ಆಗ್ರಾ,[ಜ.09]: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮೋದಿ ಸರ್ಕಾರ, ಮೇಲ್ಜಾತಿಗಳ ಬಡವರಿಗೆ ಮೀಸಲಾತಿ ನೀಡಿ ಭೇಷ್ ಎನಿಸಿಕೊಂಡಿದೆ.

ಇನ್ನು ಈ ಬಗ್ಗೆ ಉತ್ತರ ಪ್ರದೇಶದ ಆಗ್ರಾದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,  ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗೆ ಮೀಸಲಾತಿ ಬೇಕಾಗಿತ್ತು. ನಾನು ಸಿಎಂ ಆಗಿದ್ದಾಗಲೇ ಈ ಬಗ್ಗೆ ಹೇಳಿದ್ದೆ ಈಗ ಮಾಡಿದ್ದೇನೆ ಎಂದು ಸಾರಿ ಸಾರಿ ಹೇಳಿದರು.

ಮೇಲ್ವರ್ಗ ಮೀಸಲಾತಿ ಪಡೆಯಲು 3 ಮಾನದಂಡಗಳು, ಯಾರಿಗೆ ಲಾಭ? ಇಲ್ಲಿದೆ ಮಾಹಿತಿ

ಮೇಲ್ಜಾತಿ ಬಡವರಿಗೆ ಮೀಸಲಾತಿ ನೀಡಲು ರಾಜಕೀಯ ಇಲ್ಲ.  ಮೀಸಲಾತಿ ಕೊಡಿಸುವ ವಿಚಾರದಲ್ಲಿ ಲಾಭ-ನಷ್ಟದ ಮಾತಿಲ್ಲ ಎಂದು ಪ್ರಧಾನಿ ಮಂತ್ರಿ ಮೋದಿ ಸ್ಪಷ್ಟನೆ ನೀಡಿದರು.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮ ಆಡಳಿತದ ಆತ್ಮವಾಗಿದ್ದು, ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗಳ ಹಕ್ಕು ನೀಡಲು ಈ ಬಿಲ್ ಜಾರಿ ತರಲಾಗಿದೆ.

ಮೋದಿ ಮೀಸಲು ಅಸ್ತ್ರ: ಇಲ್ಲಿದೆ ಮಾಸ್ಟರ್‌ ಸ್ಟ್ರೋಕ್‌ನ ಕಂಪ್ಲೀಟ್ ಲೆಕ್ಕಾಚಾರ!

ಶೇಕಡ 10ರ ವಿಧೇಯಕದ ಬಗ್ಗೆ ರಾಜಕೀಯ ಮಾಡಲೇಬೇಡಿ ಎಂದು ಪ್ರತಿಪಕ್ಷಗಳ ವಿರುದ್ಧ ನರೇಂದ್ರ ಮೋದಿ ಕುಟುಕಿದರು.