ನವದೆಹಲಿ[ಸೆ.17]: ಪ್ರಧಾನಿ ನರೇಂದ್ರ ಮೋದಿಗಿಂದು 69ನೇ ಹುಟ್ಟುಹಬ್ಬದ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಗುಜರಾತ್‌ಗೆ ತೆರಳಿರುವ ಮೋದಿ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ನರ್ಮದಾ ಜಿಲ್ಲೆಯಲ್ಲಿರುವ ಕೆವಡಿಯಾ ಪ್ರದೇಶಕ್ಕೆ ಭೇಟಿ ನೀಡಿ ಏಕತಾ ಪ್ರತಿಮೆ ಹಾಗೂ ಸರ್ದಾರ ಸರೋವರ್ ಡ್ಯಾಂ ಯೋಜನೆಯನ್ನು ಪರಿಶೀಲಿಸಲಿದ್ದಾರೆ. ಇನ್ನು ಮೋದಿ ಹುಟ್ಟುಹಬ್ಬ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದ್ದು, ಗಣ್ಯರು ಶುಭ ಕೋರಿದ್ದಾರೆ.

ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಜಗತ್ತಿನ ಟಾಪ್‌ 10 ಟ್ರೆಂಡಿಂಗ್‌ನಲ್ಲಿ ಅತಿ ಹೆಚ್ಚು ಮೋದಿ ಹುಟ್ಟುಹಬ್ಬಕ್ಕೆ ಸಂಬಂಧಿಸಿದ ಹ್ಯಾಷ್‌ಟ್ಯಾಗ್‌ಗಳಿವೆ. #happybirthdaynarendramodi ಮೊದಲ ಸ್ಥಾನದಲ್ಲಿದ್ದರೆ, #HappyBirthdayPM ಹಾಗೂ #ShriNarendraModi ಎರಡು ಹಾಗೂ ಐದನೇ ಸ್ಥಾನದಲ್ಲಿವೆ. 

ಭಾರತದ ಟಾಪ್‌ 10 ಟ್ರೆಂಡಿಂಗ್‌ನಲ್ಲಿ, ಒಟ್ಟು 7 ಮೋದಿಗೆ ಶುಭಾಷಯ ಕೋರುತ್ತಿವೆ. ರಾಜಕೀಯ ನಾಯಕರು, ಸಿನಿ ತಾರೆಯರು ಸೇರಿದಂತೆ ಅನೇಕ ಗಣ್ಯರು ಮೋದಿಗೆ ಶುಭ ಕೋರಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಮುಖಂಡರು ಮೋದಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.