ನವದೆಹಲಿ[ಸೆ.17]: 69ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ನರೇಂದ್ರ ಮೋದಿಗೆ ಹುಟ್ಟುಹಬ್ಬದ ಶುಭಾಷಯಗಳ ಮಹಾಪೂರವೇ ಹರಿದು ಬಂದಿದೆ. ಹೀಗಿರುವಾಗ ವಾರಣಾಸಿಯ ಮೋದಿ ಅಭಿಮಾನಿಯೊಬ್ಬರು, ತಮ್ಮ ನಾಯಕನಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಸಂಕಟ ಮೋಚನ ದೇವಸ್ಥಾನದ ಹನುಮಂತನಿಗೆ ಬರೋಬ್ಬರಿ 1.25 ಕೆಜಿ ತೂಕದ ಚಿನ್ನದ ಕಿರೀಟವನ್ನು ದಾನ ಮಾಡಿದ್ದಾರೆ.

ಹೌದು ಮೊದಿ ಅಭಿಮಾನಿ, ವಾರಾಣಸಿಯ ಅರವಿಂದ್ ಸಿಂಗ್ ಎಂಬವರೇ ಈ ಚಿನ್ನದ ಕಿರೀಟ ದಾನ ಮಾಡಿದ ಫ್ಯಾನ್. 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ವಾರಾಣಸಿಯಿಂದ ಕಣಕ್ಕಿಳಿದಾಗ ಅವರು ಗೆಲ್ಲಲಿ. ಗೆದ್ದು ಎರಡನೇ ಬಾರಿಯೂ ಪ್ರಧಾನಮಂತ್ರಿಯಾದರೆ 1.25 ಕೆಜಿ ತೂಕದ ಚಿನ್ನದ ಕಿರೀಟ ಮಾಡಿಸಿ ಹನುಮಂತನಿಗೆ ತೊಡಿಸುವುದಾಗಿ ಹರಕೆ ಹೊತ್ತಿದ್ದರು. 

#HappyBdayPMModi| ಭಿನ್ನ ವಿಭಿನ್ನ: ನೀವು ನೋಡಿರದ ಮೋದಿ ಫೋಟೋಗಳು ಅದೆಷ್ಟು ಚೆನ್ನ!

ಅರವಿಂದ್ ಸಿಂಗ್ ಇಚ್ಛೆಯಂತೆ ಮೋದಿ ಎರಡನೇ ಬಾರಿ ಗೆದ್ದು, ಪ್ರಧಾನಮಂತ್ರಿಯಾಗಿದ್ದಾರೆ. ಹೀಗಿರುವಾಗ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ತಾನು ಹೊತ್ತುಕೊಂಡ ಹರಕೆ ತೀರಿಸಲು ಮುಂದಾದ ಈ ಅಭಿಮಾನಿ, ಸಂಕಟ ಮೋಚನ ದೇವಸ್ಥಾನಕ್ಕೆ ತೆರಳಿ, ಹನುಮಂತನಿಗೆ ಚಿನ್ನದ ಕಿರೀಟ ತೊಡಿಸಿದ್ದಾರೆ ಹಾಗೂ ಮೋದಿಗೆ ಶುಭವಾಗಲಿ, ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದಾರೆ. 

ಮಾಧ್ಯಮಗಳಿಗೆ ಈ ಕುರಿತಾಗಿ ಪ್ರತಿಕ್ರಿಯಿಸಿದ ಅರವಿಂದ್ ಸಿಂಗ್ 'ಮೋದಿ ಅಧಿಕಾರಾವಧಿಯಲ್ಲಿ ಈ ಹಿಂದೆ ಕಾಣದ ಅಭಿವೃದ್ಧಿಯಾಗುತ್ತಿದೆ. ಹೀಗಾಗಿ ನಾನು ಈ ಹಿಂದೆ ಕೈಗೊಂಡ ನಿರ್ಧಾರದಂತೆ ಅವರ ಹುಟ್ಟುಹಬ್ಬದ ಹಿಂದಿನ ದಿನ ದೇವರಿಗೆ ಚಿನ್ನದ ಕಿರೀಟ ಅರ್ಪಿಸಿದ್ದೇನೆ. ಇದು ಕಾಶಿ ಜನರ ಪರವಾಗಿ ಮೋದಿಗೆ ನೀಡುತ್ತಿರುವ ಉಡುಗೊರೆ' ಎಂದಿದ್ದಾರೆ.

ಪ್ರಧಾನಿಗೆ 69ನೇ ಹುಟ್ಟುಹಬ್ಬದ ಸಂಭ್ರಮ: ಟ್ವಿಟರ್‌ನಲ್ಲಿ ಮೋದಿ ಟ್ರೆಂಡ್!