Asianet Suvarna News Asianet Suvarna News

ತಾಲಿಬಾನ್‌ ಸರ್ಕಾರದಲ್ಲಿ ಎರಡು ಬಣಗಳ ಮಧ್ಯೆ ತೀವ್ರಗೊಂಡ ಕಿತ್ತಾಟ

  • ಅಷ್ಘಾನಿಸ್ತಾನದಲ್ಲಿ ಇತ್ತೀಚೆಗಷ್ಟೇ ಸರ್ಕಾರ ರಚನೆ ಮಾಡಿದ ತಾಲಿಬಾನ್‌ನಲ್ಲಿ ಎರಡು ಬಣಗಳ ನಡುವಿನ ಭಿನ್ನಮತ 
  • ತಾಲಿಬಾನ್‌ ಸರ್ಕಾರದ ಕ್ಯಾಬಿನೆಟ್‌ ಸದಸ್ಯರು ಸಿದ್ಧಾಂತವಾದಿಗಳು ಮತ್ತು ವ್ಯವಹಾರಿಕ ಬಣಗಳಾಗಿ ವಿಭಜನೆ
Clashes between 2 groups in taliban govt snr
Author
Bengaluru, First Published Sep 17, 2021, 7:56 AM IST
  • Facebook
  • Twitter
  • Whatsapp

ಕಾಬೂಲ್‌ (ಸೆ.17): ಅಷ್ಘಾನಿಸ್ತಾನದಲ್ಲಿ ಇತ್ತೀಚೆಗಷ್ಟೇ ಸರ್ಕಾರ ರಚನೆ ಮಾಡಿದ ತಾಲಿಬಾನ್‌ನಲ್ಲಿ ಎರಡು ಬಣಗಳ ನಡುವಿನ ಭಿನ್ನಮತ ಸ್ಫೋಟಗೊಂಡಿದೆ. ತಾಲಿಬಾನ್‌ ಸರ್ಕಾರದ ಕ್ಯಾಬಿನೆಟ್‌ ಸದಸ್ಯರು ಸಿದ್ಧಾಂತವಾದಿಗಳು ಮತ್ತು ವ್ಯವಹಾರಿಕ ಬಣಗಳಾಗಿ ವಿಭಜನೆಗೊಂಡಿದ್ದಾರೆ. 

ಅಪ್ಘಾನ್‌ ಮೂಲದ ಭಾರತೀಯ ಉದ್ಯಮಿಯನ್ನು ಅಪಹರಿಸಿದ ತಾಲಿಬಾನ್!

ಇತ್ತೀಚೆಗೆ ಅಧ್ಯಕ್ಷೀಯ ಅರಮನೆಯಲ್ಲಿಯೇ ಈ ಎರಡು ಬಣಗಳ ಮಧ್ಯೆ ಕಲಹ ಏರ್ಪಟ್ಟಿತ್ತು. ಈ ವೇಳೆ ವ್ಯವಹಾರಿಕ ಬಣದ ನಾಯಕ, ಉಪಪ್ರಧಾನಿ ಅಬ್ದುಲ್‌ ಘನಿ ಬರಾದರ್‌ನನ್ನು ಹತ್ಯೆ ಮಾಡಲಾಗಿದೆ ಎಂಬ ವದಂತಿಗೂ ಕಾರಣವಾಗಿತ್ತು.

 ಆ ಬಳಿಕ ತಾನು ಸಾವಿಗೀಡಾಗಿಲ್ಲ ಎಂಬ ಬಗ್ಗೆ ಬರಾದರ್‌ ತಾನೇ ಸ್ವತಃ ಹೇಳಿಕೆಯನ್ನು ಬಿಡುಗಡೆ ಮಾಡಿದ್ದ. ಇದರ ಬೆನ್ನಲ್ಲೇ ತಾಲಿಬಾನ್‌ ಎರಡು ಬಣವಾಗಿ ವಿಭಜನೆಗೊಂಡಿರುವುದು ಜಗಜ್ಜಾಹೀರಾಗಿದೆ.

Follow Us:
Download App:
  • android
  • ios