Asianet Suvarna News

ಮೋದಿ ಮನವಿಗೆ ಕಿಮ್ಮತ್ತು ನೀಡದ ಜನ, ರಾಜ್ಯದಲ್ಲಿ ಅಬ್ಬರಿಸಲಿದ್ದಾನೆ ವರುಣ; ಜು.18ರ ಟಾಪ್ 10 ಸುದ್ದಿ!

ಪ್ರವಾಸಿ ತಾಣಗಳಿಗೆ ತೆರಳುವವರು ಕೊರೋನಾ ಮಾರ್ಗಸೂಚಿ ಪಾಲಿಸಿ, ಜನಸಂದಣಿ ತಪ್ಪಿಸಿ ಎಂಬ ಮೋದಿ ಮನವಿಗೆ ಜನ ಕ್ಯಾರೇ ಎಂದಿಲ್ಲ. ಆದರೆ ಉತ್ತರ ಪ್ರದೇಶದ ಸಮೀಕ್ಷೆಯಲ್ಲಿ ಜನ ಬಿಜೆಪಿ ಮೇಲೆ ಭರವಸೆ ಇಟ್ಟಿರುವುದು ಬಯಲಾಗಿದೆ. ಇತ್ತ ಒಲಿಂಪಿಕ್ಸ್ ಅಥ್ಲೀಟ್‌ಗಳಿಗೆ ಸೆಕ್ಸ್ ವಿರೋಧಿ ಬೆಡ್ ನೀಡಲಾಗಿದೆ. ದರ್ಶನ್ ಮಾತಿನಿಂದ ರಕ್ಷಿತಾಗೆ ನೋವು, ಭಾರತ-ಶ್ರೀಲಂಕಾ ಏಕದಿನ ಪಂದ್ಯ ಸೇರಿದಂತೆ ಜುಲೈ 18ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

PM Narendra Modi request to Monsoon rain alert top 10 News Of July 18 ckm
Author
Bengaluru, First Published Jul 18, 2021, 4:58 PM IST
  • Facebook
  • Twitter
  • Whatsapp

ಮಗ ಮೋದಿ ಕ್ಯಾಬಿನೆಟ್‌ ಸಚಿವ: ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ತಂದೆ, ತಾಯಿ!

ಪ್ರಧಾನಿ ನರೇಂದ್ರ ಮೋದಿ ಎರಡು ವಾರಗಳ ಹಿಂದಷ್ಟೇ ತನ್ನ ಕ್ಯಾಬಿನೆಟ್‌ ವಿಸ್ತರಿಸಿದ್ದಾರೆ. ಈ ವೇಳೆ 43 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್. ಮುರುಗನ್‌ ಕೂಡಾ ರಾಜ್ಯ ಮಂತ್ರಿಯಾಗಿದ್ದಾರೆ.

ಒಲಿಂಪಿಕ್ಸ್ ಅಥ್ಲೀಟ್‌ಗಳಿಗೆ ಸೆಕ್ಸ್ ವಿರೋಧಿ ಬೆಡ್..!

ಟೋಕಿಯೊ ಒಲಿಂಪಿಕ್ ವಿಲೇಜ್‌ನಲ್ಲಿರುವ ಕಾರ್ಡ್‌ಬೋರ್ಡ್ ಹಾಸಿಗೆಗಳ ಫೋಟೋಗಳನ್ನು ಕ್ರೀಡಾಪಟು ಪಾಲ್ ಚೆಲಿಮೊ ಶೇರ್ ಮಾಡಿದ್ದಾರೆ.

ಉತ್ತರ ಪ್ರದೇಶ ಮತ್ತೆ ಬಿಜೆಪಿ ತೆಕ್ಕೆಗೆ: ಕೇಸರಿ ಪಾಳಯಕ್ಕೆ ಸಮೀಕ್ಷೆ ಸಿಹಿ!

ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶದಲ್ಲಿ ಜನರು ಈಗಲೂ ಬಿಜೆಪಿಯ ಮೇಲೆಯೇ ಹೆಚ್ಚು ಭರವಸೆ ಇಟ್ಟಿದ್ದಾರೆ. ಕೇಸರಿ ಪಕ್ಷದ ಪರ ಹೆಚ್ಚು ಒಲವು ವ್ಯಕ್ತಪಡಿಸಿದ್ದಾರೆ ಎಂಬ ಸಂಗತಿ ಟೈಮ್ಸ್‌ ನೌ- ಸಿ ವೋಟ​ರ್‍ಸ್ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

4 ದಿನ ರಾಜ್ಯದಲ್ಲಿ ಭಾರೀ ಮಳೆ : ಯಾವ ಜಿಲ್ಲೆಗಳಿಗೆ ಅಲರ್ಟ್..?

ರಾಜ್ಯದಲ್ಲಿ ಈಗಾಗಲೆ ವರುಣನ ಅಬ್ಬರ ಜೋರಾಗಿದೆ.  ಇನ್ನು 4 ದಿನಗಳ ಕಾಲ ರಾಜ್ಯಾದ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಹುಟ್ಟು ಹಬ್ಬ ದಿನವೇ ಟೀಂ ಇಂಡಿಯಾಗೆ ಡೆಬ್ಯೂ ಮಾಡಿದ ಭಾರತದ 2ನೇ ಕ್ರಿಕೆಟಿಗ ಇಶಾನ್ ಕಿಶಾನ್!

ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿ ಆರಂಭಗೊಂಡಿದೆ. ಕೊಲೊಂಬೊದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯದ ಮೂಲಕ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದಾರೆ.

ದರ್ಶನ್‌ ನನ್ನ ಬೆಸ್ಟ್‌ಫ್ರೆಂಡ್ ಆದರೆ ರಕ್ಷಿತಾಗೆ ನೋವಾಗಿದೆ: ನಿರ್ದೇಶಕ ಪ್ರೇಮ್

ನಟ ದರ್ಶನ್ ಯಾವುದೋ ವಿಚಾರದ ಬಗ್ಗೆ ಮಾತನಾಡುವಾಗ ನನ್ನ ಬಗ್ಗೆ ಮಾತನಾಡಿದ್ದಾರೆ. ದರ್ಶನ್‌ ನನಗೆ ತುಂಬಾನೇ ಕ್ಲೋಸ್ ಆದರೆ ಈ ರೀತಿ ಮಾತನಾಡಿದ್ದು ಶಾಕ್ ಆಯ್ತು.  ರಕ್ಷಿತಾ ಅವರಿಗೆ ಹರ್ಟ್ ಆಯ್ತು, ಈಗಲೂ ನನಗೆ ನಿಜಕ್ಕೂ ದರ್ಶನ್ ಹೀಗೆ ಮಾತನಾಡಿದ್ರಾ? ಅಂತ  ಪ್ರಶ್ನೆ ಮಾಡುತ್ತಿದ್ದಾರೆ. ಏನೇ ಇರಲಿ ಒಟ್ಟಿಗೆ ಭೇಟಿ ಆದಾಗ ಈ ವಿಚಾರದ ಬಗ್ಗೆ ಮಾತನಾಡುತ್ತೀವಿ.

'ವಿಕ್ರಾಂತ್ ರೋಣ' ಸಾಂಗ್ ಮೇಕಿಂಗ್ ವಿಡಿಯೋ, ಸುವರ್ಣ ನ್ಯೂಸ್‌ Exclusive!

ಸ್ಯಾಂಡಲ್‌ವುಡ್‌ ಅಂಗಳಕ್ಕೆ ಬಾಲಿವುಡ್ ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್ ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು ಎಲ್ಲಿ ನೋಡಿದರೂ ವಿಕ್ರಾಂತ್ ರೋಣ ತಂಡದ್ದೇ ಸುದ್ದಿ. 5 ಕೋಟಿ ವೆಚ್ಚದ ಸೆಟ್‌ನಲ್ಲಿ ಕಿಚ್ಚ ಸುದೀಪ್ ಜೊತೆ ಹೆಜ್ಜೆ ಹಾಕಿದ ಜಾಕ್ವೆಲಿನ್ ಅನುಭವ ಹೇಗಿತ್ತು? ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ...

ಆಪಲ್ ಹಿಂದಿಕ್ಕಿರುವ ಶಿಯೋಮಿ, ಈಗ ಜಗತ್ತಿನ 2ನೇ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ

ಚೀನಾ ಮೂಲದ, ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಶಿಯೋಮಿ 2021ರ ಸಾಲಿನ ಎರಡನೇ  ತ್ರೈಮಾಸಿಕದಲ್ಲಿ ಅಮೆರಿಕ ಮೂಲದ ಆಪಲ್‌ ಕಂಪನಿಯನ್ನು ಹಿಂದಿಕ್ಕಿದೆ. ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಸ್ಯಾಮ್ಸಂಗ್ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದರೆ, ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ವಿವೋ ಮತ್ತು ಒಪ್ಪೋ ಕಂಪನಿಗಳು ಮುಂದುವರಿದಿವೆ. 

ಮೋದಿ ಮನವಿಗೂ ಕಿಮ್ಮತ್ತಿಲ್ಲ: ಶಿಮ್ಲಾದಲ್ಲಿ ಜನಸಾಗರ: ವೈರಲ್ ಆಯ್ತು ವಿಡಿಯೋ!

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಾಸ್ಕ್ ಧರಿಸದೆ ಮಾರುಕಟ್ಟೆ ಹಾಗೂ ಪಾರ್ಕ್‌ಗಳಲ್ಲಿ ಸಂಚರಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇಷ್ಟೆಲ್ಲಾ, ಎಚ್ಚರಿಕೆಗಳನ್ನು ನೀಡಿದ್ದರೂ, ಶಿಮ್ಲಾದಲ್ಲಿ ಪ್ರವಾಸಿಗರು ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ.

Follow Us:
Download App:
  • android
  • ios