ಕರಾಳ ತುರ್ತು ಪರಿಸರ್ತಿತಿ ಹೇರಿ ಇಂದಿಗೆ 39 ವರ್ಷಗಳು| ದೇಶ ಆ ಭಯನಾಕ ಸ್ಥಿತಿಯನ್ನು ಮರೆತಿಲ್ಲ ಎಂದ ಪ್ರಧಾನಿ| ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ| ತುರ್ತು ಪರಿಸ್ಥಿತಿ ನೆನೆದು ಕಾಂಗ್ರೆಸ್ ಚುಚ್ಚಿದ ಮೋದಿ| ‘ತುರ್ತು ಪರಿಸ್ಥಿತಿ ಹೇರಿದವರಿಂದ ಪ್ರಜಾಪ್ರಭುತ್ವದ ಪಾಠ ಹೇಳಿಸಿಕೊಳ್ಳಬೇಕಿಲ್ಲ’| ‘ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಸರ್ಕಾರ ಅಸ್ತಿತ್ವದಲ್ಲಿದೆ'
ನವದೆಹಲಿ(ಜೂ.25): ದೇಶದಲ್ಲಿ ಕರಾಳ ತುರ್ತು ಪರಿಸರ್ತಿತಿ ಹೇರಿ ಇಂದಿಗೆ 39 ವರ್ಷಗಳು ಉರುಳಿದ್ದು, ದೇಶ ಆ ಭಯನಾಕ ಸ್ಥಿತಿಯನ್ನು ಮರೆತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದವರಿಂದ ನಾವು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಪಾಠ ಹೇಳಿಸಿಕೊಳ್ಳಬೇಕಿಲ್ಲ ಎಂದು ಗುಡುಗಿದರು.
ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವದ ಮೇಲೆ ನಡೆಸಿದ ಭೀಕರ ಹಲ್ಲೆಯಾಗಿದ್ದು, ಇದನ್ನು ದೇಶ ಅತ್ಯಂತ ಧೈರ್ಯದಿಂದ ಎದುರಿಸಿತ್ತು ಎಂದು ಮೋದಿ ಹೇಳಿದರು.
ಆದರೆ ಇಂದು ಪರಿಸ್ಥಿತಿ ಬದಲಾಗಿದ್ದು, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ, ಬಲಗೊಳಿಸುವ ಸರ್ಕಾರ ಅಸ್ತಿತ್ವದಲ್ಲಿದೆ ಎಂದು ಪ್ರಧಾನಿ ನುಡಿದರು.
