ಮಂಗಳೂರು[ಜು. 04] ಪುತ್ತೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್ ಮಾಡಿದ 8 ಜನರನ್ನು ಬಂಧಿಸಲಾಗಿದೆ.

ಮುರಳೀಧರ (29), ಚಂದ್ರಶೇಖರ ಮಯ್ಯ( 47), ಶ್ರೇಯಾನ್ಸ್ ಎಸ್ (20), ಪೂವಪ್ಪ ಕೆ.(26), ಪವನ್ ಕುಮಾರ್ ಡಿ(19), ಮೋಹಿತ್‌ ಪಿ ಜಿ(18), ಧ್ಯಾನ್‌ ಎ ಎನ್‌ (18) ಅದ್ವಿತ್‌ ಕುಮಾರ್‌ ನಾಯ್ಕ್‌(19) ಬಂಧಿತರು

ವಿಡಿಯೋ ವೈರಲ್ ಹಿನ್ನೆಲೆ ಸವಮೋಟೋ ಕೇಸು ದಾಖಲಿಸಿದ್ದ ಪುತ್ತೂರು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಪ್ರಕರಣ ಆರೋಪಿ ಪ್ರಖ್ಯಾತ್ ತನ್ನ ವಾಟ್ಸಪ್ ನಲ್ಲಿ ವಿಡಿಯೋ ಸ್ಟೇಟಸ್ ಹಾಕಿಕೊಂಡಿದ್ದ. ಅದನ್ನು ಮೋಹಿತ್ ಎಂಬಾತ ಡೌನ್ ಲೋಡ್ ಮಾಡಿ ಹರಿಬಿಟ್ಟಿದ್ದ ಎಂಬ ವಿಚಾರವನ್ನು ತಿಳಿಸಿದ್ದಾರೆ.

ಪುತ್ತೂರು ಪ್ರಕರಣ: ಊವರು ವಿದ್ಯಾರ್ಥಿಗಳ ಬಂಧನ

ಕಾಲೇಜು ಚುನಾವಣಾ ವೈಷಮ್ಯ ಹಿನ್ನೆಲೆಯಲ್ಲಿ  ಮೋಹಿತ್ ವಿಡಿಯೋ ವೈರಲ್ ಮಾಡಿದ್ದ. ಕಳೆದ ಫೆಬ್ರವರಿಯಲ್ಲಿ ನಡೆದಿದ್ದ ಪ್ರಕರಣ ವಿಡಿಯೋ ಮೂಲಕ ಬೆಳಕಿಗೆ ಬಂದಿದ್ದು ಬುಧವಾರ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು.

ಓರ್ವ ಹುಡುಗಿ ಜೊತೆ 3 ರಿಂದ 4 ಮಂದಿ ಹುಡುಗರು ಆತ್ಮೀಯ ಕೃತ್ಯದಲ್ಲಿ ತೊಡಗಿರುವ ವೀಡಿಯೋ ಒಂದು ವಾಟ್ಸಾಪ್ ಮೂಲಕ ಪ್ರಸಾರ ಮಾಡಲಾಗುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಪೊಲೀಸರು ಸುವಮೋಟೊ ಪ್ರಕರಣವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಉಲ್ಲೇಖಿತ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಬಾರದು ಅಥವಾ ಉಲ್ಲೇಖಿತ ವೀಡಿಯೊಗಳನ್ನು ಅವರ ಫೋನ್ ಕಂಪ್ಯೂಟರ್‌ಗಳಲ್ಲಿ ಉಳಿಸಬಾರದು ಎಂದು ನಾವು ಸಾರ್ವಜನಿಕರ ಸದಸ್ಯರನ್ನು ಕೋರುತ್ತೇವೆ, ಹಾಗೆ ಮಾಡುವುದು ಐಪಿಸಿಯ 354 ಸಿ ಮತ್ತು 66 ಇ, ಐಟಿ ಕಾಯ್ದೆಯ 66 ಎ ಮತ್ತು ವ್ಯಕ್ತಿಗಳು (ಗುಂಪು ನಿರ್ವಾಹಕರು ಸೇರಿದಂತೆ) ಅಡಿಯಲ್ಲಿ ಅಪರಾಧವಾಗಿದ್ದು ಬಂಧಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಎಸ್ ಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದು ಸಾಮಾಜಿಕ ತಾಣಗಳ ಮೇಲೆ ಕಣ್ಣಿಟ್ಟಿದ್ದಾರೆ.