Asianet Suvarna News Asianet Suvarna News

ಬೇಲ್ ಸಿಕ್ಕ ಆರ್ಯನ್‌ಗೆ ಬಿಡುಗಡೆ ಭಾಗ್ಯವಿಲ್ಲ, ರಾಹುಲ್‌ಗೆ ಮೋದಿ ಶಕ್ತಿ ಅಂದಾಜಿಲ್ಲ; ಅ.28ರ ಟಾಪ್ 10 ಸುದ್ದಿ!

ರಾಹುಲ್ ಗಾಂಧಿಗೆ ಪ್ರದಾನಿ ನರೇಂದ್ರ ಮೋದಿ ಶಕ್ತಿಯ ಅರಿವಿಲ್ಲ. ಹೀಗಾಗಿ ದಶಕಗಳ ವರೆಗೆ ಬಿಜೆಪಿ ಅಧಿಕಾರದಲ್ಲಿರಲಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ರಾಜಸ್ಥಾನದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಕುಟುಕಿದೆ. ಎಜೆಂಟರಾಗಿ ಕೆಲಸ ಮಾಡುವ ದುಸ್ಥಿತಿ ಜೆಡಿಎಸ್‍ಗಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ. ಶಮಿ ವಿರುದ್ಧದ ಪಿತೂರಿ ಬಯಲು, LPG ಒಂದೇ ಬಾರಿ 100 ರೂ ಏರಿಕೆಯಿಂದ ಗ್ರಾಹಕ ಕಂಗಾಲು ಸೇರಿದಂತೆ ಅಕ್ಟೋಬರ್ 28ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 
PM Modi BJP government stay many decades to LPG price hike top 10 News of october 28 ckm
Author
Bengaluru, First Published Oct 28, 2021, 5:49 PM IST
 • Facebook
 • Twitter
 • Whatsapp

BREAKING: ಕೊನೆಗೂ ಆರ್ಯನ್ ಖಾನ್‌ಗೆ ಸಿಕ್ತು ಜಾಮೀನು; ಇಂದು ಜೈಲಿನಿಂದ ಬಿಡುಗಡೆ ಇಲ್ಲ!

PM Modi BJP government stay many decades to LPG price hike top 10 News of october 28 ckm

ಬರೋಬ್ಬರಿ 26 ದಿನ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಕಳೆದ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್(shah rukh khan) ಪುತ್ರ ಆರ್ಯನ್‌ ಖಾನ್‌ಗೆ(Aryan Khan) ಕೊನೆಗೂ ಜಾಮೀನು(Bail) ಸಿಕ್ಕಿದೆ. ಕ್ರ್ಯೂಸ್ ಡ್ರಗ್ಸ್ ಪ್ರಕರಣದಲ್ಲಿ NCB ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ಆರ್ಯನ್ ಖಾನ್‌ಗೆ ಬಾಂಬೆ ಹೈಕೋರ್ಟ್ ಕೋರ್ಟ್(bombay high Court) ಜಾಮೀನು ಮಂಜೂರು ಮಾಡಿದೆ.

ರಾಜಸ್ಥಾನದಲ್ಲಿ ಇಂಟರ್ನೆಟ್ ಸೇವೆ ಬಂದ್: ಕಾಂಗ್ರೆಸ್‌ಗೆ ಕಾಶ್ಮೀರ ನೆನಪಿಸಿದ ಬಿಜೆಪಿ!

PM Modi BJP government stay many decades to LPG price hike top 10 News of october 28 ckm

ರಾಷ್ಟ್ರ ರಾಜಕಾರಣದಲ್ಲಿ ಸದ್ಯ ಬಿಜೆಪಿ (BJP) ಹಾಗೂ ಕಾಂಗ್ರೆಸ್‌(Congress) ನಾಯಕರ ಮಧ್ಯೆ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಿದ ವಿಚಾರ ಭಾರೀ ಕಾವು ಒಡೆದಿದೆ. ಕಾಂಗ್ರೆಸ್‌ ಆಡಳಿತವಿರುವ ರಾಜಸ್ಥಾನದಲ್ಲಿ (Rajasthan) ಬುಧವಾರ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಜನ ಸಾಮಾನ್ಯರು ಬಹಳಷ್ಟು ಸಮಸ್ಯೆಗಳನ್ನೆದುರಿಸಿದ್ದಾರೆ. ಹೀಗಿರುವಾಗ ಅತ್ತ ಬಿಜೆಪಿ ಈ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್‌ಗೆ ತಿರುಗೇಟು ನೀಡಿದೆ. 

ರಾಗಾಗೆ ಮೋದಿ ಶಕ್ತಿಯ ಅಂದಾಜಿಲ್ಲ, ದಶಕದವರೆಗೆ ಬಿಜೆಪಿ ದರ್ಬಾರ್: ಪ್ರಶಾಂತ್ ಕಿಶೋರ್!

PM Modi BJP government stay many decades to LPG price hike top 10 News of october 28 ckm

ಭಾರತೀಯ ಜನತಾ ಪಕ್ಷ (BJP) ಮುಂದಿನ ದಶಕಗಳವರೆಗೆ (Decade) ಭಾರತದ ರಾಜಕೀಯದಲ್ಲಿ ಪ್ರಬಲ ಶಕ್ತಿಯಾಗಿ ಉಳಿಯಲಿದೆ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ (Prashant Kishor) ಹೇಳಿದ್ದಾರೆ. ಬಿಜೆಪಿಯು ಹಲವಾರು ದಶಕಗಳ ಕಾಲ ಹೋರಾಡಬೇಕಾಗುತ್ತದೆ ಎಂದು ಕಿಶೋರ್ ನಂಬಿದ್ದಾರೆ.

ಲಂಕಾದಲ್ಲಿ ಏಕರೂಪ ಕಾನೂನು ಜಾರಿಗೆ ಸಿದ್ಧತೆ: ಭಾರತದಲ್ಲಿನ್ನೂ ವಿವಾದ!

PM Modi BJP government stay many decades to LPG price hike top 10 News of october 28 ckm

ಏಕರೂಪದ ನಾಗರಿಕ ಸಂಹಿತೆ ಜಾರಿ (Uniform Civil Code) ವಿಷಯ ಭಾರತದಲ್ಲಿ ಇನ್ನೂ ಚರ್ಚೆ ಹಾಗೂ ವಿವಾದದ ಹಂತದಲ್ಲಿ ಇದ್ದರೆ, ನೆರೆಯ ಶ್ರೀಲಂಕಾ/(Sri Lanka) ಇಂತಹ ಕಾನೂನು ಜಾರಿಯಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ‘ಒಂದು ದೇಶ ಒಂದು ಕಾನೂನು’ ಕಾನೂನು ಜಾರಿಗಾಗಿ ಅಧ್ಯಕ್ಷ ಗೊಟಬೊಯಾ ರಾಜಪಕ್ಸೆ (Gotabaya Rajapaksa) ಅವರ ಸರ್ಕಾರ 13 ಸದಸ್ಯರ ಕಾರ್ಯಪಡೆಯೊಂದನ್ನು ರಚಿಸಿದೆ. ಈ ಮೂಲಕ 2019ರ ಚುನಾವಣೆ(Elections) ವೇಳೆ ತಮ್ಮ ಸರ್ಕಾರ ನೀಡಿದ್ದ ಭರವಸೆ ಈಡೇರಿಸಲು ಮುಂದಾಗಿದೆ.

T20 World Cup 2021: ಮೊಹಮ್ಮದ್ ಶಮಿ ನಿಂದನೆ ಹಿಂದೆ ಪಾಕಿಸ್ತಾನ ಪಿತೂರಿ ಬಯಲು!

PM Modi BJP government stay many decades to LPG price hike top 10 News of october 28 ckm

ಭಾರತೀಯ ಕ್ರಿಕೆಟ್ ಅಭಿಮಾನಿಗಳು(Fans) ಶಮಿಯನ್ನು ನಿಂದಿಸುತ್ತಿದ್ದಾರೆ ಅನ್ನೋ ರೀತೀ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಗೂ ಅಭಿಯಾನ ಶುರುವಾಗಿತ್ತು. ಇದೀಗ ಇದರ ಅಸಲಿಯತ್ತು ಬಹಿರಂಗೊಂಡಿದೆ. ಇದರ ಹಿಂದೆ ಪಾಕಿಸ್ತಾನ(Pakistan) ವಿಕೃತ ಮನಸ್ಥಿತಿಯವರು ಇದ್ದಾರೆ ಅನ್ನೋದು ದಾಖಲೆ ಸಮೇತ ಬಹಿರಂಗವಾಗಿದೆ. ಈ ಕುರಿತು ಎಎನ್ಐ ಸುದ್ದಿ ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ(Social Media) ಟೀಕೆ ಹಾಗೂ ಖಾತೆ ಕುರಿತ ವಿವರನ್ನು ಬಹಿರಂಗಪಡಿಸಿದೆ.

'ಸಾಮಿ ಸಾಮಿ' ಹಾಡಿಗೆ ಬೊಂಬಾಟ್ ಸ್ಟೆಪ್ಸ್ ಹಾಕಿದ ಅಲ್ಲು-ರಶ್ಮಿಕಾ

PM Modi BJP government stay many decades to LPG price hike top 10 News of october 28 ckm

'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳಸಾಗಾಣಿಕೆ ಮಾಡುವ ಲಾರಿ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿ-ಗ್ಲಾಮರಸ್ ಪಾತ್ರದಲ್ಲಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

LPG ಒಂದೇ ಬಾರಿ 100 ರೂ. ಏರಿಕೆ: ಗ್ರಾಹಕ ಕಂಗಾಲು!

PM Modi BJP government stay many decades to LPG price hike top 10 News of october 28 ckm

ಈಗಾಗಲೇ ಪೆಟ್ರೋಲ್‌ (Petrol), ಡೀಸೆಲ್‌ (Diesel) ಅಡುಗೆ ಅನಿಲ (Coocking gas) ದರ ಏರಿಕೆ ಭಾರೀ ಬಿಸಿ ಅನುಭವಿಸುತ್ತಿರುವ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಮುಂದಿನ ವಾರ ಮತ್ತೊಂದು ಭರ್ಜರಿ ಶಾಕ್‌ ನೀಡುವ ಸಾಧ್ಯತೆ ಇದೆ. ಸೆ.1ರಂದು ಪರಿಷ್ಕರಣೆಯಾಗಲಿರುವ ಎಲ್‌ಪಿಜಿ (LPG) ದರದ ವೇಳೆ ಭಾರೀ ಪ್ರಮಾಣದಲ್ಲಿ ದರ ಹೆಚ್ಚಳದ ಸಾಧ್ಯತೆ ಇದೆ.

50 ಲಕ್ಷ TVS ಸ್ಕೂಟಿ ಮಾರಾಟ; ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು!

PM Modi BJP government stay many decades to LPG price hike top 10 News of october 28 ckm

ಭಾರತದಲ್ಲಿ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿ ಟಿವಿಎಸ್(TVS Motor) ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. ಸ್ಕೂಟರ್ ವಿಭಾಗದಲ್ಲಿ ಹೊಸ ಇತಿಹಾಸ ರಚಸಿದೆ. ಟಿವಿಎಸ್ ಸ್ಕೂಟಿ(TVS Scooty) 50 ಲಕ್ಷ ವಾಹನ ಮಾರಾಟದ ಮೈಲಿಗಲ್ಲು ತಲುಪಿದೆ. TVS ಮೋಟಾರ್ ಕಂಪನಿ, ಹೆಸರಾಂತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಯಾಗಿದ್ದು ಇದೀಗ ಮತ್ತೊಂದು ಗರಿ ಟಿವಿಎಸ್ ಕಂಪನಿ ಪಾಲಾಗಿದೆ.

ಏಜೆಂಟ್‌ರಾಗಿ ಕೆಲಸ ಮಾಡುವ ದುಸ್ಥಿತಿ ಬಂದಿಲ್ಲ: ದೇವೇಗೌಡ

PM Modi BJP government stay many decades to LPG price hike top 10 News of october 28 ckm

ಸಿಂದಗಿ ಉಪಚುನಾವಣೆಯ ಬಹಿರಂಗ ಪ್ರಚಾರ ಕೊನೆಯ ದಿನ ಬುಧವಾರ ಪಟ್ಟಣದ ಜೆಡಿಎಸ್‌ ಪಕ್ಷದ ಅಭ್ಯರ್ಥಿ ನಾಜಿಯಾ ಅಂಗಡಿ ಪರ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಭರ್ಜರಿ ರೋಡ್‌ ಶೋ ನಡೆಯಿತು.
 
Follow Us:
Download App:
 • android
 • ios