ಸೂರತ್‌[ಸೆ.17]: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ(ಸೆ.17) ಹಿನ್ನೆಲೆ ಸೂರತ್‌ನ ಬೇಕರಿ ಮಾಲೀಕರೊಬ್ಬರು ದಾಖಲೆಯ 700 ಅಡಿ ಉದ್ದದ, 7 ಸಾವಿರ ಕೇಜಿ ಭಾರದ ಕೇಕ್‌ ತಯಾರಿಸಲು ನಿರ್ಧರಿಸಿದ್ದಾರೆ. ಅಲ್ಲದೇ ಇದನ್ನು 370 ಬುಡಕಟ್ಟು ಶಾಲೆ, ಅಪೌಷ್ಟಿಕತೆ ಎದುರಿಸುತ್ತಿರುವ 12000 ವಿದ್ಯಾರ್ಥಿಗಳಿಗೆ ನೀಡಲು ಬಯಸಿದ್ದಾರೆ.

#HappyBdayPMModi| ಮೋದಿಗಾಗಿ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ಜಶೋದಾ ಬೇನ್‌!

ಸೂರತ್‌ನ ಅತುಲ್‌ ಬೇಕರಿ ಈ ಸಾಹಸಕ್ಕೆ ಮುಂದಾಗಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷಾಧಿಕಾರ ರದ್ದು ಮತ್ತು ಭಾರತ ಏಕೀಕರಣ ಗುರಿ ಸಾಧಿಸಿದ್ದಕ್ಕೆ ಈ ಸಂಭ್ರಮಾಚರಣೆ ನಡೆಸಲಾಗುತ್ತಿದೆ. ನಗರದ 700 ಪ್ರಾಮಾಣಿಕ ವ್ಯಕ್ತಿಗಳು ಈ ಕೇಕ್‌ ಅನ್ನು ಕಟ್‌ ಮಾಡಲಿದ್ದಾರೆ. ಅಪೌಷ್ಟಿಕತೆ ಮುಕ್ತ ಭಾರತಕ್ಕೆ ಹೋರಾಡುತ್ತಿರುವ ಪ್ರಧಾನಿ ಕನಸಿಗೆ ಬಲ ತುಂಬಲು ಈ ಕಾರ್ಯಕ್ಕೆ ಮುಂದಾಗಲಾಗಿದೆ.

ಪ್ರಧಾನಿಗೆ 69ನೇ ಹುಟ್ಟುಹಬ್ಬದ ಸಂಭ್ರಮ: ಟ್ವಿಟರ್‌ನಲ್ಲಿ ಮೋದಿ ಟ್ರೆಂಡ್!

370 ಬುಡಕಟ್ಟು ಶಾಲೆ, ಅಂಗನವಾಡಿಗಳು, ಆಶ್ರಮ ಶಾಲೆಗಳ 12 ಸಾವಿರ ಮಕ್ಕಳಿಗೆ ಪೌಷ್ಟಿಕಾಂಶ, ಕಬ್ಬಿಣ, ನಾರು ಮತ್ತು ಜೀವಸತ್ವವುಳ್ಳ ಆಹಾರ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ ಎಂದು ಅತುಲ್‌ ಬೇಕರಿಯ ಅತುಲ್‌ ವೆಕರಿಯಾ ತಿಳಿಸಿದ್ದಾರೆ.

ಗುಜರಾತ್‌ನ ಸರ್ದಾರ್ ಸರೋವರ ಡ್ಯಾಂಗೆ ಸಿಂಗಾರ- ಒಂದು ಝಲಕ್

"