ಪ್ರಧಾನಿ ಮೋದಿ ಹುಟ್ಟು ಹಬ್ಬ ಸಡಗರ, ನೋರಾ ಕಾಪಾಡಿತು ಉಂಗುರ; ಸೆ.17ರ ಟಾಪ್ 10 ಸುದ್ದಿ!
ಪ್ರಧಾನಿ ಮೋದಿ 71ನೇ ಹುಟ್ಟು ಹಬ್ಬ ಪ್ರಯುಕ್ತ ಮೆಘಾ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇತ್ತ ಟೀಂ ಇಂಡಿಯಾ ಟಿ20 ನಾಯಕತ್ವದಿಂದ ಕೊಹ್ಲಿ ಕೆಳಗಿಳಿಯಲು ಏನು ಕಾರಣ ಅನ್ನೋ ಚರ್ಚೆ ಜೋರಾಗಿದೆ. ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ತರಲು ಹಲವು ರಾಜ್ಯಗಳು ವಿರೋಧಿಸಿದೆ. ಸಿದ್ದರಾಮಯ್ಯಗೆ ಪ್ರತಾಪ್ ಸಿಂಗ್ ಟಾಂಗ್, ನಡು ಬೀದಿಯಲ್ಲಿ ನೋರಾ ಕಾಪಾಡಿದ ಉಂಗುರ ಸೇರಿದಂತೆ ಸೆಪ್ಟೆಂಬರ್ 17ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಮೋದಿ ಹುಟ್ಟುಹಬ್ಬಕ್ಕೆ ಮೇಗಾ ವ್ಯಾಕ್ಸಿನೇಶನ್ ಗಿಫ್ಟ್; ಇದುವರೆಗೆ 1.4 ಕೋಟಿ ಡೋಸ್!
ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬಕ್ಕೆ ಕೇಂದ್ರ ಆರೋಗ್ಯ ಇಲಾಖೆ ಮೆಘಾ ವ್ಯಾಕ್ಸಿನೇಶನ್ ಡ್ರೈವ್‌ಗೆ ಟಾಲನೆ ನೀಡಿದೆ. ಮೋದಿ 71ನೇ ಹುಟ್ಟು ಹಬ್ಬಕ್ಕೆ ದೇಶದಲ್ಲಿ ದಾಖಲೆಯ ಪ್ರಮಾಣದಲ್ಲಿ ಲಸಿಕೆ ಹಾಕಲು ಆರೋಗ್ಯ ಇಲಾಖೆ ಮುಂದಾಗಿದೆ. ಇಂದು ಬೆಳಗ್ಗೆಯಿಂದ ಆರಂಭಗೊಂಡಿರು ಮೆಘಾ ವ್ಯಾಕ್ಸಿನೇಶನ್ ಡ್ರೈವ್‌ಗೆ ಉತ್ತಮ ಸ್ಪಂದನೆ ಸಿಕ್ಕಿದೆ. 3 ಗಂಟೆ ವರೆಗಿನ ಕೋವಿನ್ ಅಂಕಿ ಅಂಶದ ಪ್ರಕಾರ 1.4 ಕೋಟಿ ಡೋಸ್ ಹಾಕಲಾಗಿದೆ. ಇದು ಅತ್ಯಧಿಕ ದಾಖಲೆಯಾಗಿದೆ
ಗುಜರಾತಿನ ಸಾಮಾನ್ಯ ಬಾಲಕ : ಜಗತ್ತನ್ನೇ ಭಾರತದತ್ತ ತಿರುಗಿಸಿದ ಸಾಧಕ!
ಗುಜರಾತಿನ ವಡ್‌ನಗರದ ಬಡ ಕುಟುಂಬದಲ್ಲಿ ಜನಿಸಿದ ನರೇಂದ್ರ ಮೋದಿ ದೇಶದ ಉನ್ನತ ಸ್ಥಾನವೇರುವ ಮುನ್ನ ಸವೆಸಿದ ಹಾದಿ ಹೂವಿನ ಹಾಸಿನದ್ದಲ್ಲ. ಇಡುವ ಪ್ರತಿ ಹೆಜ್ಜೆಯೂ ಸವಾಲಿನ ಮುಳ್ಳುಗಳ ಮೇಲೇ ಆಗಿತ್ತು. ಆದಾಗ್ಯೂ ಬಡತನ, ನೋವು, ಸಂಕಷ್ಟಗಳನ್ನೆಲ್ಲಾ ಮೆಟ್ಟಿನಿಂತು ಇಂದು ಇಡೀ ದೇಶ ತಮ್ಮ ನಾಮ ಜಪಿಸುವಂತೆ ಮಾಡಿದ್ದು ಅಂತಿಂಥ ಸಾಧನೆಯಲ್ಲ. ಇಡೀ ಜಗತ್ತು ಭಾರತದ ಕಡೆ ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದೆ ಎಂದರೆ ಅದಕ್ಕೆ ಕಾರಣ ನರೇಂದ್ರ ಮೋದಿ ಅವರಲ್ಲಿದ್ದ ದೃಢ ನಿಶ್ಚಯ.
ತಾಲಿಬಾನ್ ಸರ್ಕಾರದಲ್ಲಿ ಎರಡು ಬಣಗಳ ಮಧ್ಯೆ ತೀವ್ರಗೊಂಡ ಕಿತ್ತಾಟ
ಅಷ್ಘಾನಿಸ್ತಾನದಲ್ಲಿ ಇತ್ತೀಚೆಗಷ್ಟೇ ಸರ್ಕಾರ ರಚನೆ ಮಾಡಿದ ತಾಲಿಬಾನ್‌ನಲ್ಲಿ ಎರಡು ಬಣಗಳ ನಡುವಿನ ಭಿನ್ನಮತ ಸ್ಫೋಟಗೊಂಡಿದೆ. ತಾಲಿಬಾನ್ ಸರ್ಕಾರದ ಕ್ಯಾಬಿನೆಟ್ ಸದಸ್ಯರು ಸಿದ್ಧಾಂತವಾದಿಗಳು ಮತ್ತು ವ್ಯವಹಾರಿಕ ಬಣಗಳಾಗಿ ವಿಭಜನೆಗೊಂಡಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪದತ್ಯಾಗಕ್ಕೆ ಒತ್ತಡವೇ ಕಾರಣವಾಯ್ತಾ..?
ಯುಎಇಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಯ ಬಳಿಕ ಟಿ20 ನಾಯಕ ಸ್ಥಾನದಿಂದ ನಿರ್ಗಮಿಸುವುದಾಗಿ ವಿರಾಟ್ ಕೊಹ್ಲಿ ಗುರುವಾರ ಘೋಷಿಸಿದ್ದಾರೆ. ಆದರೆ, ಏಕದಿನ ಮತ್ತು ಟೆಸ್ಟ್ ತಂಡದ ನಾಯಕನಾಗಿ ಮುಂದುವರೆಯುವುದಾಗಿ ಇದೇ ವೇಳೆ ತಿಳಿಸಿದ್ದಾರೆ. ಟೀಂ ನಾಯಕನ ಹುದ್ದೆಯಿಂದ ಕೊಹ್ಲಿ ಕಣಕ್ಕಿಳಿಯಲು ಒತ್ತಡವೇ ಕಾರಣವಾಯ್ತಾ ಎನ್ನುವ ಅನುಮಾನ ಆರಂಭವಾಗಿದೆ.
ನಡು ಬೀದಿಯಲ್ಲಿ ನೋರಾ ಅವತಾರ..ಕಾಪಾಡಿದ್ದು ಒಂದೇ ಉಂಗುರ!
ಬಾಲಿವುಡ್ ನಟಿ ನೋರಾ ಫತೇಹಿ ವೈಟ್ ಕಟೌಟ್ ಉಡುಪಿನಲ್ಲಿ ಸುಂದರವಾಗಿ ಕಂಡುಬಂದಿದ್ದಾರೆ. ಸ್ಟೈಲಿಷ್ ಉಡುಪಿನಲ್ಲಿ ಹೊರಗೆ ಬಂದ ನಟಿಯ ಬಾಡಿಕಾನ್ ಡ್ರೆಸ್ ಲುಕ್ ಈಗ ವೈರಲ್ ಆಗಿದೆ.
ಜಿಎಸ್‌ಟಿ ವ್ಯಾಪ್ತಿಗೆ ತೈಲೋದ್ಯಮ ತರಲು ರಾಜ್ಯಗಳ ವಿರೋಧ, ಯಾಕೆ..?
ತೈಲೋದ್ಯಮವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಒಂದು ವೇಳೆ ತೈಲೋತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಶೇ. 50 ರಷ್ಟು ತೆರಿಗೆ ಕಡಿತ ಸಾಧ್ಯತೆ ಇದೆ. ಹೀಗಾಗಿ ಬೇಡ ಎನ್ನುತ್ತಿವೆ ರಾಜ್ಯಗಳು. ದಕ್ಷಿಣದ ರಾಜ್ಯಗಳು ಹೆಚ್ಚು ತೆರಿಗೆ ಪಾಲು ಹೊಂದಿವೆ.
ಯೂಟ್ಯೂಬ್‌ನಲ್ಲಿ ಲಕ್ಷಗಟ್ಟಲೆ ಸಂಪಾದಿಸ್ತಾರೆ ಕೇಂದ್ರ ಸಚಿವ ನಿತಿನ್ ಗಡ್ಕರಿ
ಕೇಂದ್ರ ಸಚಿವ ನಿತಿನಗ ಗಡ್ಕರಿ ಅವರು ತಮ್ಮ ಲಾಕ್‌ಡೌನ್ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಕೊರೋನಾ ಕಾಲದಲ್ಲಿ ಲಾಕ್‌ಡೌನ್ ಆದಾಗ ತಾವು ಮನೆಯಲ್ಲೇ ತಮ್ಮ ಸಮಯವನ್ನು ಕಳೆದಿದ್ದು ಹೇಗೆ ಎಂಬುದನ್ನು ತಿಳಿಸಿದ್ದಾರೆ.
ಎಟಿಎಂ ಮುಂದೆ ಪುಲ್ ರಶ್ : ಕಾರಣ ಖಾತೆಗೆ ಕೋಟಿ ಹಣ ಬಂದಿರುವ ಎಂಬ ಸುದ್ದಿ
ಬಿಹಾರದ ಗ್ರಾಮವೊಂದರ ಇಬ್ಬರು ಶಾಲಾ ಬಾಲಕರ ಬ್ಯಾಂಕ್ ಖಾತೆಯಲ್ಲಿ 900 ಕೋಟಿ ರು.ಗೂ ಹೆಚ್ಚಿನ ಹಣ ಜಮೆ ಆಗಿರುವ ಅಚ್ಚರಿಯ ಘಟನೆ ನಡೆದಿದೆ. ಅದರ ಬೆನ್ನಲ್ಲೇ ಗ್ರಾಮಸ್ಥರೆಲ್ಲಾ ತಮ್ಮ ಖಾತೆಗೇನಾದರೂ ಈ ರೀತಿಯ ಹಣ ಜಮೆ ಆಗಿದೆಯೇ ಎಂದು ಪರಿಶೀಲಿಸಲು ಎಟಿಎಂಗಳಿಗೆ ಮುಗಿಬಿದ್ದ ಘಟನೆ ನಡೆದಿದೆ.
ಸಿದ್ದರಾಮಯ್ಯನವರಿಗೆ ಈಗ ಪ್ರೀತಿ ಬಂದಿದೆ: ಪ್ರತಾಪ್ ಸಿಂಹ ಟಾಂಗ್
ದೇಗುಲ ತೆರವು ವಿಚಾರ ಈಗ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದಾರೆ.