ಅಹಮ್ಮದಾಬಾದ್(ಸೆ.17): ದೇಶದ ಪ್ರಗತಿ, ಕ್ರೀಡಾಪಟುಗಳ ಸಾಧನೆ, ಗಣ್ಯರ ಹುಟ್ಟು ಹಬ್ಬ ಸೇರಿದಂತೆ ಪ್ರತಿ ಸಂಭ್ರಮವನ್ನು ಅಮೂಲ್ ಮಿಲ್ಕ್ ಕಂಪನಿ ವಿಶೇಷ ಕಾರ್ಟೂನ್ ಮೂಲಕ ಇಮ್ಮಡಿಗೊಳಿಸಿದೆ. ಇದೀಗ 69ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ವಿಶಿಷ್ಠ ಕಾರ್ಟೂನ್ ಮೂಲಕ ಶುಭ ಕೋರಿದೆ. 

ಇದನ್ನೂ ಓದಿ: ಪ್ರಧಾನಿಗೆ 69ನೇ ಹುಟ್ಟುಹಬ್ಬದ ಸಂಭ್ರಮ: ಟ್ವಿಟರ್‌ನಲ್ಲಿ ಮೋದಿ ಟ್ರೆಂಡ್!

ಮೋದಿ ಹುಟ್ಟು ಹಬ್ಬ ಸಂಭ್ರಮದಲ್ಲಿ ಅಮೂಲ್(Anand Milk Union Limited) ವಿಶೇಷ ಅನಿಮೇಶನ್ ವಿಡಿಯೋವನ್ನು ಪೋಸ್ಟ್ ಮಾಡಿದೆ. ಪ್ರಧಾನಿ ಮೋದಿ ಸಾಧನೆ, ಸ್ವಚ್ಚ ಭಾರತ, ಮೇಕ್ ಇನ್ ಇಂಡಿಯಾ ಸೇರಿದಂತೆ ಜನಪ್ರಿಯ ಯೋಜನೆ ಹಾಗೂ ಐತಿಹಾಸಿಕ ಘಟ್ಟಗಳನ್ನು ಕಾರ್ಟೂನ್ ವಿಡಿಯೋ ಮೂಲಕ ಶುಭ ಹಾರೈಸಿದೆ.

 

ವಿಡಿಯೋದ ಅಂತ್ಯದಲ್ಲಿ 3.6 ಮಿಲಿಯನ್ ಗುಜರಾತ್ ರೈತರು, ಪ್ರಧಾನಿ ಮೋದಿಗೆ ಈ ಮೂಲಕ ಶುಭಕೋರುತ್ತಿದ್ದಾರೆ. ಹುಟ್ಟು ಹಬ್ಬದ ಶುಭಾಶಯಗಳು ಎಂದು ಅಮೂಲ್ ಹೇಳಿದೆ.

ಅಮೂಲ್ ವಿಶೇಷ ಸಂದೇಶ ಹಾಗೂ ಶುಭಹಾರೈಕೆಯನ್ನು ಟ್ವಿಟರಿಗರು ಮೆಚ್ಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಹುಟ್ಟು ಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.