Asianet Suvarna News Asianet Suvarna News

ಆರ್ಥಿಕತೆಗೆ ಕೇಂದ್ರದ ಮತ್ತೊಂದು ಟಾನಿಕ್

ಸಾಮಾನ್ಯವಾಗಿ ತೆರಿಗೆ ಕಡಿತ ಪ್ರಸ್ತಾವಗಳನ್ನು ಕೇಂದ್ರ ಹಣಕಾಸು ಬಜೆಟ್‌ನಲ್ಲಿ ಮಂಡಿಸಲಾಗುತ್ತದೆ. ಈ ಬಾರಿ ಫೆ.3ರಂದು ಮುಂಗಡಪತ್ರ ಮಂಡನೆಯಾಗಬೇಕಿದೆ. ಆದರೆ ಅದಕ್ಕೂ ಮುನ್ನವೇ ಅಂದರೆ, ನವೆಂಬರ್‌ ಅಂತ್ಯಕ್ಕೇ ತೆರಿಗೆ ಇಳಿಕೆಯನ್ನು ಸರ್ಕಾರ ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ.

Huge tax cuts likely as Sitharaman PM May take more steps  to bring in Forex
Author
Bengaluru, First Published Oct 30, 2019, 8:01 AM IST

ನವದೆಹಲಿ (ಅ. 30): ಆರ್ಥಿಕತೆಗೆ ಉತ್ತೇಜನ ನೀಡಲು ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ, ಲಾಂಗ್‌ ಟಮ್‌ರ್‍ ಕ್ಯಾಪಿಟನ್‌ ಗೇನ್ಸ್‌ ಟ್ಯಾಕ್ಸ್‌ (ದೀರ್ಘಾವಧಿ ಹೂಡಿಕೆಯನ್ನು ಮಾರಾಟ ಮಾಡಿದಾಗ ಬರುವ ಲಾಭದ ಮೇಲಿನ ತೆರಿಗೆ), ಸೆಕ್ಯುರಿಟೀಸ್‌ ಟ್ರಾನ್ಸಾಕ್ಸನ್‌ ಟ್ಯಾಕ್ಸ್‌ (ಷೇರು ವಹಿವಾಟು ತೆರಿಗೆ) ಹಾಗೂ ಡಿವಿಡೆಂಡ್‌ ವಿತರಣಾ ತೆರಿಗೆ ದರಗಳನ್ನು ಕಡಿತಗೊಳಿಸಲು ಮುಂದಾಗಿದೆ.

ಸಾಮಾನ್ಯವಾಗಿ ತೆರಿಗೆ ಕಡಿತ ಪ್ರಸ್ತಾವಗಳನ್ನು ಕೇಂದ್ರ ಹಣಕಾಸು ಬಜೆಟ್‌ನಲ್ಲಿ ಮಂಡಿಸಲಾಗುತ್ತದೆ. ಈ ಬಾರಿ ಫೆ.3ರಂದು ಮುಂಗಡಪತ್ರ ಮಂಡನೆಯಾಗಬೇಕಿದೆ. ಆದರೆ ಅದಕ್ಕೂ ಮುನ್ನವೇ ಅಂದರೆ, ನವೆಂಬರ್‌ ಅಂತ್ಯಕ್ಕೇ ತೆರಿಗೆ ಇಳಿಕೆಯನ್ನು ಸರ್ಕಾರ ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ.

ನ. 01 ರವರೆಗೆ ಕಾಯಿರಿ: ಎಸ್ ಬಿಐ ಕೊಡುವ ಕಹಿ ಸುದ್ದಿ ಏನೆಂದು ನೋಡಿರಿ!

ಈ ಸಂಬಂಧ ಪ್ರಧಾನಮಂತ್ರಿ ಕಾರ್ಯಾಲಯ ಈಗಾಗಲೇ ಹಣಕಾಸು ಸಚಿವಾಲಯದ ಕಂದಾಯ ಇಲಾಖೆ ಹಾಗೂ ನೀತಿ ಆಯೋಗದ ಜತೆ ಸಮಾಲೋಚನೆ ಆರಂಭಿಸಿದೆ. ಹೂಡಿಕೆದಾರರ ಧನಾತ್ಮಕ ಭಾವನೆ ವೃದ್ಧಿಸಲು ಹಾಗೂ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ವಿದೇಶಿ ವಿನಿಮಯವನ್ನು ತರಲು ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತೆರಿಗೆ ಕಡಿತಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಈಗಾಗಲೇ ಅಧಿಕಾರಿಗಳ ತಂಡ ಕಾರ್ಯಪ್ರವೃತ್ತವಾಗಿದ್ದು, ನವೆಂಬರ್‌ ಅಂತ್ಯಕ್ಕೆ ಜಾರಿಗೆ ತರಲಾಗುತ್ತದೆ ಎಂದು ಮೂಲಗಳು ವಿವರಿಸಿವೆ.

ಆರ್ಥಿಕತೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಕಾರ್ಪೋರೆಟ್‌ ತೆರಿಗೆ ದರಗಳನ್ನು ಇಳಿಕೆ ಮಾಡಿದೆ. ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಕಂಪನಿಗಳ ಮಾರಾಟಕ್ಕೆ ಅನುವು ಮಾಡಿಕೊಟ್ಟಿದೆ. ಇಲಾಖಾವರು ಬಜೆಟ್‌ ಅನುದಾನವನ್ನು ವ್ಯಯಿಸುವಂತೆಯೂ ಸೂಚನೆ ನೀಡಿದೆ. ಬ್ಯಾಂಕುಗಳ ವಿಲೀನ ಕಸರತ್ತಿನ ಜತೆಗೆ, ಸಾಲ ಮೇಳವನ್ನು ಕೂಡ ಆಯೋಜನೆ ಮಾಡಿದೆ.

Follow Us:
Download App:
  • android
  • ios