ಹುಷಾರ್...ವಾರಕ್ಕೊಮ್ಮೆ ಮಾಂಸ ತಿನ್ನೋರು ಕೋಳಿ ದೇಹದ ಈ ಭಾಗ ತಿನ್ನಲೇ ಬಾರದು
ಚಿಕನ್ ತಿನ್ನದೆ ದಿನ ಸಾಗೋದೇ ಇಲ್ಲ ಎಂದು ಪದೇ ಪದೇ ಹೇಳುವ ಕೋಳಿ ಅಭಿಮಾನಿಗಳೇ....ದಯವಿಟ್ಟು ಈ ಭಾಗ ತಿನ್ನಲೇ ಬೇಡಿ.........
ಇತ್ತೀಚಿನ ದಿನಗಳಲ್ಲಿ ಚಿಕನ್ ಸೇವಿಸುವ ಮಂದಿ ಹೆಚ್ಚಾಗಿದ್ದಾರೆ ಏಕೆಂದರೆ ಅದರಲ್ಲಿ ಸಿಗುವ ಪ್ರೋಟಿನ್ ಸಿಕ್ಕಾಪಟ್ಟೆ. ವರ್ಕೌಟ್ ಮಾಡುವವರಿಗೆ ಈ ಪ್ರೋಟಿನ್ ಅಗತ್ಯ.
ಮಾಂಸಾಹಾರಿಗಳು ಫೇವರೆಟ್ ಅಂದ್ರೆ ಚಿಕನ್. ಅಡುಗೆ ಮಾಡುವುದು ಸುಲಭ, ಬೆಲೆ ಕೂಡ ಹೆಚ್ಚಿರುವುದಿಲ್ಲ ಹಾಗೇ ಬೇಕಾದ ವೆರೈಟಿ ಮಾಡಿಕೊಂಡು ಸೇವಿಸಬಹುದು.
ಕೆಲವರು ದಿನಕ್ಕೆ ಒಮ್ಮೆ ತಿನ್ನುತ್ತಾರೆ, ಕೆಲವರು ವಾರಕ್ಕೊಮ್ಮೆ ತಿನ್ನುತ್ತಾರೆ ಇನ್ನೂ ಕೆಲವರು ಅಪರೂಪದಲ್ಲಿ ಅಪರೂಪ. ನೀವು ಯಾವಾಗ ಬೇಕಿದ್ದರೂ ತಿನ್ನಿ ಆದರೆ ಈ ಭಾಗ ಮಾತ್ರ ಮುಟ್ಟಲೇ ಬಾರದು.
ಚಿಕನ್ ಸ್ಕಿನ್ ತಿನ್ನುವುದು ಒಳ್ಳೆಯದಲ್ಲ ಏಕೆಂದರೆ ಅದರಲ್ಲಿ ಹೆಚ್ಚು ಕೊಬ್ಬು ಇರುತ್ತದೆ ಹಾಗೂ ಫ್ರೆಶ್ ಆಗಿರಲು ಕೆಮಿಕಲ್ ಇಂಜೆಕ್ಷನ್ ನೀಡುತ್ತಾರೆ. ಕೋಳಿ ಚರ್ಮದಿಂದ ದೂರ ಇರಬೇಕು ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ.
ಬಾಯಿಲರ್ ಕೋಳಿಯ ತೊಡೆ ಭಾಗಕ್ಕೆ ಇಂಜೆಕ್ಷನ್ ನೀಡಲಾಗುತ್ತದೆ. ತೂಕ ಹೆಚ್ಚಾಗಬೇಕು ಜನರು ಬೇಗ ಖರೀದಿ ಮಾಡುತ್ತಾರೆ ಎಂದು. ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಜನರು ಹೆಚ್ಚಾಗಿ ಕೇಳುವುದೇ ಥೈ ಪೀಸ್ ಅಥವಾ ಲೆಗ್ ಪೀಸ್.
ಇನ್ನು ನೀವು ಧೈರ್ಯವಾಗಿ ನಾಟಿ ಕೋಳಿ ತಿನ್ನಬಹುದು ಏಕೆಂದರೆ ಯಾವುದೇ ಕೆಮಿಕಲ್ಸ್ ಅಥವಾ ಇಂಜೆಕ್ಷನ್ ಬಳಸುವುದಿಲ್ಲ. ಅಲ್ಲದೆ ನಾಟಿ ಕೋಳಿ ಹೆಚ್ಚಿಗೆ ದಪ್ಪ ಆದರೆ ಜನರು ಖರೀದಿಸುವುದಿಲ್ಲ.
ಒಮೆಗಾ 3 ಮತ್ತು ಒಮೆಗಾ 6 ಕೊರತೆ ಇರುವವರು ವಾರಕ್ಕೊಮ್ಮೆ ಚಿಕನ್ ಸ್ಕಿನ್ ತಿನ್ನಬಹುದು. ದಿನ ನಿತ್ಯ ಕೋಳಿ ಸೇವಿಸುವವರು ಚಿಕನ್ ಬ್ರೆಸ್ಟ್ ತಿನ್ನಬೇಕು.
ದಿನ ಕೋಳಿ ತಿನ್ನುವವರಿಗೆ ಇದರ ಬಗ್ಗ ಹೆಚ್ಚಿಗೆ ತಿಳಿದುಕೊಂಡಿರುತ್ತಾರೆ ಆದರೆ ಅಪರೂಪಕ್ಕೆ ಅಥವಾ ವಾರಕ್ಕೆ ಒಮ್ಮೆ ತಿನ್ನುವವರು ರುಚಿಗಾಗಿ ಯಾವುದು ಸಿಕ್ಕರೂ ತಿನ್ನಲು ರೆಡಿಯಾಗಿರುತ್ತಾರೆ.