ಬೆಂಗಳೂರು, [ಆ.08]: ರಾಜ್ಯ ಸರ್ಕಾರ ವಿರುದ್ಧ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೇವಡಿ ಮಾಡಿದ್ದಾರೆ.

 ಬೆಂಗಳೂರಿನಲ್ಲಿ  ಇಂದು [ಗುರುವಾರ] ಮಾತನಾಡಿದ ಜೆಡಿಎಸ್ ವರಿಷ್ಠ ದೇವೇಗೌಡ,  ವೈಮಾನಿಕ ಸಮೀಕ್ಷೆ ಮಾಡುವ ಸ್ಥಿತಿ ಮೀರಿದೆ. ಹೆಲಿಕಾಪ್ಟರ್ ಸಹಾಯ ಪಡೆದು ಜನರ ರಕ್ಷಣೆ ಮಾಡಬೇಕಿತ್ತು. ಆದ್ರೆ, ಯಡಿಯೂರಪ್ಪ ಸೂಕ್ತ ಕ್ರಮ ಕೈಗೊಂಡಿಲ್ಲ ಅಂತೆಲ್ಲ ವಾಗ್ದಾಳಿ ನಡೆಸಿದರು. 

ಜಲಪ್ರಳಯದಲ್ಲಿ ಕರುನಾಡು: ಸರ್ಕಾರ ಕೊಟ್ಟ ಮಾಹಿತಿ ಜಾಲಾಡು!

ಇನ್ನು ಪ್ರಜ್ವಲ್ ರೇವಣ್ಣ ಕೂಡಾ ಬಿಎಸ್ ವೈ ವಿರುದ್ಧ ಹರಿಹಾಯ್ದಿದ್ದು, ಯಡಿಯೂರಪ್ಪನವರಿಗೆ ಸರ್ಕಾರ ಬೀಳಿಸಲು ಇದ್ದ ಆತುರ, ಜನರ ಕಷ್ಟಕ್ಕೂ ಇರಬೇಕಿತ್ತು ಎಂದು ಕಿಡಿಕಾರಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಹಾಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿದ್ದು, ಸಿಎಂ ಯಡಿಯೂರಪ್ಪ ಅವರು ಬೆಳಗಾವಿ, ಬಾಗಲಕೋಟೆಯಲ್ಲಿ ನೆರೆ ಪ್ರವಾಹ ವೀಕ್ಷಣೆ ಮಾಡುತ್ತಿದ್ದಾರೆ. ಆದ್ರೆ ಸಿಎಂ ಆಗಿ  ಎರಡು ವಾರಗಳ ಕಳೆಯುತ್ತಾ ಬಂತು. ಇದುವರೆಗೂ ಸಂಪುಟ ರಚನೆ ಮಾಡಿಲ್ಲ. ಇದರಿಂದ ಪ್ರತಿಪಕ್ಷಗಳು ಬಿಎಸ್ ವೈ ವರನ್ನು ಟೀಕಿಸುತ್ತಿವೆ.