ನವದೆಹಲಿ, [ಫೆ, 26]: ಬಾಲಾಕೋಟ್ ಮೇಲೆ ಭಾರತೀಯ ವಾಯುಪಡೆ ನಡೆಸಿರುವ ಸರ್ಜಿಕಲ್ ದಾಳಿಗೆ ಉಗ್ರರ ನೆಲೆಗಳು ಪುಡಿ-ಪುಡಿಯಾಗಿವೆ.

ಉಗ್ರರು ಸಂಗ್ರಹಿಸಿಟ್ಟಿದ್ದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕ ವಸ್ತುಗಳನ್ನು ಭಾರತ ಉಡೀಸ್ ಮಾಡಿದ್ದು, ಪಾಕ್ ಗೆ ಮುಟ್ಟಿ ನೋಡಿಕೊಳ್ಳವಂತಾಗಿದೆ.

ಟೊಮ್ಯಾಟೋಗೆ ಬಾಂಬ್ ನಿಂದ ಉತ್ತರಿಸ್ತೇವೆ: ಜೋಕರ್ ಆದ ಪಾಕ್ ಪತ್ರಕರ್ತ!

ಇನ್ನು ಭಾರತದ ಏರ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪಾಕಿಸ್ತಾನದ ರಕ್ಷಣಾ ಪರ್ವೀಜ್​ ಕಟಕ್​ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಅಪಹಾಸ್ಯಕ್ಕೀಡಾಗಿದ್ದಾರೆ.

ಟ್ರೋಲ್ ಆಯ್ತು ಪಾಕಿಸ್ತಾನ, ಸಂಭ್ರಮಾಚರಣೆ ನಡುವೆ ನಗುವಿನ ಗುಳಿಗೆ

ನೀವ್ಯಾಕೆ ಭಾರತದ ಮೇಲೆ ಪ್ರತಿ ದಾಳಿ ಮಾಡಲಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ನಮ್ಮ ವಾಯುಸೇನೆ ಸಿದ್ಧವಾಗಿತ್ತು, ಆದ್ರೆ ಕತ್ತಲಾಗಿದ್ದರಿಂದ ದಾಳಿ ಸಾಧ್ಯವಾಗಲಿಲ್ಲ ಎನ್ನುವ ಉತ್ತರ ನೀಡಿ ನಗೆಪಾಟಲಿಗೀಡಾಗಿದ್ದಾರೆ.

ಒಂದಲ್ಲ, ಎರಡಲ್ಲ... ಯೋಧರ ದಾಳಿಗೆ ಬರೋಬ್ಬರಿ 25 ಜೈಷ್ ಕಮಾಂಡರ್‌ಗಳು ಮಟಾಶ್!

ಸೋಮವಾರ ತಡರಾತ್ರಿ ಭಾರತೀಯ ವಾಯುಸೇನೆ, ಸುಮಾರ 70 ಕಿ.ಮೀ ಪಾಕ್ ಗಡಿಯೊಳಗೆ ನುಗ್ಗಿ ಉಗ್ರರ ಕ್ಯಾಂಪ್ ಗಳ ಮೇಲೆ ಸಾವಿರ ಕೆ.ಜಿ.ಬಾಂಬ್ ಹಾಕಿ ಯಶಸ್ವಿಯಾಗಿ ಮರಳಿದೆ. ಈ ಮೂಲಕ ಪುಲ್ವಾಮಾ ದಾಳಿಯ ಸೇಡು ತೀರಿಸಿಕೊಂಡಂತಾಗಿದೆ.