ಆಪಲ್ ಹಿಂದಿಕ್ಕಿರುವ ಶಿಯೋಮಿ, ಈಗ ಜಗತ್ತಿನ 2ನೇ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ

ಚೀನಾ ಮೂಲದ, ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಶಿಯೋಮಿ 2021ರ ಸಾಲಿನ ಎರಡನೇ  ತ್ರೈಮಾಸಿಕದಲ್ಲಿ ಅಮೆರಿಕ ಮೂಲದ ಆಪಲ್‌ ಕಂಪನಿಯನ್ನು ಹಿಂದಿಕ್ಕಿದೆ. ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಸ್ಯಾಮ್ಸಂಗ್ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದರೆ, ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ವಿವೋ ಮತ್ತು ಒಪ್ಪೋ ಕಂಪನಿಗಳು ಮುಂದುವರಿದಿವೆ. 

Xiaomi is now worlds No 2 smartphone maker says  canalys report

ಬಜೆಟ್ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಗ್ರಾಹಕರನ್ನು ಸೆಳೆದುಕೊಳ್ಳಲು ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಶಿಯೋಮಿ ಯಶಸ್ವಿಯಾಗಿದೆ. ಶಿಯೋಮಿ ಈಗ ಕೇವಲ ಚೀನಾ ಬ್ರ್ಯಾಂಡ್ ಆಗಿ ಉಳಿದಿಲ್ಲ. ಅದು ಜಾಗತಿಕ ಬ್ರ್ಯಾಂಡ್ ಆಗಿ ಬೆಳೆದಿದೆ. ಶಿಯೋಮಿಯ ಸಾಧನೆ ಸಾಲಿಗೆ ಈಗ ಮತ್ತೊಂದು ಗರಿ ಮೂಡಿದೆ.

2021ರ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಚೀನಾ ಮೂಲದ ಶಿಯೋಮಿ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ, ಅಮೆರಿಕದ ದಿಗ್ಗಜ, ಐಫೋನ್ ತಯಾರಿಕಾ ಕಂಪನಿ ಆಪಲ್ ಅನ್ನು ಹಿಂದಕ್ಕಿದೆ. ಈ ವಿಷಯವನ್ನು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೆನಾಲಿಸ್  ಇತ್ತೀಚಿಗೆ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ತಿಳಿಸಿದೆ.

ಆಗಸ್ಟ್‌ ಅಂತ್ಯಕ್ಕೆ ರಿಯಲ್‌ಮಿ ಲ್ಯಾಪ್‌ಟ್ಯಾಪ್ ಬಿಡುಗಡೆ?, ಏನೆಲ್ಲಾ ವಿಶೇಷಗಳು, ಬೆಲೆ ಎಷ್ಟು?

ಅಮೆರಿಕದ ಆಪಲ್‌ ಕಂಪನಿಯು ಅತ್ಯಾಧುನಿಕ ಮತ್ತು ಉತ್ಕೃಷ್ಟವಾಗಿರುವ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನಷ್ಟೇ ತಯಾರಿಸುವ ಆಪಲ್ ತಾಂತ್ರಿಕತೆಯಲ್ಲಿ ಶ್ರೀಮಂತಿಕೆಯನ್ನು ಸಾಧಿಸಿರುತ್ತದೆ. ಅಸಲಿಗೆ, ಸ್ಮಾರ್ಟ್‌ಫೋನ್‌ಗಳ ಬಳಕೆಯ ಗರಿಷ್ಠ ಸಾಧ್ಯತೆಗಳನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದೇ ಆಪಲ್. ಜೊತೆಗೆ, ಆಪಲ್ ತಯಾರಿಸುವ ಸ್ಮಾರ್ಟ್‌ಫೋನ್‌ಗಳು ಸುರಕ್ಷತೆಯ ದೃಷ್ಟಿಯಿಂದ ಇತರ ಎಲ್ಲ ಬ್ರ್ಯಾಂಡ್‌ಗಳಿಗಿಂತಲೂ ಮುಂದಿರುತ್ತವೆ.

ಇಂಥ ಆಪಲ್‌ ಕಂಪನಿಯನ್ನು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಶಿಯೋಮಿ ಹಿಂದಿಕ್ಕಿ ಮುಂದುವರಿದಿರುವುದು ಸಾಧನೆಯ ಸೇರಿ. ವಿಶೇಷ ಏನೆಂದರೆ, ಇದೇ ಮೊದಲ ಬಾರಿಗೆ ಶಿಯೋಮಿ ಒಟ್ಟಾರೆ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಎರಡನೇ ಸ್ಥಾನಕ್ಕೇರಿದೆ. ಎರಡನೇ ತ್ರೈಮಾಸಿಕದಲ್ಲಿ ಶಿಯೋಮಿ ಜಗತ್ತಿನಾದ್ಯಂತ ಮಾರುಕಟ್ಟೆಯಲ್ಲಿ ಶೇ.27ರಷ್ಟು ಪಾಲನ್ನು ಹೊಂದಿದೆ. ಇದು ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ, ಶೇ.3ರಷ್ಟು ಹೆಚ್ಚಳವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇನ್ನು ಮೊದಲನೇ ಸ್ಥಾನವನ್ನು ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಸ್ಯಾಮ್ಸಂಗ್ ಕಾಯ್ದುಕೊಂಡಿದೆ.

Online Education: ಯಾವ ಟ್ಯಾಬ್ ಕೊಡಬೇಕು?ಈ ಟ್ಯಾಬ್‌ ಟ್ರೈ ಮಾಡಿ

ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಜಾಗತಿಕ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಶೇ.12ರಷ್ಟು ಹೆಚ್ಚಳವಾಗಿದೆ. ಈ ಪೈಕಿ ಶೇ.19ರಷ್ಟು ಪಾಲಿನೊಂದಿಗೆ ಸ್ಯಾಮ್ಸಂಗ್ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. 14ರಷ್ಟು ಪ್ರತಿಶತದೊಂದಿಗೆ ಆಪಲ್ ಮೂರನೇ ಸ್ಥಾನಕ್ಕೆಕುಸಿದಿದೆ. ಸ್ಯಾಮ್ಸಂಗ್ ಮತ್ತು ಆಪಲ್‌ಗೆ ಹೋಲಿಸಿದರೆ ಶಿಯೋಮಿ ಉತ್ಪಾದಿಸುವ ಸ್ಮಾರ್ಟ್‌ಫೋನ್‌ಗಳು ಶೇ.40ರಿಂದ ಶೇ.75ರಷ್ಟು ಅಗ್ಗವಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ಹಲವು ವೆಬ್‌ತಾಣಗಳು ವರದಿ ಮಾಡಿವೆ. ವಿಶೇಷ ಎಂದರೆ, ಶಿಯೋಮಿ ಕಂಪನಿಯ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳೇ  ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಕಂಡಿವೆ. 

ಲ್ಯಾಟಿನ್ ಅಮೆರಿಕದಲ್ಲಿ ಶೇ.300, ಆಫ್ರಿಕಾದಲ್ಲಿ ಶೇ.150 ಮತ್ತು ವೆಸ್ಟರ್ನ್‌ ಯರೋಪ್‌ನಲ್ಲಿ  ಶೇ.50ರಷ್ಟು ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಹೆಚ್ಚಳವಾಗಿದೆ. ಇದೇ ವೇಳೆ, ಜಾಗತಿಕ ಟಾಪ್‌ 5 ಪಟ್ಟಿಯಲ್ಲಿ ಚೀನಾ ಮೂಲದ್ದೇ ಆದ ವಿವೋ ಮತ್ತು ಒಪ್ಪೋ ಉತ್ತಮ ಪ್ರದರ್ಶನವನ್ನು ತೋರುತ್ತಿವೆ. 2021ರ ಎರಡನೇ ತ್ರೈಮಾಸಿಕದಲ್ಲಿ ಈ ಎರಡು ಕಂಪನಿ ಶೇ.10ರಷ್ಟು ಸ್ಮಾರ್ಟ್‌ಫೋನ್‌ಗಳ ಮಾರಾಟದೊಂದಿಗೆ ನಾಲ್ಕು ಮತ್ತು ಐದನೇ ಸ್ಥಾನವನ್ನು ಆಕ್ರಮಿಸಿಕೊಂಡಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸ್ಯಾಮ್ಸಂಗ್ ವರ್ಷದಿಂದ ವರ್ಷಕ್ಕೆ 15 ಪ್ರತಿಶತದಷ್ಟು ಸ್ಥಿರವಾದ ಬೆಳವಣಿಗೆಯನ್ನು ಹೊಂದಿದ್ದರೆ, ಶಿಯೋಮಿಯ ಜಾಗತಿಕವಾಗಿ 83 ಪ್ರತಿಶತದಷ್ಟು ಮತ್ತು ಆಪಲ್ 3 ನೇ ಸ್ಥಾನದಲ್ಲಿ 1 ಶೇಕಡಾ ಏರಿಕೆಯಾಗಿದೆ ಎಂದು ವರದಿ ತೋರಿಸುತ್ತದೆ. ಒಪ್ಪೋ ಮತ್ತು ವಿವೋ ಕಂಪನಿಗಳು ಕ್ರಮವಾಗಿ 28 ಪ್ರತಿಶತ ಮತ್ತು 27 ಪ್ರತಿಶತದಷ್ಟು ಹೆಚ್ಚಾಗಿದೆ ಎನ್ನಲಾಗುತ್ತಿದೆ.

Redmi Note 10T 5G ಜು.20ಕ್ಕೆ ಬಿಡುಗಡೆ, ಫಾಸ್ಟ್ ಚಾರ್ಜಿಂಗ್‌ ಸೇರಿ ಹಲವು ಫೀಚರ್ಸ್

ಭಾರತೀಯ ಮಾರುಕಟ್ಟೆಯಲ್ಲಿ ಆಪಲ್‌ಗಿಂತ ಚೀನಾ ಮೂಲದ ಶಿಯೋಮಿ ಬ್ರ್ಯಾಂಡ್ ಹೆಚ್ಚು ತನ್ನ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಬಜೆಟ್ ಹಾಗೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಶಿಯೋಮಿ ಭಾರತದ ಮಾರುಕಟ್ಟೆಯಲ್ಲಿ ಭದ್ರವಾದ ಸ್ಥಾನವನ್ನು ಹೊಂದಿದೆ. ಸ್ಯಾಮ್ಸಂಗ್‌ ಕೂಡ ಒಳ್ಳೆಯ ಸ್ಥಿತಿಯಲ್ಲಿದ್ದು, ಚೀನಾ ಮೂಲದ ವಿವೋ, ಒಪ್ಪೋ, ಒನ್‌ಪ್ಲಸ್, ರಿಯಲ್‌ಮೀ ಸೇರಿದಂತೆ ಇನ್ನಿತರ  ಬ್ರ್ಯಾಂಡ್‌ಗಳಿಗೂ ವ್ಯಾಪಕ ಗ್ರಾಹಕ ವಲಯ ಸೃಷ್ಟಿಯಾಗಿರುವುದನ್ನು ಅಲ್ಲಗಳೆಯುವಂತಿಲ್ಲ.

Latest Videos
Follow Us:
Download App:
  • android
  • ios