Asianet Suvarna News Asianet Suvarna News

ಮೋದಿ ಹುಟ್ಟುಹಬ್ಬಕ್ಕೆ ಮೇಗಾ ವ್ಯಾಕ್ಸಿನೇಶನ್ ಗಿಫ್ಟ್; ಇದುವರೆಗೆ 1.4 ಕೋಟಿ ಡೋಸ್!

  • ಪ್ರಧಾನಿ ನರೇಂದ್ರ ಮೋದಿಗೆ ಹುಟ್ಟು ಹಬ್ಬದ ಸಂಭ್ರಮ
  • 71ನೇ ಹುಟ್ಟುಹಬ್ಬಕ್ಕೆ ಮೆಘಾ ಲಸಿಕಾ ಅಭಿಯಾನದ ಉಡುಗೊರೆ
  • ಇದುವರೆಗೆ 1.4 ಕೋಟಿ ಡೋಸ್, ಇಂದು ಹೊಸ ದಾಖಲೆ ನಿರ್ಮಾಣ
India created new COVID 19 vaccination record on occasion of PM Modi birthday ckm
Author
Bengaluru, First Published Sep 17, 2021, 3:40 PM IST
  • Facebook
  • Twitter
  • Whatsapp

ನವದೆಹಲಿ(ಸೆ.17): ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬಕ್ಕೆ ಕೇಂದ್ರ ಆರೋಗ್ಯ ಇಲಾಖೆ ಮೆಘಾ ವ್ಯಾಕ್ಸಿನೇಶನ್ ಡ್ರೈವ್‌ಗೆ ಟಾಲನೆ ನೀಡಿದೆ. ಮೋದಿ 71ನೇ ಹುಟ್ಟು ಹಬ್ಬಕ್ಕೆ ದೇಶದಲ್ಲಿ ದಾಖಲೆಯ ಪ್ರಮಾಣದಲ್ಲಿ ಲಸಿಕೆ ಹಾಕಲು ಆರೋಗ್ಯ ಇಲಾಖೆ ಮುಂದಾಗಿದೆ. ಇಂದು ಬೆಳಗ್ಗೆಯಿಂದ ಆರಂಭಗೊಂಡಿರು ಮೆಘಾ ವ್ಯಾಕ್ಸಿನೇಶನ್ ಡ್ರೈವ್‌ಗೆ ಉತ್ತಮ ಸ್ಪಂದನೆ ಸಿಕ್ಕಿದೆ. 3 ಗಂಟೆ ವರೆಗಿನ ಕೋವಿನ್ ಅಂಕಿ ಅಂಶದ ಪ್ರಕಾರ 1.4 ಕೋಟಿ ಡೋಸ್ ಹಾಕಲಾಗಿದೆ. ಇದು ಅತ್ಯಧಿಕ ದಾಖಲೆಯಾಗಿದೆ

ದಾಖಲೆಯ 30 ಲಕ್ಷ ಮಂದಿಗೆ ಇಂದು ಲಸಿಕೆ ನೀಡುವ ಗುರಿ

ಕೋವಿನ್ ಅಧಿಕೃತ ವೆಬ್‌ಸೈಟ್‌ನಲ್ಲಿ  1,40,20,970 ಲಸಿಕೆ ನೀಡಲಾಗಿದೆ.  ಇದೇ ವೇಗದಲ್ಲಿ ಇಂದು ಸಂಜೆವರೆಗೆ ಲಸಿಕೆ ನೀಡಿದರೆ ಸರಿಸುಮಾರು 2 ಕೋಟಿ ಡೋಸ್ ನೀಡುವ ನಿರೀಕ್ಷೆಯಿಂದ. ಕೇಂದ್ರ ಆರೋಗ್ಯ ಇಲಾಖೆ 1.5 ಕೋಟಿಗೂ ಹೆಚ್ಚಿನ ಲಸಿಕೆ ಹಾಕುವ ಗುರಿ ಇಟ್ಟುಕೊಂಡಿತ್ತು. ಈಗಾಗಲೇ 1.4 ಕೋಟಿ ಲಸಿಕೆ ದಾಟಿದೆ. ಇದು ಒಂದೇ ದಿನ ಭಾರತ ನೀಡಿದ ಅತ್ಯಂತ ಗರಿಷ್ಠ ಮಟ್ಟದ ಲಸಿಕಾ ಡೋಸ್ ಆಗಿದೆ.

ಭಾರತದ ಹಲವು ಬಾರಿ 1 ಕೋಟಿ ಅಧಿಕ ಲಸಿಕೆ ನೀಡಿ ದಾಖಲೆ ಬರೆದಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬಕ್ಕೆ ಉಡುಗೊರೆ ನೀಡಲು ಇಂದು ಮೆಘಾ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. 

 

ಸ್ವಯಂಪ್ರೇರಿತರಾಗಿ ಬಂದು ಲಸಿಕೆ ಪಡೆದುಕೊಳ್ಳಲು ಮನವಿ ಮಾಡಲಾಗಿದೆ. ಇನ್ನು ಹಳ್ಳಿ ಹಳ್ಳಿಗೆ ಆರೋಗ್ಯ ಅಧಿಕಾರಿಗಳು ತಂಡ ತಂಡವಾಗಿ ಬಂದು ಲಸಿಕೆ ನೀಡುವ ಪ್ರಕ್ರಿಯೆಗೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವಾರ್ಡ್‌ಗಳಿಗೆ ತೆರಳಿ ಯಾವುದೇ ಕ್ಯೂ, ವಿಳಂಬವಿಲ್ಲದೆ ಲಸಿಕೆ ನೀಡಲಾಗುತ್ತಿದೆ.

ಮೆಘಾ ವ್ಯಾಕ್ಸಿನ್ ಅಭಿಯಾನದಿಂದ ಭಾರತದಲ್ಲಿ ಇದೀಗ 77 ಕೋಟಿ ಲಸಿಕೆ ಡೋಸ್ ದಾಟಿದೆ. ಇಂದು ಸಂಜೆ ವೇಳೆ ಮೋದಿ ಹುಟ್ಟುಹಬ್ಬಕ್ಕೆ ನೀಡಲಾಗುತ್ತಿರುವ ಉಡುಗೊರೆಯ ಸ್ಪಷ್ಟ ಚಿತ್ರಣ ಸಿಗಲಿದೆ.

Follow Us:
Download App:
  • android
  • ios