Asianet Suvarna News Asianet Suvarna News

50 ಲಕ್ಷ TVS ಸ್ಕೂಟಿ ಮಾರಾಟ; ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು!

  • ಭಾರತದಲ್ಲಿ ಹೊಸ ಮೈಲಿಗಲ್ಲ ನಿರ್ಮಿಸಿದ ಟಿವಿಎಸ್ ಮೋಟಾರ್
  • 50 ಲಕ್ಷ ಸ್ಕೂಟಿ ಮಾರಾಟ ಮಾಡಿದ ಹೆಗ್ಗಳಿಕೆಗೆ ಟಿವಿಎಸ್ ಪಾತ್ರ
  • ಮಹಿಳೆಯರ ಅಗತ್ಯತೆಗಳಿಗೆ ಸ್ಪಂದಿಸಿರುವ ಸ್ಕೂಟಿಗೆ ಜನಮನ್ನಣೆ
     
TVS Scooty achieves a new milestone sales cross 5 million mark ckm
Author
Bengaluru, First Published Oct 28, 2021, 3:01 PM IST

ಹೊಸೂರು(ಅ.27):  ಭಾರತದಲ್ಲಿ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿ ಟಿವಿಎಸ್(TVS Motor) ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. ಸ್ಕೂಟರ್ ವಿಭಾಗದಲ್ಲಿ ಹೊಸ ಇತಿಹಾಸ ರಚಸಿದೆ. ಟಿವಿಎಸ್ ಸ್ಕೂಟಿ(TVS Scooty) 50 ಲಕ್ಷ ವಾಹನ ಮಾರಾಟದ ಮೈಲಿಗಲ್ಲು ತಲುಪಿದೆ. TVS ಮೋಟಾರ್ ಕಂಪನಿ, ಹೆಸರಾಂತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಯಾಗಿದ್ದು ಇದೀಗ ಮತ್ತೊಂದು ಗರಿ ಟಿವಿಎಸ್ ಕಂಪನಿ ಪಾಲಾಗಿದೆ.

'Outstanding Renewable Energy User' ಪ್ರಶಸ್ತಿ ಗೆದ್ದ ಟಿವಿಎಸ್‌ ಮೋಟರ್!

ಟಿವಿಎಸ್ ಸ್ಕೂಟಿ ಭಾರತದಲ್ಲಿ ಮಹಿಳೆಯರ ಸಂಚಾರದ ವಾಹನವಾಗಿ ಕಳೆದ ಮೂರು ದಶಕಗಳಿಂದ ಹೆಸರಾಗಿದೆ. ಮಾರುಕಟ್ಟೆಗೆ ಬಿಡುಗಡೆ ಆದಂದಿನಿಂದ ಟಿವಿಎಸ್ ಸ್ಕೂಟಿಯ ಪ್ರಯಾಣ ಮುಂದುವರಿದಿದ್ದು, ಭಾರತೀಯ ಮಹಿಳೆಯರ ಅಗತ್ಯಗಳಿಗೆ ಸ್ಪಂದಿಸುತ್ತಿದೆ. ಟಿವಿಎಸ್ ಸ್ಕೂಟಿ ತನ್ನ ಗ್ರಾಹಕರಿಗೆ ಪ್ರತಿ ಹಂತದಲ್ಲಿ ಹೊಸತನದ ಅನುಭವವನ್ನು ನೀಡಿದೆ. ಇಂದು ಈ ಸ್ಕೂಟರ್ ಪ್ರತಿ ಬಳಕೆದಾರನಿಗೂ ಸೂಕ್ತವಾದ ವಾಹನವಾಗಿದೆ.

ಟಿವಿಎಸ್ ಸ್ಕೂಟಿ ವಾಹನದಲ್ಲಿ ETF-i  ಎಕೊಥ್ರಸ್ಟ್ ಎಂಜಿನ್ ಇದ್ದು, ಸುದೀರ್ಘ ಬಾಳಿಕೆ, ಅಡಚಣೆ ರಹಿತ ಮತ್ತು ಅನುಕೂಲಕರವಾದ ಚಾಲನೆ, ಮತ್ತು ಶೇ 15ಕ್ಕಿಂತ ಹೆಚ್ಚು ಉತ್ತಮ ಮೈಲೇಜ್ ನೀಡುವ ಮೂಲಕ ಇದು ಭಾರತದ ನಂ. 1 ಆರ್ಥಿಕ ಮಿತವ್ಯಯದ ಸ್ಕೂಟರ್ ಆಗಿ ಪರಿಣಮಿಸಿದೆ.

ಟಿವಿಎಸ್ ಸ್ಕೂಟಿ ಸುದೀರ್ಘ ಅವಧಿಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ಸುಸ್ಥಿರತೆ ಕಾಯ್ದುಕೊಂಡಿರುವ ಗೇರ್ ರಹಿತ ವಾಹನವಾಗಿದೆ. ಟಿವಿಎಸ್ ಸ್ಕೂಟಿ ಅತ್ಯುತ್ತಮ ಆರಾಮದಾಯಕ ಅನುಭವವನ್ನು ನೀಡಲಿದ್ದು, ಈ ವರ್ಗದಲ್ಲಿಯೇ ಅತ್ಯುತ್ತಮವಾದ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಹೊಂದಿದೆ.

ಹೊಚ್ಚ ಹೊಸ TVS ಜ್ಯುಪಿಟರ್ 125 ಸ್ಕೂಟರ್ ಬಿಡುಗಡೆ!

ಟಿವಿಎಸ್ ಸ್ಕೂಟಿ ವಾಹನದಲ್ಲಿ ಟಿವಿಎಸ್ ಮೋಟರ್ ಹಕ್ಕುಸ್ವಾಮ್ಯ ಹೊಂದಿರುವ ಸ್ಟಾಂಡರ್ಡ್ ಟೆಕ್ನಾಲಜಿ ಇದ್ದು, ಸೆಂಟರ್ ಸ್ಟಾಂಡ್ ಹಾಕಿ ನಿಲ್ಲಿಸುವಾಗ ಶ್ರಮವನ್ನು ಶೇ 30 ರಷ್ಟು ಕುಗ್ಗಿಸಲಿದೆ.ಟಿವಿಎಸ್ ಸ್ಕೂಟಿ ಸ್ಕೂಟರ್‍‌ನಲ್ಲಿ ಕಾಲಕ್ಕೆ ತಕ್ಕಂತೆ ಅಪ್‌ಗ್ರೇಡ್ ಮಾಡಿದೆ. ಸ್ಕೂಟಿ ಪೆಪ್, ಸ್ಕೂಟಿ ಪೆಪ್ ಪ್ಲಸ್, ಟಿವಿಎಸ್ ಸ್ಕೂಟಿ ಜೆಸ್ಟ್ ವೇರಿಯೆಂಟ್ ಲಭ್ಯವಿದೆ. ಪೆಪ್ ವೇರಿಯೆಂಟ್ 5 ಬಣ್ಣಗಳಲ್ಲಿ ಲಭ್ಯವಿದೆ. 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. 87.8CC ಎಂಜಿನ್ ಹೊಂದಿದ್ದು, 6.5 NM (@ 3500 RPM) ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 4.2 ಲೀಟರ್ ಇಂಧನ ಸಾಮರ್ಥ್ಯ ಹೊಂದಿದೆ.

ಸ್ಕೂಟಿ ಜೆಸ್ಟ್ 109.7 cc ಎಂಜಿನ್ ಹೊಂದಿದೆ. 8.8Nm (@5500 rpm) ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಜೆಸ್ಟ್ ಪವರ್ 5.75kW (@7500 rpm) ಹೊಂದಿದೆ. ಜೆಸ್ಟ್ ಸ್ಕೂಟರ್ 5 ಲೀಟರ್ ಇಂಧನ ಸಾಮರ್ಥ್ಯ ಹೊಂದಿದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ರೇರ್ ಕಾಯಿಲ್ ಸ್ಪ್ರಿಂಗ್ ಸಸ್ಪೆನ್ಶನ್ ಹೊಂದಿದೆ. ಮುಂಭಾಗದಲ್ಲಿ 110 mm ಡ್ರಮ್ ಬ್ರೇಕ್ ಹಾಗೂ 130 mm ರೇರ್ ಡ್ರಮ್ ಬ್ರೇಕ್ ಹೊಂದಿದೆ.

ಸ್ಕೂಟಿ ಉತ್ಪಾದನೆಯಲ್ಲಿ ಟಿವಿಎಸ್ ಮೋಟಾರ್ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಟಿವಿಎಸ್ ಸ್ಕೂಟಿ ಮೂಲಕ ಸ್ಕೂಟರ್ ಸೆಗ್ಮೆಂಟ್‌ನಲ್ಲಿ ಸಂಚಲನ ಮೂಡಿಸಿದ ಟಿವಿಎಸ್ ಬಳಿಕ ಟಿವಿಎಸ್ ಜುಪಿಟರ್, ಟಿವಿಎಸ್ ಜುಪಿಟರ್ 125, ಟಿವಿಎಸ್ Nಟಾರ್ಕ್ 125 ಮೂಲಕ ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಇನ್ನು ಟಿವಿಎಸ್ ಕ್ರೆಯೊನ್ ಕೂಡ ಸ್ಪೋರ್ಟ್ಸ್ ಸ್ಕೂಟರ್ ಇಷ್ಟಪಡುವವರಿಗಾಗಿ ನಿರ್ಮಿಸಲಾಗಿದೆ.

ಎಲೆಕ್ಟ್ರಿಕ್ ವಿಭಾಗದಲ್ಲಿ ಟಿವಿಎಸ್ ಚಾಪು ಮೂಡಿಸಿದೆ. ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿ ಭವಿಷ್ಯ ವಾಹನ ಮಾರುಕಟ್ಟೆಯಲ್ಲಿ ಸ್ಥಾನ ಪಡೆದಿದೆ. ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಪೈಕಿ ಟಿವಿಎಸ್ ಐಕ್ಯೂಬ್ ಕೂಡ ಒಂದಾಗಿದೆ.

Follow Us:
Download App:
  • android
  • ios