ಅಹಮದಾಬಾದ್(ಸೆ.17): ಪ್ರಧಾನಿ ನರೇಂದ್ರ ಮೋದಿ ಇಂದು 69ನೇ ವಸಂತಕ್ಕೆ ಕಾಲಿರಿಸಿದ್ದು, ಸ್ವರಾಜ್ಯ ಗುಜರಾತ್‌ನಲ್ಲಿ ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿದ್ದಾರೆ.

ಅಹಮದಾಬಾದ್‌ನ ತಮ್ಮ ಸಹೋದರ ಪಂಕಜ್ ಮೋದಿ ಮನೆಗೆ ತೆರಳಿದ ಪ್ರಧಾನಿ ಮೋದಿ ತಮ್ಮ ತಾಯಿ ಹೀರಾಬೆನ್ ಅವರೊಂದಿಗೆ ಮಧ್ಯಾಹ್ನದ ಭೋಜನ ಸವಿದರು.

98 ವರ್ಷದ ಹೀರಾಬೆನ್ ಅವರೊಂದಿಗೆ ಕೆಲಕಾಲ ಕಳೆದ ಪ್ರಧಾನಿ ಮೋದಿ, ತಾಯಿಯ ಆಶೀರ್ವಾದ ಪಡೆದು ಅಲ್ಲಿಂದ ತೆರಳಿದರು.

ಇದಕ್ಕೂ ಮೊದಲು ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಏಕತಾ ಪ್ರತಿಮೆಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಏಕತಾ ಪ್ರತಿಮೆಗೆ ಭೇಟಿ ನೀಡುವಂತೆ ದೇಶದ ಜನರಲ್ಲಿ ಮನವಿ ಮಾಡಿದರು.

ಇದೇ ವೇಳೆ ನರ್ಮದಾ ಜಿಲ್ಲೆಯ ಗುರುದೇಶ್ವರ್ ದತ್ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ವಿಶೇಷ ಪೂಜೆ ಸಲ್ಲಿಸಿದರು.

ಅಲ್ಲದೇ ಕೇವಡಿಯಾದ ಟೂರಿಸ್ಟ್ ಪಾರ್ಕ್‌ನಲ್ಲಿ ಜಂಗಲ್ ಸಫಾರಿ ಕೈಗೊಂಡು ಗಮನ ಸೆಳೆದರು.

ಮೋದಿ ಜನ್ಮದಿನ: ಸಂಭ್ರಮಾಚರಣೆಯ ಝಲಕ್ 

"