1) ನಿರ್ಮಲಾನಂದ ಶ್ರೀಗಳ  ಫೋನ್ ಟ್ಯಾಪಿಂಗ್ ಮಾಡಿಸಿದ್ಯಾರು?: ಬಾಯ್ಬಿಟ್ಟ ಅಲೋಕ್ ಕುಮಾರ್

ರಾಜ್ಯದಲ್ಲಿ ನಡೆದ ಟ್ಯಾಪಿಂಗ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು,  ಸಿಬಿಐ ಅಧಿಕಾರಿಗಳು ತನಿಖೆ ಕೂಡ ಚುರುಕುಗೊಂಡಿದೆ. ಮಾಜಿ ಬೆಂಗಳೂರು ಕಮೀಷನರ್ ಅಲೋಕ್ ಕುಮಾರ್‌ ಅವರ ಮನೆ ಮೇಲೆ ದಾಳಿ ಮಾಡಿ ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ವೇಳೆ ಅಲೋಕ್ ಕುಮಾರ್ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾರೆ. ಇನ್ನು ನಿರ್ಮಲಾನಂದನಾಥ್ ಸ್ವಾಮೀಜಿ ಫೋನ್ ಕೂಡ ಟ್ಯಾಪ್ ಆಗಿದ್ದು, ಅದನ್ನು ಮಾಡಲು ಯಾರು ಹೇಳಿದ್ದರು ಎನ್ನುವುದು ಸಿಬಿಐಗೆ ತಿಳಿಬಂದಿದೆ. 

2) ದಿನೇಶ್​ ಅಯೋಗ್ಯ, ಸಿದ್ದರಾಮಯ್ಯನವರ ಚೇಲಾ: ಅನರ್ಹ ಶಾಸಕನ ಬಾಯಿ ಬಡಾಯಿ

 ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ವಿರುದ್ಧ ಕಾಂಗ್ರೆಸ್ ಅನರ್ಹ ಶಾಸಕ ಎಸ್​. ಟಿ.ಸೋಮಶೇಖರ್​ ಅವರು ಏಕವಚನದಲ್ಲಿ, ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ಆರ್​.ಅಶೋಕ್​ ಅವರನ್ನು ಭೇಟಿ ಮಾಡಲು ವಿಧಾನಸೌಧಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನೇಶ್​ ಗುಂಡೂರಾವ್​ ಅಯೋಗ್ಯ, ಸಿದ್ದರಾಮಯ್ಯನವರ ಚೇಲಾ ಎಂದೆಲ್ಲ ಕಟು ಶಬ್ದಗಳಲ್ಲಿ ರೇಗಾಡಿದ್ದಾರೆ. 

3) ಬಳ್ಳಾರಿ ರೆಡ್ಡಿ ಬ್ರದರ್ಸ್ ವಿರುದ್ಧ ತೊಡೆ ತಟ್ಟಿದ್ದ 'ಕೈ' ಮಾಜಿ ಸಚಿವ ಬಿಜೆಪಿಯತ್ತ..!

ಕಾಂಗ್ರೆಸ್ ನಾಯಕ, ಮಾಜಿ ಶಾಸಕರೊಬ್ಬರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಈ ಕುರಿತು ಮಾತುಕತೆಯೂ ಆರಂಭವಾಗಿದೆ.  ಬಳ್ಳಾರಿ ರೆಡ್ಡಿ ಬ್ರದರ್ಸ್ ವಿರುದ್ಧ ತೊಡೆ ತಟ್ಟಿದ್ದ ಮಾಜಿ ಸಚಿವರೊಬ್ಬರು ಬಿಜೆಪಿ ಸೇರುವ ಮುನ್ಸೂಚನೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ಗೆ ಶಾಕ್ ಕೊಟ್ಟಿದ್ದಾರೆ.


4) ಶೀಘ್ರದಲ್ಲೇ ಭಾರತದ ನಂ.4 ಸಮಸ್ಯೆಗೆ ಪರಿಹಾರ ಹಳೇ ಹುಲಿ ಮತ್ತೆ ತಂಡಕ್ಕೆ!

ಕಳೆದ 2 ವರ್ಷದಿಂದ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದಲ್ಲಿ ಸಮಸ್ಯೆ ಎದುರಿಸುತ್ತಿದೆ. ಅದರಲ್ಲೂ ನಂ.4ರಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡೋ ಬ್ಯಾಟ್ಸ್‌ಮನ್ ಹುಡುಕಾಟ ಇನ್ನೂ ನಿಂತಿಲ್ಲ. ನಾಲ್ಕನೇ ಕ್ರಮಾಂಕದಲ್ಲಿನ ಸಮಸ್ಯೆಯಿಂದಲೇ ಭಾರತ 2019ರ ವಿಶ್ವಕಪ್ ಟೂರ್ನಿಯಲ್ಲೂ ಹಿನ್ನಡೆ ಅನುಭವಿಸಿತ್ತು. ಶೀಘ್ರದಲ್ಲೇ ನಂ.4ರ ಸಮಸ್ಯೆಗೆ ಪರಿಹಾರ ಸಿಗಲಿದೆ. ಕಾರಣ ಹಳೇ ಹುಲಿ ಮತ್ತೆ ತಂಡ ಸೇರಿಕೊಳ್ಳಲು ಸಜ್ಜಾಗಿದ್ದಾರೆ.  

5) ಸೀರೆಯಲ್ಲಿ ಮಿಂಚಿದ 'ಕುಡ್ಲದ ಪೊಣ್ಣು' ಶಿಲ್ಪಾ ಶೆಟ್ಟಿ: ಇಲ್ಲಿವೆ ’ಗೋಲ್ಡನ್’ ಫೋಟೋಸ್ ..!


ಬಾಲಿವುಡ್ ತಾರೆ, ಕುಡ್ಲದ ಪೊಣ್ಣು ಶಿಲ್ಪಾ ಶೆಟ್ಟಿ, ಮಂಗಳೂರು ಸಮೀಪದ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಗೋಲ್ಡನ್ ಸೀರೆ, ಸಾಂಪ್ರದಾಯಿಕ ಆಭರಣಗಳೊಂದಿಗೆ ಮಿಂಚಿದ ಶಿಲ್ಪಾ ಶೆಟ್ಟಿ, ಎಲ್ಲರ ಗಮನಸೆಳೆದಿದ್ದಾರೆ. 

6) ಆ ದಿನಗಳ ಅಪ್ಪನ ಪ್ರೇಮ ಕಥೆಯಲ್ಲಿ ಪುತ್ರನ ಈ ದಿನಗಳ ಪ್ರೇಮ ಪಯಣ!


ಗಣೇಶ್‌ ಅಭಿನಯದ ‘ಗೀತಾ’ ಇವತ್ತೇ ರಿಲೀಸ್‌. ಈ ಚಿತ್ರಕ್ಕೆ ಗೋಕಾಕ್‌ ಚಳವಳಿಯೇ ಬೆನ್ನೆಲುಬು. ವಿಜಯ್‌ ನಾಗೇಂದ್ರ ನಿರ್ದೇಶಿಸಿ, ಸೈಯದ್‌ ಸಲಾಂ ಹಾಗೂ ಶಿಲ್ಪ ಗಣೇಶ್‌ ನಿರ್ಮಾಣದ ಈ ಚಿತ್ರದಲ್ಲಿ ಹಲವು ಆಸಕ್ತಿಕರ ವಿಚಾರ, ಹಾಗೂ ಅಷ್ಟೇ ಟ್ವಿಸ್ಟ್‌ಗಳಿವೆ. 


7) ಭಗವಾನ್‌ಗೆ ಗೃಹಬಂಧನ, ಗೂಂಡಾಗಿರಿಗೆ ಬಗ್ಗಲ್ಲ ಅಂದ್ರು ಮಹೇಶ್ ಚಂದ್ರ ಗುರು!

ಮಹಿಷ ದಸರಾ ಕುರಿತು ಧ್ವನಿ ಎತ್ತಿದ್ದ ಪ್ರಗತಿಪರ ಚಿಂತಕ ಕೆಎಸ್. ಭಗವಾನ್ ಗೆ ಸದ್ಯ ಗೃಹ ಬಂಧನದಲ್ಲಿದ್ದಾರೆ. ಮನೆಯಿಂದ ಹೊರ ಬರದಂತೆ ಕೆ ಎಸ್ ಭಗವಾನ್ ಗೆ ಪೊಲೀಸರ ಮನವಿ ಮಾಡಿಕೊಂಡಿದ್ದು, ಕೆ ಎಸ್ ಭಗವಾನ್ ಮನೆ ಮುಂದೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.


8) ಭಾರತೀಯ ಬಳಕೆದಾರರಿಗೆ ಸುಗ್ಗಿ, ಆಕರ್ಷಕ ಫೀಚರ್‌ಗಳುಳ್ಳ Oneplus 7T ಬಿಡುಗಡೆ!

 ಪ್ರೀಮಿಯರ್ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿರುವ Oneplus ಕಂಪನಿಯು ಹೊಸ ಮೊಬೈಲ್‌ ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನವದೆಹಲಿಯ ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ Oneplus 7T ಸ್ಮಾರ್ಟ್‌ಫೋನನ್ನು ಲೋಕಾರ್ಪಣೆ ಮಾಡಲಾಯಿತು. ಹೊಸ ವಿನ್ಯಾಸ, ಹೆಚ್ಚಿನ ಕಾರ್ಯಕ್ಷಮತೆ ಹಾಗೂ ಮೇಲ್ದರ್ಜೆಗೇರಿಸಿದ ಕ್ಯಾಮೆರಾ ಸೆಟಪ್ ಈ ಹೊಸ ಫೋನ್‌ನ ವಿಶೇಷತೆಗಳಾಗಿವೆ. 

9) ನಾನು ಸೋಷಿಯಲ್‌ ಮೀಡಿಯಾಗಳ ಪರ!: ಸಂದರ್ಶನದಲ್ಲಿ ಮೋದಿ ಮಾತು

ಭಾರತದಲ್ಲಿ ನಡೆಯುತ್ತಿರುವ ಬದಲಾವಣೆಯ ಪರ್ವವನ್ನು ಜಗತ್ತು ಕುತೂಹಲದಿಂದ ನೋಡುತ್ತಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತದಲ್ಲಿ ಅತಿದೊಡ್ಡ ಬದಲಾವಣೆ ಹೇಗೆ ಸಾಧ್ಯವಾಗುತ್ತಿದೆ ಎಂಬ ಪ್ರಶ್ನೆ ಅನೇಕ ದೇಶಗಳಿಗೆ ಇದೆ. ಈ ಬಗ್ಗೆ ಅಮೆರಿಕದಲ್ಲಿ ನಡೆದ ಬ್ಲೂಮ್‌ಬರ್ಗ್‌ ಬಿಸಿನೆಸ್‌ ಶೃಂಗದಲ್ಲಿ ಸಂದರ್ಶನವೊಂದನ್ನು ನೀಡಿರುವ ಪ್ರಧಾನಿ ಮೋದಿ, ಹಲವಾರು ಸಂಗತಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ.

10) ಒಳಬಂದ ಉಗ್ರರಿಗೆ ಗುಂಡಿನ ಸ್ವಾಗತ: ಎದ್ನೊ ಬಿದ್ನೊ ಅಂತ ಓಡಿದರು ಪಾಕ್‌ನತ್ತ!

ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನಿ ಉಗ್ರರ ಮೇಲೆ ಭಾರತೀಯ ಸೈನಿಕರು ಗುಂಡಿನ ದಾಳಿ ನಡೆಸಿದ್ದು, ಪ್ರಾಣ ಉಳಿಸಿಕೊಳ್ಳಲು ಉಗ್ರರು ಓಡಿ ಹೋಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಭಾರತೀಯ ಸೇನೆ ವಿಡಿಯೋ ಬಿಡುಗಡೆ ಮಾಡಿದ್ದು, ಸುಮಾರು 5 ರಿಂದ 6 ಉಗ್ರರು ಏಕಕಾಲದಲ್ಲಿ ಗಡಿಯೊಳಗೆ ನುಸುಳಲು ಯತ್ನಿಸಿದ್ದುನ್ನು ಕಾಣಬಹುದಾಗಿದೆ. ಈ ವೇಳೆ ಉಗ್ರರತ್ತ ಯೋಧರು ಗುಂಡು ಹಾರಿಸಿದ್ದು, ಗುಂಡಿನ ಸದ್ದು ಕೇಳುತ್ತಿದ್ದಂತೇ ಉಗ್ರರು ಅಲ್ಲಿಂದ ಕಾಲ್ಕಿತ್ತಿದ್ದಾರೆ.