Asianet Suvarna News Asianet Suvarna News

ಆರ್ಟಿಕಲ್ 370 ರದ್ದು: ಸಂವಿಧಾನ ಪ್ರತಿ, ಬಟ್ಟೆ ಹರಿದುಕೊಂಡು ಸಂಸದನ ವಿರೋಧ!

ಆರ್ಟಿಕಲ್ 370 ರದ್ದು| ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಇಲ್ಲ| ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಪ್ರಸ್ತಾವನೆ| ರಾಜ್ಯಸಭೆಯಲ್ಲಿ ತೀವ್ರ ಕೋಲಾಹಲ| ಸಂವಿಧಾನ ಪ್ರತಿ ಹರಿದು, ಕುರ್ತಾ ಹರಿದು ರಾಜ್ಯಸಭೆಯಲ್ಲಿ ಪ್ರತಿಭಟನೆ

PDP MPs tear their clothes in protest, moved out of Rajya Sabha for destroying Constitution
Author
Bangalore, First Published Aug 5, 2019, 1:08 PM IST

ನವದೆಹಲಿ[ಆ.05]: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ವಿಧಿ 35ಎ, 370ಯನ್ನು ರದ್ದುಗೊಳಿಸಲಾಗಿದೆ. ಈ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನ ಮಾನ ಹಿಂಪಡೆಯಲಾಗಿದೆ. ಕೇಂದ್ರದ ಈ ನಿರ್ಧಾರವನ್ನು ಹಲವರು ಸ್ವಾಗತಿಸಿದ್ದಾರೆ ಆದರೆ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್​ ಶಾ ಈ ಪ್ರಸ್ತಾವನೆಯನ್ನು ಮುಂದಿಡುತ್ತಿದ್ದಂತೆಯೇ ವಿರೋಧ ಪಕ್ಷಗಳು ತೀವ್ರ ಗದ್ದಲ ಮಾಡಿದ್ದಾರೆ. ಈ ವೇಳೆ ಓರ್ವ ಸಂಸದ ಸಂವಿಧಾನ ಪ್ರತಿಯನ್ನು ಹರಿದು ಹಾಕಿದರೆ, ಮತ್ತೊಬ್ಬ ಸಂಸದ ಬಟ್ಟೆ ಹರಿದು ಪ್ರತಿಭಟಿಸಿದ್ದಾರೆ.

ಆರ್ಟಿಕಲ್ 370 ರದ್ದು: ಮುಂದೇನು? ಜಮ್ಮು ಕಾಶ್ಮೀರದಲ್ಲಿ ಏನೆಲ್ಲಾ ಬದಲಾಗುತ್ತೆ?

ಹೌದು ಆರ್ಟಿಕಲ್ 370 ರದ್ದಾಗುತ್ತಿದ್ದಂತೆಯೇ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ತೀವ್ರ ವ್ಯಕ್ತಪಡಿಸಿದ್ದಾರೆ. ಪಿಡಿಪಿ ಸಂಸದ ನಾಜಿರ್​ ಅಹಮದ್​ ಲವಾಯ್​ ಮತ್ತು ಎಂಎಂ ಫಯಾಜ್​ ಸಂಸತ್​ ಆವರಣದಲ್ಲೇ ಪ್ರತಿಭಟನೆ ನಡೆಸಿದ್ದಾರೆ. ಸಂವಿಧಾನವನ್ನು ಪ್ರತಿ ಹರಿದು ಹಾಕಿದ್ದಲ್ಲದೇ, ಸಂಸದ ಫಯಾಜ್​​ ತಾನು ಧರಿಸಿದ್ದ ಕುರ್ತಾ ಹರಿದು ಪ್ರತಿಭಟಿಸಿದ್ದಾರೆ.

ಸಂಸದರ ಈ ವರ್ತನೆಗೆ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಇಬ್ಬರನ್ನೂ ಹೊರ ಕಳುಹಿಸಿದ್ದಾರೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು: ಕೇಂದ್ರದ ಐತಿಹಾಸಿಕ ನಿರ್ಣಯ

ಕಾಶ್ಮೀರದಲ್ಲಿ ಅಲ್ಲೋಲ ಕಲ್ಲೋಲ; ಮೋದಿ ಶಾ ತಂತ್ರವೇನು?

ಕಾಶ್ಮೀರದಲ್ಲಿ ಮಧ್ಯರಾತ್ರಿ ನಿಷೇಧಾಜ್ಞೆ, ಇಂಟರ್ನೆಟ್ ಸ್ಥಗಿತ, ಒಮರ್, ಮುಫ್ತಿಗೆ ದಿಗ್ಭಂಧನ!

Follow Us:
Download App:
  • android
  • ios