ನವದೆಹಲಿ [ನ.07]: ದೇಶದ ವಿವಿಧ ಯೋಜನೆಗಳ ಅಭಿವೃದ್ಧಿ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಗತಿ (ಚಟುವಟಿಕೆ ಸಹಿತದ ಆಡಳಿತ ಮತ್ತು ಸಮಯಕ್ಕೆ ಸರಿಯಾಗಿ ಯೋಜನೆಗಳ ಜಾರಿ) ವೇದಿಕೆ ಮೂಲಕ ಪರಿಶೀಲನಾ ಸಭೆ ನಡೆಸಿದರು. 

ಬುಧವಾರ ನಡೆದ ಪ್ರಗತಿ ಸಭೆಯಲ್ಲಿ ಮೋದಿ ಅವರು, ನವೀಕರೀಸಬಹುದಾದ ಇಂಧನ ಪ್ರಸರಣ ವನ್ನು ಬಲಪಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಗ್ರಿಡ್ ನಿರ್ಮಾಣ ಯೋಜ ನೆಯಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಮಾಡಿರುವ ಪ್ರಗತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಆರ್ಥಿಕತೆಗೆ ಕೇಂದ್ರದ ಮತ್ತೊಂದು ಟಾನಿಕ್...

ಯಥೇಚ್ಛ ಪ್ರಮಾಣದ ನವೀಕರಿಸಬಹುದಾದ ಇಂಧನ ಸಂಪನ್ಮೂಲ ಹೊಂದಿದ ಕರ್ನಾಟಕ, ರಾಜಸ್ಥಾನ, ತಮಿಳುನಾಡು ಸೇರಿದಂತೆ 8 ರಾಜ್ಯಗಳ ನಡುವೆ ಗ್ರಿಡ್ ರಚನೆಯನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ.

ನವೆಂಬರ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ