ಗಾಂಧಿನಗರ(ಜ.19): ಅತ್ತ ಪ.ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ವಿಪಕ್ಷಗಳು ಮೆಗಾ ರ್ಯಾಲಿ ನಡೆಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುಡುಗುತ್ತಿದ್ದಾರೆ. ಇತ್ತ ಪ್ರಧಾನಿ ಮೋದಿ ಏಕಾಂಗಿಯಾಗಿ ಸೇನಾ ಟ್ಯಾಂಕರ್ ಮೇಲೆ ಸವಾರಿ ಮಾಡುತ್ತಿದ್ದಾರೆ.

ಗುಜರಾತ್‌ನ ಹಝಿರಾದಲ್ಲಿ ಎಲ್ & ಟಿ ಕಂಪನಿ ನಿರ್ಮಿಸಿದ ಸ್ವಯಂಚಾಲಿತ ಫಿರಂಗಿಗಳನ್ನು ಹೊಂದಿರುವ ಕೆ-9 ವಜ್ರ ಟ್ಯಾಂಕರ್‌ನಲ್ಲಿ ಪ್ರಧಾನಿ ಮೋದಿ ಸವಾರಿ ಮಾಡಿದರು. ಈ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾದ ಯಶಸ್ಸನ್ನು ಪ್ರಧಾನಿ ತೆರೆದಿಟ್ಟರು.

ಕೆ-9 ವಜ್ರ ಟ್ಯಾಂಕರ್ ಪರಿಶೀಲಿಸಿ ಸವಾರಿ ಮಾಡಿದ ಬಳಿಕ ಪ್ರಧಾನಿ ಮೋದಿ 10 ಸೆಕೆಂಡ್‌ಗಳ ವಿಡಿಯೋವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಭಾರತೀಯ ಸೇನೆ ಸುಮಾರು 30 ವರ್ಷಗಳ ನಂತರ ಇತ್ತೀಚಿಗಷ್ಟೇ ಕೆ-9 ವಜ್ರ ಟ್ಯಾಂಕರ್ ಸೇರಿದಂತೆ ಎರಡು ಹೊಸ ಫಿರಂಗಿಗಳನ್ನು ಸೇನೆಗೆ ಸೇರ್ಪಡೆ ಮಾಡಿಕೊಂಡಿದೆ. ಇವೆರಡೂ ಮೊದಲ ಬಾರಿಗೆ ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲಿವೆ.

ಹೊರಗೊಂದು ಕೂಗು 'ದೇಶ್ ಬಚಾವೋ': ಒಳಗೊಂದು ಕೂಗು 'ಮೋದಿ ಹಠಾವೋ'!