ಎಟಿಎಂ ಮುಂದೆ ಪುಲ್ ರಶ್ : ಕಾರಣ ಖಾತೆಗೆ ಕೋಟಿ ಹಣ ಬಂದಿರುವ ಎಂಬ ಸುದ್ದಿ
- ಬಿಹಾರದ ಗ್ರಾಮವೊಂದರ ಇಬ್ಬರು ಶಾಲಾ ಬಾಲಕರ ಬ್ಯಾಂಕ್ ಖಾತೆಯಲ್ಲಿ 900 ಕೋಟಿ ರು
- ತಮ್ಮ ಖಾತೆಗೇನಾದರೂ ಈ ರೀತಿಯ ಹಣ ಜಮೆ ಆಗಿದೆಯೇ ಎಂದು ಪರಿಶೀಲಿಸಲು ಎಟಿಎಂಗಳಿಗೆ ಮುಗಿಬಿದ್ದ ಗ್ರಾಮಸ್ಥರು
ಪಟನಾ (ಸೆ.17): ಬಿಹಾರದ ಗ್ರಾಮವೊಂದರ ಇಬ್ಬರು ಶಾಲಾ ಬಾಲಕರ ಬ್ಯಾಂಕ್ ಖಾತೆಯಲ್ಲಿ 900 ಕೋಟಿ ರು.ಗೂ ಹೆಚ್ಚಿನ ಹಣ ಜಮೆ ಆಗಿರುವ ಅಚ್ಚರಿಯ ಘಟನೆ ನಡೆದಿದೆ. ಅದರ ಬೆನ್ನಲ್ಲೇ ಗ್ರಾಮಸ್ಥರೆಲ್ಲಾ ತಮ್ಮ ಖಾತೆಗೇನಾದರೂ ಈ ರೀತಿಯ ಹಣ ಜಮೆ ಆಗಿದೆಯೇ ಎಂದು ಪರಿಶೀಲಿಸಲು ಎಟಿಎಂಗಳಿಗೆ ಮುಗಿಬಿದ್ದ ಘಟನೆ ನಡೆದಿದೆ.
ಬಿಹಾರ ಸರ್ಕಾರ ಮಕ್ಕಳಿಗೆ ಶಾಲಾ ಸಮವಸ್ತ್ರ ಮತ್ತು ಬ್ಯಾಗ್ ಖರೀದಿಗೆ ಅಗತ್ಯವಾದ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತದೆ. ಹೀಗಾಗಿ ಹಣ ಬಂದಿದೆಯೇ ಎಂದು ಪರಿಶೀಲಿಸಲು ಇಬ್ಬರು ಬಾಲಕರು ಸಮೀಪದ ಕಂಪ್ಯೂಟರ್ ಸೆಂಟರ್‌ಗೆ ಹೋಗಿದ್ದರು. ಪರಿಶೀಲನೆ ವೇಳೆ 6ನೇ ತರಗತಿ ವಿದ್ಯಾಥಿ ಆಶಿಶ್ ಎಂಬಾತನ ಖಾತೆಗೆ 6.2 ಕೋಟಿ ರು. ಮತ್ತು ಗುರುಚರಣ್ ವಿಶ್ವಾಸ್ ಎಂಬಾತನ ಖಾತೆಗೆ 900 ಕೋಟಿ ರು.ನಷ್ಟುಭಾರೀ ಹಣ ಜಮೆ ಆಗಿರುವುದು ಕಂಡುಬಂದಿದೆ. ಇದನ್ನು ನೋಡಿ ಕಂಪ್ಯೂಟರ್ ಅಂಗಡಿಯ ಮಾಲೀಕ ಮತ್ತು ಬಾಲಕರು ದಂಗಾಗಿ ಹೋಗಿದ್ದಾರೆ.
ಇದು ಮೋದಿ ನೀಡಿದ ಹಣ ಎಂದು ತಪ್ಪಾಗಿ ಜಮೆ ಆದ 5.5 ಲಕ್ಷ ರೂ ಹಿಂದಿರುಗಿಸಲು ನಿರಾಕರಿಸಿದ ವ್ಯಕ್ತಿ ಅರೆಸ್ಟ್!
ಈ ನಡುವೆ ಘಟನೆ ಕುರಿತು ಪ್ರತಿಕ್ರಿಯಿಸಿರುವ ಬ್ಯಾಂಕ್ ಅಧಿಕಾರಿಗಳು, ‘ಇಬ್ಬರು ಬಾಲಕರ ಖಾತೆಗೆ ದೊಡ್ಡ ಮೊತ್ತದ ಹಣ ಜಮಾ ಆಗಿರುವುದರ ಬಗ್ಗೆ ಮಾಹಿತಿ ಸಿಕ್ಕಿದೆ. ಹಾಗಾಗಿ ಆ ಬ್ಯಾಂಕ್ ಶಾಖೆಯನ್ನು ಬೇಗ ತೆರೆಯಲಾಗಿದ್ದು ತಪಾಸಣೆ ನಡೆಸುತ್ತಿದ್ದೇವೆ. ಕಂಪ್ಯೂಟರ್‌ನಲ್ಲಿ ದೋಷ ಕಂಡುಬಂದಿರುವುದರಿಂದ ಖಾತೆಗೆ ಹಣ ಬಂದಿರುವಂತೆ ಸ್ಟೇಟ್‌ಮೆಂಟ್‌ನಲ್ಲಿ ತೋರಿಸುತ್ತಿದೆ. ಆದರೆ ಅವರ ಖಾತೆಗೆ ಯಾವುದೇ ಹಣ ಬಂದಿಲ್ಲ ಎಂದು ಶಾಖೆಯ ಮ್ಯಾನೆಜರ್ ಹೇಳಿದ್ದಾಗಿ ಕತಿಯಾರ್ ಜಿಲ್ಲಾ ಮ್ಯಾಜಿಸ್ಪ್ರೇಟ್ ಉದ್ಯಾನ್ ಮಿಶ್ರಾ ಹೇಳಿದ್ದಾರೆ.