ನವದೆಹಲಿ: ದೇಶದೆಲ್ಲೆಡೆ ಎಲ್ಲರನ್ನು ಸೆಳೆಯುತ್ತಿರುವ ಫಿಟ್ನೆಸ್ ಚಾಲೆಂಜ್ ಗೆ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ನಾಮಿನೇಟ್ ಮಾಡಿದ್ದಾರೆ. ನಾಮಿನೇಶನ್ ಸ್ವೀಕರಿಸಿದ ಕುಮಾರಸ್ವಾಮಿ ಅಷ್ಟೇ ದಿಟ್ಟ ಪ್ರತಿಕ್ರಿಯೆ ನೀಡಿದ್ದಾರೆ. 

ಕೊಹ್ಲಿ ಆಯ್ತು ಇದೀಗ ಪ್ರಧಾನಿಗೆ ರಾಹುಲ್ ಚಾಲೆಂಜ್

ಒಂದು ಕಡೆ ಪ್ರತಿದಿನದ ರಾಜಕಾರಣದ ಒತ್ತಡದ ಬದುಕಿನಲ್ಲಿರುವ ನಾಯಕರಿಗೆ ಫಿಟ್ನೆಸ್ ಕಾಪಾಡಿಕೊಳ್ಳುವುದು ಒಂದು ಸವಾಲೆ ಆಗಿದೆ. ಆದರೆ ಮೋದಿ ತಾವು ಬೆಳಗ್ಗೆ ಯೋಗ ಮತ್ತು ವಾಕಿಂಗ್ ಜತೆಗೆ ಮಾಡುವ ಒಂದಿಷ್ಟು ವ್ಯಾಯಾಮಗಳನ್ನು ಮೋದಿ ಟ್ವಿಟರ್ ಗೆ ಅಪ್ ಲೋಡ್ ಮಾಡಿದ್ದಾರೆ.

ಮೋದಿ ತಾವು ವಾಕಿಂಗ್ ಮಾಡುವ ವಿಡಿಯೋವನ್ನು ಅಪ್ ಲೋಡ್ ಮಾಡುವುದರೊಂದಿಗೆ ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಟೆಬಲ್ ಟೆನಿಸ್ ತಾರೆ ಮಾನಿಕಾ ಭಾತ್ರಾ ಅವರನ್ನು ನಾಮಿನೇಟ್ ಮಾಡಿದ್ದಾರೆ.

ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ ಮತ್ತಿಬ್ಬರು ಸಿನಿಮಾ ಸ್ಟಾರ್’ಗಳು

ಮೋದಿ ಸವಲಾನ್ನು ಸ್ವೀಕರಿಸಿರುವ ಕುಮಾರಸ್ವಾಮಿ, ನನ್ನ ಆರೋಗ್ಯದ ಕುರಿತಾಗಿ ನೀವು ಕಾಳಜಿ ವಹಿಸಿರುವುದಕ್ಕೆ ಧನ್ಯವಾದ. ಯೋಗ ನನ್ನ ಪ್ರತಿದಿನದ ವ್ಯಾಯಾಮದ ಭಾಗವಾಗಿದೆ. ನಾನು ನನ್ನ ರಾಜ್ಯದ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಬೇಕಿದ್ದು ನಿಮ್ಮ ಸಹಕಾರ ಅಗತ್ಯವಾಗಿದೆ ಎಂದು ಪ್ರತಿಕ್ರಿಯೆ  ನೀಡಿದ್ದಾರೆ. ಈ ಮೂಲಕ ಕೇಂದ್ರದಿಂದ  ರಾಜ್ಯದ ಅಭಿವೃದ್ದಿಗೆ ಸಂಬಂಧಿಸಿ ಸಕಲ ಸಹಕಾರ ಸಿಗಬೇಕು ಎಂಬ ಸಂದೇಶವನ್ನು ಎಚ್ ಡಿಕೆ ರವಾನಿಸಿದ್ದಾರೆ.