಲೇಜ್ ಪರೀಕ್ಷೆ ವೇಳೆ ಅಚ್ಚರಿಯಾಗಿದೆ. ಒಂದು ಬಾರಿ ಚಾರ್ಜ್ ಮಾಡಿದ ಕೋನಾ ಎಲೆಕ್ಟ್ರಿಕ್ ಕಾರು 1,026 ಕಿ.ಮೀ ಮೈಲೇಜ್ ನೀಡಿದೆ.

ಎಲೆಕ್ಟ್ರಿಕ್ ವಾಹನ ಮೇಲಿನ GST ಕಡಿತ; ಕೋನಾ ಕಾರಿನ ಬೆಲೆ ಇಳಿಕೆ!.

ಜರ್ಮನಿಯಲ್ಲಿ ಕೋನಾ ಕಾರಿನ ಮೈಲೇಜ್ ಪರೀಕ್ಷೆ ಮಾಡಲಾಗಿದೆ. 3 ಕೋನಾ ಕಾರುಗಳನ್ನು ಸಂಪೂರ್ಣ ಚಾರ್ಚ್ ಮಾಡಿ ಪರೀಕ್ಷೆಗೆ ಒಳಪಡಿಸಲಾಗಿದೆ. ಹೆಚ್ಚಿನ ಮೈಲೇಜ್‌ಗಾಗಿ ಕಾರನ್ನು 29 ರಿಂದ 31 ಕಿಲೋಮೀಟರ್ ವೇಗದಲ್ಲಿ ಚಲಾಯಿಸಲಾಗಿದೆ. ಇಷ್ಟೇ ಅಲ್ಲ ಎಸಿ ಹಾಗೂ ಮ್ಯೂಸಿಕ್ ಸಿಸ್ಟಮ್ ಆಫ್ ಮಾಡಿ ಕಾರನ್ನು ಓಡಿಸಲಾಗಿದೆ. ಕಾರಿನ ಲೈಟ್ ಆಫ್ ಮಾಡಿಲ್ಲ. 

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು; ಸವಾರಿ ಬಲು ಜೋರು!

ಒಂದು ಕೋನಾ ಕಾರು ಬರೋಬ್ಬರಿ 1,026 ಕಿ.ಮೀ ಮೈಲೇಜ್ ನೀಡಿದ್ದರೆ, ಇನ್ನೆರಡು ಕೋನಾ ಕಾರುಗಳು 1,000 ಕಿ.ಮೀ ಮೈಲೇಜ್ ನೀಡಿದೆ. ಈ ಮೂಲಕ ದಾಖಲೆ ಬರೆದಿದೆ. 3 ದಿನಗಳ  ಕಾಲ ಕಾರು ಚಲಾಯಿಲಾಗಿದ್ದು, 36 ಚಾಲಕರು 3 ಕಾರನ್ನು ಚಲಾಯಿಸಿದ್ದಾರೆ. ಗರಿಷ್ಠ 31 ಕಿ.ಮೀ ವೇಗದಲ್ಲಿ ಪ್ರಯಾಣಿಸಿದ ಕಾರಣ 3 ದಿನ ತೆಗೆದುಕೊಂಡಿದೆ. 

ಕೋನಾ ಕಾರಿನ ಬ್ಯಾಟರಿ ಸಂಪೂರ್ಣ ಖಾಲಿಯಾದರೂ ಸರಿಸುಮಾರು 80 ರಿಂದ 100 ಮೀಟರ್ ಚಲಿಸುತ್ತದೆ ಎಂದು ಪರೀಕ್ಷೆ ವೇಳೆ ಬಯಲಾಗಿದೆ. ಕಾರಿನ ಬ್ಯಾಟರಿ ಶೇಕಡಾ 4 ರಷ್ಟಿದ್ದರೆ 30 ರಿಂದ 35 ಕಿ.ಮೀ ಪ್ರಯಾಣ ಸಾಧ್ಯವಿದೆ ಎಂದು ಪರೀಕ್ಷೆ ವೇಳೆ ಬಹಿರಂಗವಾಗಿದೆ.